ಕಾಫ್ ಸಿರಪ್ ದುರಂತ: ಕರ್ನಾಟಕದಲ್ಲೂ ನಡೆದಿದೆ ಸಿರಪ್ಗಳ ಲ್ಯಾಬ್ ಪರೀಕ್ಷೆ; ವರದಿಯಲ್ಲೇನಿದೆ?
ಮಧ್ಯಪ್ರದೇಶದಲ್ಲಿ ಸಂಭವಿಸಿದ ಕೆಮ್ಮಿನ ಸಿರಪ್ ದುರಂತದ ಬಳಿಕ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದ್ದು, ರಾಜ್ಯಾದ್ಯಂತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ, ರಾಜ್ಯದಲ್ಲಿ ಮಾರಾಟವಾಗುತ್ತಿರುವ ವಿವಿಧ ಕಂಪನಿಗಳ ಕೆಮ್ಮಿನ ಸಿರಪ್‌ಗಳನ್ನು ಆರೋಗ್ಯ ಇಲಾಖೆಯು ಪರೀಕ್ಷೆಗೆ ಒಳಪಡಿಸುತ್ತಿದೆ. ಈ ಪರೀಕ್ಷೆಗಳ ಪ್ರಾಥಮಿಕ ವರದಿಯ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ಮಹತ್ವದ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಬಳಕೆಯಲ್ಲಿರುವ ಕೆಮ್ಮಿನ ಸಿರಪ್‌ಗಳು ಎಷ್ಟು ಸುರಕ್ಷಿತ? ಸರ್ಕಾರದ ಮುಂದಿನ ನಡೆ ಏನು? ಈ ಕುರಿತಾದ ಸಚಿವರ ಸಂಪೂರ್ಣ ಹೇಳಿಕೆಗಾಗಿ ಈ ವಿಡಿಯೋವನ್ನು ವೀಕ್ಷಿಸಿ.
By : The Federal
Update: 2025-10-10 04:34 GMT