ಭಾರತ 2030ರೊಳಗೆ 148 ದಶಲಕ್ಷ ಹೆಚ್ಚುವರಿ ಉದ್ಯೋಗ ಸೃಷ್ಟಿಸಬೇಕು: ಐಎಂಎಫ್‌

Update: 2024-08-17 12:55 GMT

ನವದೆಹಲಿ: ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಭಾರತ ಜಿ 20 ರಾಷ್ಟ್ರಗಳಲ್ಲಿ ಹಿಂದುಳಿದಿದ್ದು, ಜನಸಂಖ್ಯೆಯ ಬೆಳವಣಿಗೆ ಗಮನಿಸಿದರೆ 2030 ರ ವೇಳೆಗೆ ಹೆಚ್ಚುವರಿ 148 ದಶಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯವಿದೆ ಎಂದು ಐಎಂಎಫ್‌ನ ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಶನಿವಾರ ಹೇಳಿದ್ದಾರೆ. 

ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನ ವಜ್ಯ ಮಹೋತ್ಸವ ಸಮಾರಂಭದಲ್ಲಿಮಾತನಾಡಿ, ʼ 2010ರ ದಶಕದಲ್ಲಿ ಭಾರತ ಸರಾಸರಿ ಶೇ.6.6 ಬೆಳವಣಿಗೆ ಕಂಡಿದೆ. ಆದರೆ, ಉದ್ಯೋಗ ಸೃಷ್ಟಿ ಶೇ.2 ಕ್ಕಿಂತ ಕಡಿಮೆಯಾಗಿದೆ,ʼ ಎಂದು ಹೇಳಿದರು.

ʻಇತರ ಜಿ 20 ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದ ಉದ್ಯೋಗ ದರ ತುಂಬಾ ಕಡಿಮೆಯಾಗಿದೆ. ದೇಶ 2030ರೊಳಗೆ 60 ದಶಲಕ್ಷದಿಂದ 148 ದಶಲಕ್ಷ ಹೆಚ್ಚುವರಿ ಉದ್ಯೋಗ ಸೃಷ್ಟಿಸಬೇಕಾಗುತ್ತದೆ. ನಾವು ಈಗಾಗಲೇ 2024 ರಲ್ಲಿ ಇದ್ದೇವೆ,ʼ ಎಂದು ಹೇಳಿದರು.

ʻಭೂಸುಧಾರಣೆ ಮತ್ತು ಕಾರ್ಮಿಕ ಸಂಹಿತೆ ಅನುಷ್ಠಾನ ಸೇರಿದಂತೆ ಅನೇಕ ಮೂಲಭೂತ ಸುಧಾರಣೆ ಅಗತ್ಯವಿದೆ. ಹೆಚ್ಚಿನ ಉದ್ಯೋಗ ಸೃಷ್ಟಿಸಲು ಖಾಸಗಿ ಬಂಡಾವಳ ಹೂಡಿಕೆ ಅಗತ್ಯವಿದೆ. ಆದರೆ, ಸಾರ್ವಜನಿಕ ಹೂಡಿಕೆ ಉತ್ತಮವಾಗಿದೆ. ದೇಶ ತನ್ನ ಶಿಕ್ಷಣ ವ್ಯವಸ್ಥೆಯನ್ನು ಪರಿಷ್ಕರಿಸಬೇಕು. ಇದು ಉದ್ಯೋಗಿಗಳ ಕೌಶಲವನ್ನು ಸುಧಾರಿಸುತ್ತದೆ,ʼ ಎಂದು ಹೇಳಿದರು.

ʻವ್ಯವಹಾರವನ್ನು ಇನ್ನಷ್ಟು ಸುಲಭಗೊಳಿಸುವುದು, ನಿಯಂತ್ರಕ ವಾತಾವರಣವನ್ನು ಸುಧಾರಿಸುವುದು ಮತ್ತು ತೆರಿಗೆ ಮೂಲವನ್ನು ವಿಸ್ತರಿಸುವ ಅವಶ್ಯಕತೆಯಿದೆ,ʼ ಎಂದು ಹೇಳಿದರು.

Tags:    

Similar News