Allu Arjun | ಅಲ್ಲು ಅರ್ಜುನ್ ಮನೆಯಲ್ಲಿ ವಿದ್ಯಾರ್ಥಿ ಸಂಘಟನೆಯ ದಾಂಧಲೆ
Allu Arjun ಚಲನಚಿತ್ರಗಳನ್ನು ನಿರ್ಮಿಸುವ ಮೂಲಕ ಕೋಟ್ಯಂತರ ರೂಪಾಯಿ ಗಳಿಸಲಾಗುತ್ತದೆ, ಆದರೆ ಚಲನಚಿತ್ರಗಳನ್ನು ನೋಡುವವರು ಸಾಯುತ್ತಿದ್ದಾರೆ ಎಂದು ಪ್ರತಿಭಟನಾಕಾರರರು ಆರೋಪಿಸಿದ್ದಾರೆ.;
ಉಸ್ಮಾನಿಯಾ ವಿಶ್ವವಿದ್ಯಾಲಯದ ಜಂಟಿ ಕ್ರಿಯಾ ಸಮಿತಿಯ ಸದಸ್ಯರೆಂದು ಹೇಳಿಕೊಂಡ ಗುಂಪೊಂದು ತೆಲುಗು ನಟ ಅಲ್ಲು ಅರ್ಜುನ್ ಅವರ ನಿವಾಸದಲ್ಲಿ ದಾಂಧಲೆ ನಡೆಸಿದೆ. ಅವರ ಮನೆಯ ಹೊರಭಾಗದಲ್ಲಿಟ್ಟಿದ್ದ ಮೇಲೆ ಹೂಕುಂಡಗಳು ಮತ್ತು ಇತರ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ.
ಪುಷ್ಟ2 ಸಿನಿಮಾದ ಪ್ರೀಮಿಯರ್ ಶೋ ವೇಳೆ ಉಂಟಾದ ನೂಕುನುಗ್ಗಲಿಂದ ಮಹಿಳೆಯೊಬ್ಬಳು ಮೃತಪಟ್ಟು ಆಕೆಯ ಪುತ್ರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಅವರಿಗೆ ನ್ಯಾಯ ಕೊಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರತಿಭಟನಾಕಾರರು ಬಿಟ್ಟುಹೋದ ಫಲಕದಲ್ಲಿ ನಟನ ವಿರುದ್ಧ ಹೇಳಿಕೆಗಳಿದ್ದವು. ಚಲನಚಿತ್ರಗಳನ್ನು ನಿರ್ಮಿಸುವ ಮೂಲಕ ಕೋಟ್ಯಂತರ ರೂಪಾಯಿ ಗಳಿಸಲಾಗುತ್ತದೆ, ಆದರೆ ಚಲನಚಿತ್ರಗಳನ್ನು ನೋಡುವವರು ಸಾಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಉಸ್ಮಾಜಿಯ ವಿವಿ ಪ್ರತಿಭಟನೆ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ತೆಲಂಗಾಣ ರಾಜ್ಯ ರಚನೆ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿತ್ತು.