ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜೊತೆಗಿನ ತನ್ನ ಸಹಯೋಗವನ್ನು ವಿಸ್ತರಿಸಲು ಭಾರತ ಮುಕ್ತವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಹೇಳಿದ್ದಾರೆ.
ವಿತ್ತ ಸಚಿವೆ ಐಎಂಎಫ್‌ನ ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಅವರನ್ನು ಭೇಟಿಯಾಗಿದ್ದರು. ಭಾರತ ಸರ್ಕಾರ ಅನುಸರಿಸುತ್ತಿರುವ ಹಣಕಾಸಿನ ಬಲವರ್ಧನೆ ಕಾರ್ಯನೀತಿ ಮುಂದುವರಿಕೆಗೆ ಹಣಕಾಸು ಸಚಿವೆಯನ್ನು ಗೀತಾ ಗೋಪಿನಾಥ್ ಅವರು ಅಭಿನಂದಿಸಿದರು.
ʻಭಾರತ ಐಎಂಎಫ್ ನೊಂದಿಗಿನ ತನ್ನ ಸಂಬಂಧ ಮತ್ತು ನಿರಂತರ ತೊಡಗಿಸಿಕೊಳ್ಳುವಿಕೆಯನ್ನು ಗೌರವಿಸುತ್ತದೆ ಎಂದು ವಿತ್ತ ಸಚಿವೆ ಹೇಳಿದ್ದಾರೆ; ಮತ್ತು, ಐಎಂಎಫ್ ನೊಂದಿಗೆ ದೇಶದ ಸಹಯೋಗವನ್ನು ಹೆಚ್ಚಿಸಲು ಭಾರತ ಸರ್ಕಾರ ಮಾರ್ಗಗಳನ್ನು ಅನ್ವೇಷಿಸಲು ಮುಕ್ತವಾಗಿದೆ, ಎಂದು ಹಣಕಾಸು ಸಚಿವಾಲಯವು ಎಕ್ಸ್ ನ ಪೋಸ್ಟ್ ನಲ್ಲಿ ಹೇಳಿದೆ.
ಭಾರತದ ಆರ್ಥಿಕತೆಯ ಚೈತನ್ಯವನ್ನು ಒಪ್ಪಿಕೊಳ್ಳುವ ಜೊತೆಗೆ, ಐಎಂಎಫ್ ಮತ್ತು ಭಾರತದ ಸಂಬಂಧವು ಭಾರತ, ಐಎಂಎಫ್ ಮತ್ತು ವಿಶ್ವದ ಮೌಲ್ಯ ಹೆಚ್ಚಿಸುತ್ತದೆ ಎಂದು ಗೋಪಿನಾಥ್ ಶ್ಲಾಘಿಸಿದರು.