ನವದೆಹಲಿಯಲ್ಲಿ ಒಂದೇ ಕುಟುಂಬದ ಮೂವರ ಕೊಲೆ

ಪೊಲೀಸರ ಪ್ರಕಾರ, ದಂಪತಿಯ ಮಗ ಅರ್ಜುನ್ ಬೆಳಿಗ್ಗೆ 5.30ಕ್ಕೆ ವಾಕಿಂಗ್ ಮುಗಿಸಿ ಹಿಂದಿರುಗಿದಾಗ ಮೃತದೇಹಗಳು ಪತ್ತೆಯಾಗಿವೆ. ಅವರು ನೆರೆಹೊರೆಯವರಿಗೆ ಮಾಹಿತಿ ನೀಡಿದ್ದರು.;

Update: 2024-12-04 09:56 GMT

ದೆಹಲಿಯ ನೆಬ್ ಸರಾಯ್ ಪ್ರದೇಶದ ಮನೆಯೊಳಗೆ ಒಂದೇ ಕುಟುಂಬದ ಮೂವರನ್ನು ಇರಿದು ಕೊಂದ ಪ್ರಕರಣ ನಡೆದಿದೆ. ಮೃತರನ್ನು ರಾಜೇಶ್ ಕುಮಾರ್ (51), ಅವರ ಪತ್ನಿ ಕೋಮಲ್ (46) ಮತ್ತು ಅವರ ಮಗಳು ಕವಿತಾ (23) ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ದಂಪತಿಯ ಮಗ ಅರ್ಜುನ್ ಬೆಳಿಗ್ಗೆ 5.30ಕ್ಕೆ ವಾಕಿಂಗ್ ಮುಗಿಸಿ ಹಿಂದಿರುಗಿದಾಗ ಮೃತದೇಹಗಳು ಪತ್ತೆಯಾಗಿವೆ. ಅವರು ನೆರೆಹೊರೆಯವರಿಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸರಿಗೆ ಕರೆ ಮಾಡಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಅಪರಾಧ ತಂಡ ಮತ್ತು ವಿಧಿವಿಜ್ಞಾನ ತಂಡಗಳನ್ನು ಕರೆಸಲಾಗಿದೆ. ಮೇಲ್ನೋಟಕ್ಕೆ ಮನೆಯಿಂದ ಯಾವುದೇ ವಸ್ತುವನ್ನು ಲೂಟಿ ಮಾಡಿಲ್ಲ ಅಥವಾ ಕದಿಯಲಾಗಿಲ್ಲ" ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಣಕಾಸಿನ ವಿವಾದ ಕಾರಣ? 

ಘಟನೆಯ ಬಗ್ಗೆ ಮಾತನಾಡಿದ ಅರ್ಜುನ್ ಅವರ ಸೋದರಮಾವ ಸತೀಶ್ ಕುಮಾರ್, "ರಾಜೇಶ್ ನನ್ನ ಸೋದರ ಮಾವ. ಘಟನೆಯ ಬಗ್ಗೆ ನನ್ನ ಸೋದರಳಿಯನಿಂದ (ಅರ್ಜುನ್) ನನಗೆ ಕರೆ ಬಂತು. ರಾಜೇಶ್ ಸೇನೆಯಿಂದ ನಿವೃತ್ತರಾಗಿದ್ದು, ಪ್ರಸ್ತುತ ಭದ್ರತಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಅವರ ಮಗಳು ಕಾಲೇಜು ವಿದ್ಯಾರ್ಥಿನಿಯಾಗಿದ್ದಳು. ಹಣಕಾಸಿನ ವಿವಾದವು ದಾಳಿಗೆ ಸಂಭಾವ್ಯ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.

ಡಿಯೋಲಿಯ ಎಎಪಿ ಶಾಸಕ ಪ್ರಕಾಶ್ ಜರ್ವಾಲ್ ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ್ದಾರೆ. "ದುಷ್ಕರ್ಮಿಗಳು ಮನೆಗೆ ಪ್ರವೇಶಿಸಿ ಅವರ ಕುತ್ತಿಗೆಗೆ ಇರಿದಿದ್ದಾರೆ" ಎಂದು ಜರ್ವಾಲ್ ಹೇಳಿದ್ದಾರೆ. ದೆಹಲಿಯಲ್ಲಿ ಅಪರಾಧ ಮಾಮೂಲಿಯಾಗಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರದ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಘಟನೆಯನ್ನು "ಅತ್ಯಂತ ನೋವಿನ ಮತ್ತು ಭಯಾನಕ" ಎಂದು ಬಣ್ಣಿಸಿದ್ದಾರೆ. ಕೇಂದ್ರವು ಅಪರಾಧಿಗಳಿಗೆ ಮುಕ್ತ ಅವಕಾಶ ನೀಡುತ್ತಿದೆ. ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ವಿಫಲವಾಗಿದೆ ಎಂದು ಆರೋಪಿಸಿದರು.

"ನೆಬ್​ಸರೈನ ಒಂದೇ ಮನೆಯಲ್ಲಿ ಮೂರು ಕೊಲೆಗಳು ನಡೆದಿವೆ. ಇದು ಅತ್ಯಂತ ನೋವಿನ ಮತ್ತು ಭಯಾನಕ ಸಂಗತಿ. ಪ್ರತಿದಿನ, ದೆಹಲಿ ಜನರು ಇಂತಹ ಭಯಾನಕ ಸುದ್ದಿಗಳನ್ನು ಕೇಳುವಂತಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಮನೆಗಳು ನಾಶವಾಗುತ್ತಿವೆ " ಎಂದು ಅವರು ಕೇಜ್ರಿವಾಲ್​ ​ ಎಕ್ಸ್ ಪೋಸ್ಟ್​ನಲ್ಲಿ ಬರೆದಿದ್ದಾರೆ.

Tags:    

Similar News