ಕಾರ್ಪೊರೇಟ್‌ ಇಂಡಿಯಕ್ಕೆ ಬೇಕಿರುವುದು ಹಣಕಾಸು ಕ್ರೋಡೀಕರಣ, ಜಿಎಸ್ಟಿ ಸುಧಾರಣೆ, ಹೆಚ್ಚಿನ ಕ್ಯಾಪೆಕ್ಸ್

ಕಾರ್ಪೊರೇಟ್ ಇಂಡಿಯ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಉಚಿತಗಳನ್ನು ತಪ್ಪಿಸಬೇಕೆಂದು ಆಶಿಸು ತ್ತದೆ; ಜಿಎಸ್‌ಟಿಯನ್ನು ಮೂರು ದರದ ರಚನೆಗೆ ಪರಿವರ್ತಿಸಲು ಬಯಸುತ್ತದೆ.

Update: 2024-07-03 09:47 GMT
ಪಿಯೂಷ್‌ ಗೋಯಲ್‌ ಅವರೊಂದಿಗೆ ನಿರ್ಮಲಾ ಸೀತಾರಾಮನ್

ಕೇಂದ್ರ 2019 ರಲ್ಲಿ ಪರಿಚಯಿಸಿದ ಗಣನೀಯ ಕಾರ್ಪೊರೇಟ್ ತೆರಿಗೆ ಕಡಿತದ ಹೊರತಾಗಿಯೂ ಕಾರ್ಪೊರೇಟ್ ಇಂಡಿಯಾದ ನೀರಸ ಹೂಡಿಕೆ ಪ್ರತಿಕ್ರಿಯೆ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಗಾಗ ನಿರಾಶೆ ವ್ಯಕ್ತಪಡಿಸಿದ್ದಾರೆ. ಆದರೆ, ಸರ್ಕಾರ ಹಣಕಾಸಿನ ಕ್ರೋಡೀಕರಣ ಹೆಚ್ಚಿಸಬೇಕು, ಜಿಎಸ್‌ಟಿ ವ್ಯವಸ್ಥೆ ಸರಳಗೊಳಿಸಬೇಕು ಮತ್ತು ಹೆಚ್ಚು ಪರಿಣಾಮಕಾರಿ ನಿಯಂತ್ರಣ ಚೌಕಟ್ಟನ್ನು ಸ್ಥಾಪಿಸ ಬೇಕು ಎಂದು ವ್ಯಾಪಾರ- ಉದ್ಯಮ ಕ್ಷೇತ್ರ ವಾದಿಸುತ್ತದೆ.

ಈ ವರ್ಷದ ಕೇಂದ್ರ ಆಯವ್ಯಯದಲ್ಲಿ ಕಾರ್ಪೊರೇಟ್ ಇಂಡಿಯದ ಅಪೇಕ್ಷೆಯ ಪಟ್ಟಿಯಲ್ಲಿರುವುದು- ಮುಂಬರುವ ವರ್ಷಗಳಲ್ಲಿ ಹಣಕಾಸಿನ ಕೊರತೆಯ ಇಳಿಮುಖ ಪಥದ ಮುಂದುವರಿಕೆಗೆ ಹಣಕಾಸು ವಿವೇಚನೆ ಮತ್ತು ಬಡ್ಡಿದರಗಳ ನಿಯಂತ್ರಣ. ಅದೇ ಸಮಯದಲ್ಲಿ ಸರ್ಕಾರವು ಮೂಲಸೌಕರ್ಯದ ಹೆಚ್ಚಳ ಮತ್ತು ಖಾಸಗಿ ಹೂಡಿಕೆಗಳನ್ನುಕೂಡಿಸಲು ಅಧಿಕ ಬಂಡವಾಳ ವೆಚ್ಚವನ್ನು ನಿರ್ವಹಿಸಬೇಕೆಂದು ಉದ್ಯಮ ಬಯಸುತ್ತದೆ.

ವಿತ್ತೀಯ ಕೊರತೆ: ಆರ್ಥಿಕ ವರ್ಷ 2024 ರ ಹಣಕಾಸಿನ ಕೊರತೆಯ ಗುರಿಯನ್ನು ಜಿಡಿಪಿಯ ಶೇ. 5.6 ಕ್ಕೆ ಈಗಾಗಲೇ ಪರಿಷ್ಕರಿಸಲಾಗಿದೆ. ಇದು ಆರಂಭಿಕ ಅಂದಾಜು ಶೇ.5.8 ಕ್ಕಿಂತ ಕಡಿಮೆ. ಈ ಸುಧಾರಣೆಗೆ ನಿರೀಕ್ಷೆಗಿಂತ ಹೆಚ್ಚಿನ ತೆರಿಗೆ ಸಂಗ್ರಹಣೆಗೆ ಕಾರಣ. ಆರ್ಥಿಕ ವರ್ಷ 2025ರಲ್ಲಿ ಹಣಕಾಸಿನ ಕೊರತೆ ಗುರಿ ಜಿಡಿಪಿಯ ಶೇ.5.1ಕ್ಕಿಂತ ಕಡಿಮೆಯಾಗುವ ನಿರೀಕ್ಷೆಯಿದೆ.

ಆದರೆ, ಅತಿಯಾದ ಹಣಕಾಸಿನ ಬಲವರ್ಧನೆಯು ಬೆಳವಣಿಗೆ ಆಧಾರಿತ ವೆಚ್ಚವನ್ನು ನಿರ್ಬಂಧಿಸಬಹುದು ಎಂಬ ಆತಂಕ ಇರಬಹುದು. ಕ್ಯಾಪೆಕ್ಸ್ ನ್ನು ಕಾಯ್ದುಕೊಳ್ಳುತ್ತಲೇ ಕೊರತೆಯನ್ನು ಕ್ರಮೇಣ ಕಡಿಮೆ ಮಾಡಲು ಸಮತೋಲಿತ ವಿಧಾನದ ಅಗತ್ಯವಿದೆ.

ಜನಪ್ರಿಯ ಕ್ರಮಗಳು: ವಿಧಾನಸಭೆ ಚುನಾವಣೆಗೆ ಸರ್ಕಾರ ಘೋಷಿಸುವ ಜನಪ್ರಿಯ ಕಾರ್ಯಕ್ರಮಗಳಿಂದ ಹಣಕಾಸಿನ ಬಲವರ್ಧನೆ ಹಳಿ ತಪ್ಪಿಸಬಹುದಾಗಿದ್ದು, ಅವುಗಳನ್ನು ತಪ್ಪಿಸಬೇಕೆಂದು ಕಾರ್ಪೊರೇಟ್ ಇಂಡಿಯಾ ಬಯಸುತ್ತದೆ. ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ ಟಿ)ಯನ್ನು ಮೂರು ದರ ವ್ಯವಸ್ಥೆ( ಅಗತ್ಯವಸ್ತುಗಳಿಗೆ ಕಡಿಮೆ ದರ, ಹೆಚ್ಚಿನ ಸರಕುಗಳಿಗೆ ಪ್ರಮಾಣಿತ ದರ ಮತ್ತು ಐಷಾರಾಮಿ/ನ್ಯೂನ ಸರಕುಗಳಿಗೆ ಹೆಚ್ಚಿನ ದರ) ಯಾಗಿ ಪರಿವರ್ತಿಸಬೇಕೆಂದು ಬಯಸುತ್ತದೆ. 

ಕಾರ್ಪೊರೇಟ್‌ ಇಂಡಿಯ ಬಂಡವಾಳ ವೆಚ್ಚದ (ಕ್ಯಾಪೆಕ್ಸ್) ಮೇಲೆ ಕನಿಷ್ಠ ಶೇ. 20 ಹೆಚ್ಚಳದೊಂದಿಗೆ ಸುಮಾರು 12 ಲಕ್ಷ ಕೋಟಿ ರೂ.ಗಳನ್ನು ಗುರಿಯಾಗಿರಿಸಿಕೊಳ್ಳಬೇಕೆಂದು ಬಯಸುತ್ತದೆ. ಇದು ಕೋವಿಡ್‌ ಪೂರ್ವ ಬೆಳವಣಿಗೆ ದರವನ್ನು ಮೀರಿಸುತ್ತದೆ. ಆರ್ಥಿಕ ವರ್ಷ 2024 ರಲ್ಲಿ ಮೂಲಸೌಕರ್ಯ ಯೋಜನೆಗಳಿಗೆ ಸರ್ಕಾರದ ಬಂಡವಾಳ ವೆಚ್ಚ 9.49 ಲಕ್ಷ ಕೋಟಿ ರೂ. ಆಗಿತ್ತು.

ಹೂಡಿಕೆ ಕೊರತೆ: ಆದರೆ, ಅನುಕೂಲಕರ ತೆರಿಗೆ ಪರಿಸರ ಇದ್ದರೂ, ಬಂಡವಾಳ ಯೋಜನೆಗಳಲ್ಲಿ ಕಾರ್ಪೊರೇಟ್ ಇಂಡಿಯದ ಹೂಡಿಕೆ ಕೊರತೆಯಿದೆ ಎಂದು ವಿಶ್ಲೇಷಕರು ವಾದಿಸುತ್ತಾರೆ. ಲಾಭವನ್ನು ಕಟ್ಟಡ, ಸ್ಥಾವರ ಮತ್ತು ಯಂತ್ರೋಪಕರಣಗಳಿಗೆ ಹರಿಸುವ ಬದಲು, ಷೇರುದಾರರಿಗೆ ಲಾಭಾಂಶ ನೀಡಿವೆ ಅಥವಾ ಹಣಕಾಸು ಸಾಧನಗಳಲ್ಲಿ ಹೂಡಿಕೆ ಮಾಡಿವೆ.

ಹಣಕಾಸೇತರ ಖಾಸಗಿ ಕಂಪನಿಗಳ ಆರ್ಥಿಕ ಸ್ಥಿತಿಯು ತೆರಿಗೆ ನಂತರದ ಕಡಿತಗಳಿಂದ ಸುಧಾರಿಸಿದೆ. ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಲಾಭ 4,00,00 ಕೋಟಿ- 5,00,000 ಕೋಟಿ ರೂ.ಗೆ ಏರಿಕೆಯಾಗಿದೆ. ಹಿಂದಿನ ಅವಧಿಗಳಲ್ಲಿಇದು 1,00,00 ಕೋಟಿ-2,00,000 ಕೋಟಿ ರೂ. ಇತ್ತು.

ಆದರೆ, ಇದು ಬಂಡವಾಳ ವೆಚ್ಚ ಹೆಚ್ಚಳ (ಕ್ಯಾಪೆಕ್ಸ್)ವಾಗಿ ಪರಿವರ್ತನೆಯಾಗಿಲ್ಲ. ತೆರಿಗೆಯ ನಂತರದ ಲಾಭಾಂಶ ಆರ್ಥಿಕ ವರ್ಷ 22 ರಲ್ಲಿ ಶೇ.63ಕ್ಕೆ ತಲುಪಿತು. ಇದು ಒಂದು ದಶಕದಲ್ಲೇ ಅತ್ಯಧಿಕ. ಆದರೆ, ಅದೇ ಆರ್ಥಿಕ ವರ್ಷದಲ್ಲಿ ಸಾಲ ಮತ್ತು ಈಕ್ವಿಟಿ ಅನುಪಾತ 0.71 ಕ್ಕೆ ತಲುಪಿದೆ.

ಕಾರ್ಪೊರೇಟ್ ತೆರಿಗೆ: ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸಲು ಸರ್ಕಾರ 2019 ರಲ್ಲಿ ಕಾರ್ಪೊರೇಟ್ ತೆರಿಗೆ ದರಗಳನ್ನು ಕಡಿತಗೊಳಿಸಿತು. ಶಾಸನಬದ್ಧ ಕಾರ್ಪೊರೇಟ್ ತೆರಿಗೆ ದರವನ್ನು ಶೇ. 30 ರಿಂದ ಶೇ.22ಕ್ಕೆ ಇಳಿಸಿತು. ಇದು ಏಷ್ಯಾದ ಇನ್ನಿತರ ರಾಷ್ಟ್ರಗಳಿಗೆ ಹೋಲಿಸಿದರೆ, ದೇಶವನ್ನು ಸ್ಪರ್ಧಾತ್ಮಕಗೊಳಿಸಿತು.

ಮ್ಯಾನ್ಮಾರ್‌ ನಲ್ಲಿ ಪ್ರಸ್ತುತ ಕಾರ್ಪೊರೇಟ್ ತೆರಿಗೆ ದರ ಶೇ. 25, ಮಲೇಷ್ಯಾದಲ್ಲಿ ಶೇ. 24, ಇಂಡೋನೇಷ್ಯಾ ಮತ್ತು ದಕ್ಷಿಣ ಕೊರಿಯಾದಲ್ಲಿ ಶೇ.2 % ಮತ್ತು ಶ್ರೀಲಂಕಾದಲ್ಲಿ ಶೇ. 28 ಇದೆ. ಚೀನಾದ ಕಂಪನಿಗಳು ಕೂಡ ಶೇ.25 ರಷ್ಟು ಹೆಚ್ಚು ತೆರಿಗೆ ನೀಡುತ್ತಿವೆ; ಬ್ರೆಜಿಲ್‌ನಲ್ಲಿ ಇದು ಶೇ.34 ಇದೆ. ಜಾಗತಿಕವಾಗಿ ಸರಾಸರಿ ಕಾರ್ಪೊರೇಟ್ ತೆರಿಗೆ ಶೇ. 23.79 ಮತ್ತು ಏಷ್ಯಾದ ಸರಾಸರಿ ಶೇ. 21.09 ಇದೆ.

ಗ್ರಾಹಕ ಬೇಡಿಕೆಯಲ್ಲಿ  ನಿಧಾನಗತಿ: ಇದಕ್ಕೆ ಪ್ರಮುಖ ಕಾರಣ, ಗ್ರಾಹಕರ ಬೇಡಿಕೆಯಲ್ಲಿನ ನಿಧಾನಗತಿ. ಕೋವಿಡ್‌ ಗೆ ಮುನ್ನ ಆರಂಭಗೊಂಡ ಬೇಡಿಕೆ ಕುಸಿತ, ಕೋವಿಡ್‌ ಸಮಯದಲ್ಲಿ ಹದಗೆಟ್ಟಿತು. ಬೇಡಿಕೆ ಕುಸಿತದಿಂದ ಕಂಪನಿಗಳು ತಮ್ಮ ಲಾಭವನ್ನು ಸಾಲ ಕಡಿಮೆ ಮಾಡಲು ಮತ್ತು ಕಾರ್ಯಾಚರಣೆಯನ್ನು ವಿಸ್ತರಿಸುವ ಬದಲು ಗಳಿಕೆಯನ್ನು ಉಳಿಸಿಕೊಳ್ಳಲು ಮುಂದಾದವು.

ಖಾಸಗಿ ಅಂತಿಮ ಗ್ರಾಹಕ ವೆಚ್ಚ (ಪಿಎಫ್‌ಸಿಇ)ದ ಬೆಳವಣಿಗೆ ಆರ್ಥಿಕ ವರ್ಷ 23 ರಲ್ಲಿ ಶೇ.7.5 ರಿಂದ ಆರ್ಥಿಕ ವರ್ಷ 24 ರಲ್ಲಿ ಶೇ.4.4 ಕ್ಕೆ ಕುಸಿಯುತ್ತದೆ ಎಂದು ಅಂದಾಜಿಸಲಾಗಿದೆ. ಇದು ಗ್ರಾಹಕ ವೆಚ್ಚದಲ್ಲಿ ಗಮನಾರ್ಹ ನಿಧಾನಗತಿಯನ್ನು ಸೂಚಿಸುತ್ತದೆ. ಸರ್ಕಾರದ ಅಂತಿಮ ಬಳಕೆಯ ವೆಚ್ಚದಲ್ಲಿನ ನಿಧಾನಗತಿಯ ಬೆಳವಣಿಗೆಯಿಂದ ಆರ್ಥಿಕ ವರ್ಷ 2024 ರ ದ್ವಿತೀಯಾರ್ಧದಲ್ಲಿ ಶೇ. 5.1 ರಿಂದ ಶೇ. 3.1ಕ್ಕೆ ನಿಧಾನವಾಗುವ ನಿರೀಕ್ಷೆಯಿದೆ. 

ಸೇವಾ ವಲಯದಲ್ಲಿ ಮಧ್ಯಮ ಬೆಳವಣಿಗೆ ಕಂಡುಬಂದಿದೆ. ವ್ಯಾಪಾರ, ಹೋಟೆಲ್‌ಗಳು, ಸಾರಿಗೆ ಮತ್ತು ಸಂವಹನ ಸೇವೆಗಳು ಹಿಂದಿನ ವರ್ಷದ ಶೇ.14 ಕ್ಕೆ ಹೋಲಿಸಿದರೆ ಆರ್ಥಿಕ ವರ್ಷ 2024 ರಲ್ಲಿ ಶೇ.6.3 ರ ನಿಧಾನ ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ. 

ಕಾರ್ಪೊರೇಟ್ ಆಕಾಂಕ್ಷೆ: ಕೇಂದ್ರ ಬಜೆಟ್‌ಗೆ ಕಾರ್ಪೊರೇಟ್ ಇಂಡಿಯದ ಆಶಯ ಪಟ್ಟಿ ಇಲ್ಲಿದೆ: 

ಹಣಕಾಸಿನ ಕ್ರೋಡೀಕರಣ ಮತ್ತು ಆರ್ಥಿಕ ಬೆಳವಣಿಗೆ : ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುವಾಗ ಹಣಕಾಸಿನ ಕ್ರೋಡೀಕರಣವನ್ನು ಕಾಪಾಡಿಕೊಳ್ಳಬೇಕು.ಆರ್ಥಿಕ ವರ್ಷ 24 ರಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಸುಮಾರು ಶೇ. 5.9ರಲ್ಲಿ ಮತ್ತು ಆರ್ಥಿಕ ವರ್ಷ 25ಕ್ಕೆ ಶೇ. 5.4ಕ್ಕೆ ಇಳಿಸುವ ಗುರಿ ಹೊಂದಿದೆ.

ಜಿಎಸ್‌ಟಿ ಸುಧಾರಣೆ: ಅಗತ್ಯವಸ್ತುಗಳಿಗೆ ಕಡಿಮೆ ದರ, ಹೆಚ್ಚಿನ ಸರಕುಗಳಿಗೆ ಪ್ರಮಾಣಿತ ದರ ಮತ್ತು ಐಷಾರಾಮಿ/ನ್ಯೂನ(ಡಿಮೆರಿಟ್) ಸರಕುಗಳಿಗೆ ಹೆಚ್ಚಿನ ದರವಿರುವ ಮೂರು ದರ ರಚನೆಗೆ ಪರಿವರ್ತನೆ.

ಬಂಡವಾಳ ವೆಚ್ಚದ ಗಮನ:  ಕೋವಿಡ್‌ ಪೂರ್ವ ಬೆಳವಣಿಗೆ ದರವನ್ನು ಮೀರಿಸುವ ಮೂಲಕ ಕನಿಷ್ಠ ಶೇ. 20 ಹೆಚ್ಚಳದೊಂದಿಗೆ ಸುಮಾರು 12 ಲಕ್ಷ ಕೋಟಿ ರೂ. ಬಂಡವಾಳ ವೆಚ್ಚದ ಮೇಲೆ ಗಮನ.

ಕಡಿಮೆ ವೆಚ್ಚದ ವಸತಿಗೆ ಬೆಂಬಲ: ಪ್ರಸ್ತುತ 25 ಲಕ್ಷ ರೂ.ದ ಮಿತಿಯಿಂದ 35 ಲಕ್ಷ ರೂ.ವರೆಗೆ ವಸತಿ ವೆಚ್ಚ ಸರಿದೂಗಿಸಲು ಬಡ್ಡಿ ಉಪದಾನ ಯೋಜನೆಯ ವಿಸ್ತರಣೆ.

ಅಧಿಕ ಕಾರ್ಮಿಕರು ಅಗತ್ಯವಿರುವ ವಲಯಗಳಿಗೆ ಉತ್ತೇಜನ: ವಸ್ತ್ರ, ಪಾದರಕ್ಷೆ, ಆಟಿಕೆ ಮತ್ತು ಪ್ರವಾಸೋದ್ಯಮದಂತಹ ವಲಯಗಳನ್ನು ಪ್ರೋತ್ಸಾಹಿಸಲು ನಗರ ಉದ್ಯೋಗ ಖಾತರಿ ಕಾರ್ಯಕ್ರಮ ಪ್ರಾರಂಭಿಸುವುದು.

ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ:  ಪ್ರಧಾನ ಮಂತ್ರಿ ಆವಾಸ್ ಯೋಜನೆ - ಗ್ರಾಮೀಣ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮತ್ತು ನರೇಗಾಕ್ಕೆ ಹಂಚಿಕೆ ಹೆಚ್ಚಳ.

ನಿಯಂತ್ರಕ ಅನುಮೋದನೆಗಳನ್ನು ಸುಗಮಗೊಳಿಸುವುದು: ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆ ಮೂಲಕ ವ್ಯವಹಾರ ನಿಯಂತ್ರಕ ಅನುಮೋದನೆಗಳನ್ನು ಸುಗಮಗೊಳಿಸಲು ರಾಜ್ಯಗಳಿಗೆ ಪ್ರೋತ್ಸಾಹ.

ಎಂಎಸ್‌ ಎಂಇ ಗಳಿಗೆ ಬೆಂಬಲ: ಎಂಎಸ್‌ ಎಂಇ ಸಚಿವಾಲಯದಲ್ಲಿ ಮೀಸಲಾದ ವರ್ಟಿಕಲ್ ಸ್ಥಾಪನೆ ಮತ್ತು ಎಂಎಸೆಂಇಗಳಿಗೆ ಪ್ರಯೋಜನವಾಗುವಂತೆ ಪಿಎಲ್‌ಐ ಯೋಜನೆಗಳ ಮಾರ್ಪಾಡು.

ತಾರ್ಕಿಕ ಆಮದು ಸುಂಕ: ಕಚ್ಚಾ ವಸ್ತುಗಳ ಮೇಲೆ ಶೂನ್ಯ/ಕಡಿಮೆ ಸುಂಕದೊಂದಿಗೆ ಮೂರು ಹಂತದ ಸುಂಕ ಪದ್ಧತಿ ಅಳವಡಿಕೆ. ಅಂತಿಮ ಸರಕುಗಳಿಗೆ ಶೇ.7.5 ಪ್ರಮಾಣಿತ ದರ ಮತ್ತು ಮಧ್ಯಂತರ ಸರಕುಗಳಿಗೆ ಮಧ್ಯಮ ದರ.

ಆರೋಗ್ಯ ಮತ್ತು ಶಿಕ್ಷಣದ ಮೇಲಿನ ವೆಚ್ಚ ಹೆಚ್ಚಳ : ಡಿಜಿಟಲ್ ಮತ್ತು ಎಐ ಕೌಶಲಗಳ ತರಬೇತಿ ಮೇಲೆ ಕೇಂದ್ರೀಕರಣ. ಸಂಯೋಜಿತ ಆರೋಗ್ಯ ಮತ್ತು ಶಿಕ್ಷಣದ ವೆಚ್ಚವನ್ನು ಜಿಡಿಪಿಯ ಶೇ. 2.5-3 ಮತ್ತು ಶೇ.6 ಕ್ಕೆ ಹೆಚ್ಚಿಸಿ.

Tags:    

Similar News