ಮೋದಿ ಅವರ ಜಗತ್ತಿನಲ್ಲಿ ಸತ್ಯವನ್ನು ಅಳಿಸಿಹಾಕಬಹುದು, ವಾಸ್ತವದಲ್ಲಿ ಅಲ್ಲ: ರಾಹುಲ್ ಗಾಂಧಿ
ನವದೆಹಲಿ, ಜುಲೈ 2: ಪ್ರಧಾನಿ ನರೇಂದ್ರ ಮೋದಿಯವರ ಜಗತ್ತಿನಲ್ಲಿ ಸತ್ಯವನ್ನು ಅಳಿಸಿ ಹಾಕಬಹುದು; ಆದರೆ, ವಾಸ್ತವದಲ್ಲಿ ಅಲ್ಲಎಂದು ಲೋಕಸಭೆಯಲ್ಲಿ ಮಾಡಿದ ಭಾಷಣದ ಮಹತ್ವದ ಭಾಗಗಳನ್ನು ಸ್ಪೀಕರ್ ಅಳಿಸಿ ಹಾಕಿದ ಗಂಟೆಗಳ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
ʻನಾನು ಏನು ಹೇಳಬೇಕೋ ಅದನ್ನು ಹೇಳಿದ್ದೇನೆ ಮತ್ತು ಅದು ಸತ್ಯ. ಅವರು ಎಷ್ಟು ಬೇಕಾದರೂ ಅಳಿಸಿ ಹಾಕಬಹುದು. ಆದರೆ ಸತ್ಯ ಮೇಲು ಗೈ ಸಾಧಿಸುತ್ತದೆ,ʼ ಎಂದು ಸಂಸತ್ತಿನ ಸಂಕೀರ್ಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಸೋಮವಾರ ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾಡಿದ ಟೀಕೆ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ʻಮೋದಿ ಅವರ ಜಗತ್ತಿನಲ್ಲಿ ಸತ್ಯವನ್ನು ಅಳಿಸಿಹಾಕಬಹುದು. ಆದರೆ ವಾಸ್ತವದಲ್ಲಿ ಸತ್ಯವನ್ನು ಅಳಿಸಿ ಹಾಕಲು ಸಾಧ್ಯವಿಲ್ಲ,ʼ ಎಂದು ಹೇಳಿ ದರು.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಬಳಿಕ ಮಾಡಿದ ಮೊದಲ ಭಾಷಣದಲ್ಲಿ ಬಿಜೆಪಿ ಮೇಲೆ ತೀವ್ರ ದಾಳಿ ನಡೆಸಿದ ಅವರು, ಆಡಳಿತ ಪಕ್ಷದ ನಾಯಕರು ಜನರನ್ನು ಕೋಮು ಆಧಾರದ ಮೇಲೆ ವಿಭಜಿಸುತ್ತಿದ್ದಾರೆ ಎಂದು ದೂರಿದರು.
ಅವರ ಟೀಕೆಗಳಿಗೆ ಆಡಳಿತ ಪಕ್ಷದ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಕರೆದಿದ್ದಕ್ಕಾಗಿ ಪ್ರಧಾನಿ ಅವರು ಕಾಂಗ್ರೆಸ್ ನಾಯಕನನ್ನು ಟೀಕಿಸಿದರು.