ವಿದ್ಯುತ್ ವಲಯದಲ್ಲಿ ಅಕ್ರಮ: ಕೆಸಿಆರ್ ಮನವಿ ವಜಾ

ಬಿಆರ್‌ಎಸ್ ಆಡಳಿತದ ಅವಧಿಯಲ್ಲಿ ವಿದ್ಯುತ್ ವಲಯದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖಾ ಆಯೋಗ ರಚಿಸುವಂತೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ತೆಲಂಗಾಣ ಹೈಕೋರ್ಟ್ ಸೋಮವಾರ (ಜುಲೈ 1) ವಜಾಗೊಳಿಸಿದೆ.

Update: 2024-07-01 14:08 GMT

ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರಿಗೆ ಬಿಡುವು ಇಲ್ಲದಂತಾಗಿದೆ. 

ಬಿಆರ್‌ಎಸ್ ಆಡಳಿತದ ಅವಧಿಯಲ್ಲಿ ವಿದ್ಯುತ್ ವಲಯದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖಾ ಆಯೋಗ ರಚಿಸುವಂತೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ತೆಲಂಗಾಣ ಹೈಕೋರ್ಟ್ ಸೋಮವಾರ (ಜುಲೈ 1) ವಜಾಗೊಳಿಸಿದೆ. 

ಮು.ನ್ಯಾ. ಅಲೋಕ್ ಅರಾಧೆ ಮತ್ತು ನ್ಯಾ. ಅನಿಲ್ ಕುಮಾರ್ ಜುಕಾಂತಿ ಅವರ ಪೀಠ, ರಾವ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಚತ್ತೀಸ್‌ಗಢದಿಂದ ವಿದ್ಯುತ್ ಖರೀದಿ, ಟಿಎಸ್ ಜೆನ್ಕೋದಿಂದ ಮಣುಗೂರಿನ ಭದ್ರಾದ್ರಿ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಮತ್ತು ದಾಮರ್ಚೆರ್ಲಾದಲ್ಲಿ ಯಾದಾದ್ರಿ ಶಾಖೋತ್ಪನ್ನ ಸ್ಥಾವರದ ನಿರ್ಮಾಣ ಕಾನೂನುಬಾಹಿರ ಎಂಬ ಕುರಿತು ನ್ಯಾಯಾಂಗ ತನಿಖೆ ನಡೆಸಲು ತನಿಖಾ ಆಯೋಗವನ್ನು ರಚಿಸಬೇಕೆಂದು ಅವರು ತಮ್ಮ ಮನವಿಯಲ್ಲಿ ಕೋರಿದ್ದರು.

ನ್ಯಾ.(ನಿವೃತ್ತ) ಎಲ್. ನರಸಿಂಹ ರೆಡ್ಡಿ ಅವರನ್ನು ಆಯೋಗದ ಮುಖ್ಯಸ್ಥರಾಗಿ ಮುಂದುವರಿಸುವುದು ಅಕ್ರಮ ಎಂದು ಘೋಷಿಸಬೇಕೆಂದು ಮನವಿ ಮಾಡಿದ್ದರು.

ಆಯೋಗದ ಮುಂದೆ ಹಾಜರಾಗುವಂತೆ ಪತ್ರ ನೀಡಿರುವುದಕ್ಕೆ ಹಾಗೂ ನ್ಯಾ.ನರಸಿಂಹ ರೆಡ್ಡಿ ಅವರು ಜೂನ್ 15ರಂದು ನಡೆಸಿದ ಮಾಧ್ಯಮ ಸಂವಾದ ಕುರಿತು ಪ್ರತಿಕ್ರಿಯಿಸಿದ ರಾವ್, ಸಮಿತಿ ಅಧ್ಯಕ್ಷರ ಕಾರ್ಯವೈಖರಿ ನ್ಯಾಯಬದ್ಧವಾಗಿಲ್ಲ ಎಂದು ಆರೋಪಿಸಿದರು. ನ್ಯಾ. ನರಸಿಂಹ ರೆಡ್ಡಿ ಅವರು ತಮ್ಮ ಸ್ಥಾನದಿಂದ ಕೆಳಗಿಳಿಯಬೇಕು ಎಂದು 12 ಪುಟಗಳ ಬಹಿರಂಗ ಪತ್ರದಲ್ಲಿ ರಾವ್ ಹೇಳಿದ್ದಾರೆ.

ರಾಜ್ಯದ ಎಲ್ಲಾ ಕ್ಷೇತ್ರಗಳಿಗೆ 24x7 ವಿದ್ಯುತ್ ಪೂರೈಸುವಲ್ಲಿ ತಮ್ಮ ಸರ್ಕಾರ ಯಶಸ್ವಿಯಾಗಿದೆ. ಪ್ರಸ್ತುತ ಕಾಂಗ್ರೆಸ್ ಆಡಳಿತವು ʻಸ್ಪಷ್ಟ ರಾಜಕೀ ಯ ಉದ್ದೇಶದಿಂದ ಮತ್ತು ಹಿಂದಿನ ಸರ್ಕಾರಕ್ಕೆ ಅಪಖ್ಯಾತಿ ತರಲು ತನಿಖಾ ಆಯೋಗಕ್ಕೆ ಆದೇಶಿಸಿದೆ ಎಂದು ಆರೋಪಿಸಿದರು.

Tags:    

Similar News