ಅಮೆರಿಕ ಭಾರತದೊಂದಿಗೆ ಇದೆ; ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಿದೆ: ಟ್ರಂಪ್

ಇಸ್ರೇಲ್, ರಷ್ಯಾ ಮತ್ತು ಉಕ್ರೇನ್ ಸೇರಿದಂತೆ ಅನೇಕ ರಾಷ್ಟ್ರಗಳು ಈ ದಾಳಿಯನ್ನು ಖಂಡಿಸಿವೆ, ಭಾರತದೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿವೆ. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಈ ದಾಳಿಯನ್ನು "ನಿರ್ದಯವಾದ ಮತ್ತು ಅಮಾನವೀಯ" ಎಂದು ಕರೆದಿದ್ದಾರೆ.;

Update: 2025-04-22 17:39 GMT

ಪ್ರಧಾನಮಂತ್ರಿ ನರೇಂದ್ರ ಮೋದಿ ಈ ದಾಳಿಯನ್ನು "ಹೇಯ ಕೃತ್ಯ" ಎಂದು ಖಂಡಿಸಿದ್ದು, ಗಾಯಾಳುಗಳ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ ಮತ್ತು ದಾಳಿಕೋರರನ್ನು ನಿರ್ಮೂಲಕನೆ ಮಾಡುವ ಭರವಸೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಂಡಿಸಿದ್ದಾರೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಮತ್ತು ಭಾರತದ ಜನತೆಯನ್ನು ಉಲ್ಲೇಖಿಸಿ ಸಂತಾಪ ವ್ಯಕ್ತಪಡಿಸಿದ್ದಾರೆ. "ಕಾಶ್ಮೀರದಿಂದ ಬಂದಿರುವ ಸುದ್ದಿ ತೀವ್ರ ಕಳವಳಕಾರಿಯಾಗಿದೆ. ಭಯೋತ್ಪಾದನೆ ವಿರುದ್ಧ ಭಾರತದೊಂದಿಗೆ ಅಮೆರಿಕ ದೃಢವಾಗಿ ನಿಲ್ಲುತ್ತದೆ," ಎಂದು ಟ್ರಂಪ್ ಹೇಳಿದ್ದಾರೆ.

ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವಾನ್ಸ್, ತಮ್ಮ ಪತ್ನಿ ಉಷಾ ಚಿಲುಕುರಿ ವಾನ್ಸ್ ಮತ್ತು ಮಕ್ಕಳೊಂದಿಗೆ ಭಾರತಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ, ಈ ದಾಳಿ ನಡೆದಿದೆ. ಉಪಾಧ್ಯಕ್ಷರು, "ಭಾರತದ ಜನರೊಂದಿಗೆ ನಾವಿದ್ದೇವೆ," ಎಂದು ಅವರು ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಈ ದಾಳಿಯನ್ನು "ಹೇಯ ಕೃತ್ಯ" ಎಂದು ಖಂಡಿಸಿದ್ದು, ಗಾಯಾಳುಗಳ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ ಮತ್ತು ದಾಳಿಕೋರರನ್ನು ನಿರ್ಮೂಲಕನೆ ಮಾಡುವ ಭರವಸೆ ನೀಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಶ್ರೀನಗರಕ್ಕೆ ತೆರಳಿ ಸ್ಥಿತಿಗತಿಯನ್ನು ಪರಿಶೀಲಿಸಿದ್ದಾರೆ.

ಇಸ್ರೇಲ್, ರಷ್ಯಾ ಮತ್ತು ಉಕ್ರೇನ್ ಸೇರಿದಂತೆ ಅನೇಕ ರಾಷ್ಟ್ರಗಳು ಈ ದಾಳಿಯನ್ನು ಖಂಡಿಸಿವೆ, ಭಾರತದೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿವೆ. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಈ ದಾಳಿಯನ್ನು "ನಿರ್ದಯವಾದ ಮತ್ತು ಅಮಾನವೀಯ" ಎಂದು ಕರೆದಿದ್ದಾರೆ. 

Tags:    

Similar News