Wikipedia India: ಕಾನೂನು ಸಂಘರ್ಷದಲ್ಲಿ ವಿಕಿಪೀಡಿಯಾ; ʼಮುಕ್ತ ವಿಶ್ವಕೋಶಕ್ಕೆʼ ಏನಾಯಿತು?

Update: 2024-11-05 11:08 GMT
ವಿಕಿಪೀಡಿಯಾ ಪ್ರಾನಿಧಿಕಿ ಚಿತ್ರ

ವಿಕಿಪೀಡಿಯದ ಸೈಟ್‌ ವಿರುದ್ಧ 'ಪಕ್ಷಪಾತ ಮತ್ತು ನಿಖರತೆಗಳ ಕೊತೆ' ದೂರುಗಳ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ನೋಟಿಸ್ ನೀಡಿದೆ. ಇದೇ ವೇಲೆ ವೆಬ್ಸೈಟ್ ಅನ್ನು ವಿಶ್ವಕೋಶ ಎಂದು ಕರೆಯವುದು ಸರಿಯೇ ಎಂಬುದಾಗಿ ದೆಹಲಿ ಹೈಕೋರ್ಟ್ ಪ್ರಶ್ನಿಸಿದೆ.

ಮಾಹಿತಿಗಳ ಕಣಜ ಎಂದೇ ಕರೆಯಲಾಗುವ ʼವಿಕಿಪೀಡಿಯಾʼ ವಿರುದ್ಧ ಸಾರ್ವಜನಿಕರಿಂದ ಹಾಗೂ ಸಾಂಸ್ಥಿಕವಾಗಿ ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಂಗಳವಾರ (ನವೆಂಬರ್ 5ರಂದು) ಅಧಿಕೃತ ನೋಟಿಸ್ ಜಾರಿ ಮಾಡಿದೆ.  ಈ ಸೈಟ್‌ ಜನರಿಂದಲೇ ನಿಯಂತ್ರಿಗೊಳ್ಳುವುದರಿಂದ 'ಪಕ್ಷಪಾತ ಧೋರಣೆ' ಮತ್ತು 'ನಿಖರತೆಗಳ ಕೊರತೆ' ಬಗ್ಗೆ ಕಳವಳ ವ್ಯಕ್ತಪಡಿಸಿದ ಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ. ವಿಕಿಪೀಡಿಯಾ ವಿರುದ್ಧ ಡೆಲ್ಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆಯೊಂದು ದಾಖಲಾಗಿದೆ. ಅದನ್ನು ವಿಚಾರಣೆ ನಡೆಸುವ ವೇಳೆ, ಸೈಟ್ ತನ್ನನ್ನು ತಾನು ವಿಶ್ವಕೋಶ ಎಂದು ಹೇಗೆ ಕರೆದುಕೊಳ್ಳುತ್ತದೆ ಎಂದು ಪ್ರಶ್ನಿಸಿತ್ತು.

ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಲಾಭರಹಿತ ದತ್ತಿ ಸಂಸ್ಥೆಯಾಗಿರುವ ʼವಿಕಿಪೀಡಿಯಾ ಫೌಂಡೇಶನ್ʼ ವಿಕಿಪೀಡಿಯಾದ ಮಾಲೀಕತ್ವ ಹೊಂದಿದೆ. ಈ ಸಂಸ್ಥೆಗೆ ನೀಡಿರುವ ನೋಟಿಸ್‌ನಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಹಲವಾರು ಪ್ರಶ್ನೆಗಳನ್ನು ಕೇಳಿದೆ. ಸೈಟ್‌ನ ಸಂಪಾದಕೀಯ ವಿಭಾಗವನ್ನು ಆಯ್ದ ಗುಂಪುಗಳು ನಿಯಂತ್ರಣ ಮಾಡುವ ಕಾರಣ ಅದರ ʼನಿಷ್ಪಕ್ಷಪಾತʼ ಮಾಹಿತಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಹೇಳಿದೆ. ಅಲ್ಲದೆ, ವಿಕಿಪೀಡಿಯವನ್ನು 'ಮಧ್ಯವರ್ತಿ' ಎಂಬುದರ ಬದಲಾಗ 'ಪ್ರಕಾಶಕ' ಎಂದು ಏಕೆ ಪರಿಗಣಿಸಬಾರದು ಎಂದು ಪ್ರಶ್ನಿಸಿದೆ.

ವಿಕಿಪೀಡಿಯ ತನ್ನನ್ನು ತಾನು ಉಚಿತ ಆನ್‌ಲೈನ್ ವಿಶ್ವಕೋಶ‌ ಎಂದು ಹೇಳಿಕೊಳ್ಳುತ್ತಿದೆ. ಆಸಕ್ತ ವ್ಯಕ್ತಿಗಳು ಹಾಗೂ ವಿಷಯಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಬಗ್ಗೆ ಪುಟಗಳನ್ನು ರಚಿಸಲು ಮತ್ತು ಸಂಪಾದಿಸಲು ಇಲ್ಲಿ ಅವಕಾಶ ಇದೆ.

ವಿಕಿಮೀಡಿಯ ವಿರುದ್ಧ ಎಎನ್ಐ ಕಾನೂನು ಹೋರಾಟ

ವಿಕಿಮೀಡಿಯಾ ಫೌಂಡೇಶನ್ ವಿರುದ್ಧ ಸುದ್ದಿ ಸಂಸ್ಥೆ ಏಷ್ಯನ್ ನ್ಯೂಸ್ ಇಂಟರ್‌ನ್ಯಾಷನಲ್‌ (ಎಎನ್ಐ) ದಾಖಲಿಸಿರುವ ಮಾನನಷ್ಟ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್ ವಿಚಾರಣೆ ನಡೆಸುತ್ತಿರುವುದರಿಂದ ವಿಕಿಮೀಡಿಯಾ ಫೌಂಡೇಶನ್ ಪ್ರಸ್ತುತ ಭಾರತದಲ್ಲಿ ಕಾನೂನು ಹೋರಾಟದಲ್ಲಿ ಸಿಲುಕಿಕೊಂಡಂತಾಗಿದೆ.

ವಿಕಿಪೀಡಿಯಾ ಪುಟದಲ್ಲಿ ಎನ್‌ಐಎ ಅನ್ನು 'ಸರ್ಕಾರದ ಸಾಧನ ' ಎಂದು ಬರೆಯಲಾಗಿದೆ . ಇದನ್ನು ತೆಗೆದುಹಾಕುವಂತೆ ಒತ್ತಾಯಿಸಿ ಮಾನಹಾನಿಕರ ದೂರು ದಾಖಲಿಸಿದೆ ಎಎನ್‌ಐ. ಅಲ್ಲದೆ, ಎಎನ್‌ಐ ವಿಕಿಪೀಡಿಯಾ ಪುಟದಲ್ಲಿ ವಿವರಗಳನ್ನು ಸಂಪಾದನೆ ಮಾಡಿದ ಮೂವರು ವ್ಯಕ್ತಿಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಬೇಕೆಂದು ಫೌಂಡೇಶನ್ ಹೇಳಿದೆ.

ನವೆಂಬರ್ 1ರಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಅವರು ವಿಕಿಪೀಡಿಯಾ ಪ್ರತಿನಿಧಿಗಳನ್ನು "ಮುಕ್ತ ವಿಶ್ವಕೋಶ" ಎಂದು ಕರೆಯುವುದನ್ನು ಪ್ರಶ್ನಿಸಿದ್ದಾರೆ. ತಾನು 'ಮಧ್ಯವರ್ತಿ' ಎಂದು ಹೇಳಿಕೊಳ್ಳುವ ವಿಕಿಪೀಡಿಯಾ ಮಾಹಿತಿಯ 'ಪ್ರಕಾಶಕ' ಎಂಬುದನ್ನು ಸಮರ್ಥಿಸಿಕೊಳ್ಳುತ್ತಿದೆ. ಹಾಗಾದರೆ ಪ್ರಕಾಶಕರ ಮಾಹಿತಿ ಯಾಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಬಾರ್ ಅಂಡ್ ಬೆಂಚ್ ವರದಿ ಪ್ರಕಾರ, ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಅವರು, ನೀವು ಮಧ್ಯವರ್ತಿಯಾಗಿದ್ದರೆ ನೀವು ಯಾಕೆ ಸಂಪಾದನೆ ಬಗ್ಗೆ ತಲೆಕೆಡಿಸಿಕೊಳ್ಳುತ್ತೀರಿ? ಬೇರೆ ಯಾರಾದರೂ ಸಂಪಾದಿಸಿದ್ದರೆ ಮತ್ತು ಆ ಸೇರ್ಪಡೆಗೆ ಆಧಾರವಿಲ್ಲದಿದ್ದರೆ ಹೇಗೆ ಸಮರ್ಥನೆ ಮಾಡಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ನ್ಯಾಯಾಲಯವು ವಿಕಿಮೀಡಿಯವನ್ನ ವಿಶ್ವಕೋಶವೇ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದೆ. . ವಿಕಿಪೀಡಿಯಾ ಒಂದು ವಿಶ್ವಕೋಶ ಎಂದು ಹೇಳಿಕೊಂಡಿರುವುದೇ ʼಅಪಾಯಕಾರಿʼ ಎಂದು ಅದು ಹೇಳಿಕೆ. ವಿಕಿಮೀಡಿಯಾ ಹೇಳುವುದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಹೇಳಿದೆ.

ವಿಶ್ವಕೋಶಗಳು ಸಾಮಾನ್ಯವಾಗಿ ಸತ್ಯಾಸತ್ಯತೆಯಿಂದ ಕೂಡಿರುತ್ತದೆ. ಅದಕ್ಕೆ ಎನ್‌ಸೈಕ್ಲೊಪೀಡಿಯಾ ಬ್ರಿಟಾನಿಕಾದಂತಹ ಪ್ರಕಟಣೆಗಳೇ ಉದಾಹರಣೆ ಎಂದು ಕೋರ್ಟ್‌ ಹೇಳಿತ್ತು.

ವಿಶ್ವಕೋಶ ಎಂದು ಹೇಳಿಕೊಂಡ ಬಳಿಕ ಪ್ರಕಟಗೊಂಡಿರುವ ವಿಷಯಗಳನ್ನು ಪರಿಶೀಲಿಸದೆ ಇರಬಾರದು. ʼಮಿಸ್ಟರ್ ಎಕ್ಸ್ʼ ಮತ್ತು ʼಮಿಸ್ಟರ್ ವೈʼ ಹೇಳಿದ್ದನ್ನು ಯಾಕೆ ಒಪ್ಪಿಕೊಳ್ಳಬೇಕು. ʼವಿಕಿಪೀಡಿಯಾ. ಉಚಿತ ವಿಶ್ವಕೋಶ, ಅದು ನಿಮ್ಮ ಮೊದಲ ವಾಕ್ಯ ಹಾಗಾದರೆ ಈ ವಾಕ್ಯ ಅರ್ಥವೇನು ಎಂಬುದಾಗಿ ಕೋರ್ಟ್‌ ಕೇಳಿದೆ. ವಿಶ್ವ ಕೋಶ ಎಂದು ಹೇಳಿಕೊಂಡು ಅದನ್ನು ನಿರ್ವಹಿಸುವ ಜವಾಬ್ದಾರಿಯನ್ನು ವಿಕಿಪೀಡಿಯ ಇತರ ಜನರಿಗೆ ಬಿಟ್ಟಿರುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳು ವಿಚಾರಣೆ ವೇಳೆ ಹೇಳಿದ್ದರು.

ವಿಕಿಪೀಡಿಯದ ಪ್ರತಿಕ್ರಿಯೆ

ನ್ಯಾಯಾಲಯದ ಕಾಳಜಿಗೆ ಪ್ರತಿಕ್ರಿಯೆಯಾಗಿ, ವಿಕಿಪೀಡಿಯದ ಕಾನೂನು ಪ್ರತಿನಿಧಿಗಳು ತಮ್ಮ ಸಮರ್ಥನೆಗಳನ್ನು ನೀಡಿದ್ದಾರೆ. ವಿಕಿಪೀಡಿಯಾದಲ್ಲಿ ವಿಷಯಗಳನ್ನು ನವೀಕರಿಸುವಾಗ ಬಳಕೆದಾರರು ಅನುಸರಿಸಬೇಕಾದ ಕಾನೂನು ಮಾರ್ಗಸೂಚಿಗಳಿವೆ ಎಂದಿದ್ದಾರೆ. ಬಳಕೆದಾರರ ಕೊಡುಗೆಗಳನ್ನು ನಿಯಂತ್ರಿಸಲು ಮತ್ತು ಕಾನೂನು ಪಾಲನೆ ಮಾಡಲು ಕೆಲವೊಂದು ನಿಯಮಗಳನ್ನು ರೂಪಿಸಿದೆ ಎಂದು ವಿಕಿಪೀಡಿಯ ಪ್ರತಿನಿಧಿಸುವ ಹಿರಿಯ ವಕೀಲ ಜಯಂತ್ ಮೆಹ್ತಾ ಕೋರ್ಟ್‌ ಮುಂದೆ ಹೇಳಿದ್ದಾರೆ.

ಎಎನ್ಐ ಪರವಾಗಿ ಹಾಜರಾದ ವಕೀಲ ಸಿದ್ಧಾಂತ್ ಕುಮಾರ್, ಎನ್‌ಎನ್‌ಐ ಬಗ್ಗೆ ಬರೆದಿರುವ ಪುಟದಲ್ಲಿ ಹೆಚ್ಚಿನ ಸಂಪಾದನೆಗಳನ್ನು ಅನುಮತಿಸಲಾಗುತ್ತಿಲ್ಲ. ಸುದ್ದಿ ಸಂಸ್ಥೆ ನೀಡಿದ ಸ್ಪಷ್ಟೀಕರಣಗಳನ್ನು ಪರಿಗಣಿಸಲಾಗುತ್ತಿಲ್ಲ ಎಂದು ಹೇಳಿದ್ದಾರೆ. "ನನ್ನ ಬಗ್ಗೆ ಒಂದೇ ಒಂದು ಸಕಾರಾತ್ಮಕ ಪದವನ್ನು ಸೇರಿಸುತ್ತಿಲ್ಲ. ಸಂಪಾದಕರ ಗುಂಪು ಇದಕ್ಕೆ ಅವಕಾಶ ನೀಡುವುದಿಲ್ಲ" ಎಂದು ಕುಮಾರ್ ಹೇಳಿದ್ದರು .

ಮಾಹಿತಿಯು ಅನ್ಯ ಮೂಲಗಳಿಂದ ಬಂದಿದೆ ಎಂದು ವೆಬ್‌ಸೈಟ್‌ನಲ್ಲಿ ಬಳಕೆದಾರರಿಗೆ ಎಚ್ಚರಿಕೆ ನೀಡಲಾಗಿದೆ ಎಂಬುದನ್ನೂ ಮೆಹ್ತಾ ಗಮನಸೆಳೆದರು. "ನಾನು ಹೇಳುವುದು ಸತ್ಯ ಎಂದು ವಿಕಿಪೀಡಿಯ ಎಲ್ಲಿಯೂ ಹೇಳುವುದಿಲ್ಲ" ಎಂದು ಮೆಹ್ತಾ ಕೋರ್ಟ್‌ನಲ್ಲಿ ವಾದ ಮಾಡಿದ್ದರು.

ಆದರೆ ಈ ವಾದವು ಕೋರ್ಟ್‌ಗೆ ಸಮಾಧಾನ ತರಲಿಲ್ಲ., ಕೇವಲ ಹಕ್ಕು ನಿರಾಕರಣೆಯು ವಿಕಿಪೀಡಿಯವನ್ನು ಅದರ ಜವಾಬ್ದಾರಿಯಿಂದ ಸಂಪೂರ್ಣವಾಗಿ ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿತು.

2000 ರ ದಶಕದ ಆರಂಭದಲ್ಲಿ ಪ್ರಾರಂಭವಾದ ವಿಕಿಪೀಡಿಯವನ್ನು ಜ್ಞಾನ ಮತ್ತು ಮಾಹಿತಿಯ ಹುಡುಕಾಟ ಎಂದು ಹೇಳಲಾಗುತ್ತದೆ. ಕಳೆದ ಎರಡು ದಶಕಗಳಲ್ಲಿ ಪ್ಲಾಟ್ಫಾರ್ಮ್ ಗಮನಾರ್ಹವಾಗಿ ಬೆಳೆದಿದೆ. ಇಂದು 300 ಕ್ಕೂ ಹೆಚ್ಚು ಭಾಷೆಗಳಲ್ಲಿ 56 ಮಿಲಿಯನ್ ಲೇಖನಗಳನ್ನುಅದು ಹೊಂದಿದೆ. 

Tags:    

Similar News