Delhi Polls : ಡೆಲ್ಲಿಯಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ
ಅಶೋಕ್ ವಿಹಾರ್ ಪ್ರದೇಶದ ಸ್ವಾಭಿಮಾನ್ ಅಪಾರ್ಟ್‌ಮೆಂಟ್‌ನಲ್ಲಿ ಇಡಬ್ಲ್ಯೂಎಸ್ ಫ್ಲ್ಯಾಟ್‌ಗಳ ಅರ್ಹ ಫಲಾನುಭವಿಗಳಿಗೆ ಮೋದಿ ಕೀಲಿಗಳನ್ನು ಹಸ್ತಾಂತರಿಸಿದರು.;
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಜನವರಿ 3) ದೆಹಲಿಯಲ್ಲಿ ಜೆಜೆ ಕ್ಲಸ್ಟರ್ ನಿವಾಸಿಗಳಿಗೆ 1,675 ಫ್ಲ್ಯಾಟ್‌ಗಳನ್ನು ಮತ್ತು ಹಾಗೂ ವರ್ಲ್ಡ್ ಟ್ರೇಡ್ ಸೆಂಟರ್‌ನ ಅತ್ಯಾಧುನಿಕ ಕಟ್ಟಡಗಳನ್ನು ಉದ್ಘಾಟಿಸಿದರು. ಅದೇ ರೀತಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.
ಅಶೋಕ್ ವಿಹಾರ್ ಪ್ರದೇಶದ ಸ್ವಾಭಿಮಾನ್ ಅಪಾರ್ಟ್‌ಮೆಂಟ್‌ನಲ್ಲಿ ಇಡಬ್ಲ್ಯೂಎಸ್ ಫ್ಲ್ಯಾಟ್‌ಗಳ ಅರ್ಹ ಫಲಾನುಭವಿಗಳಿಗೆ ಮೋದಿ ಕೀಲಿಗಳನ್ನು ಹಸ್ತಾಂತರಿಸಿದರು.
ಕೇಂದ್ರ ಸರ್ಕಾರವು ಫ್ಲ್ಯಾಟ್ ನಿರ್ಮಾಣಕ್ಕಾಗಿ ಖರ್ಚು ಮಾಡುವ ಪ್ರತಿ 25 ಲಕ್ಷ ರೂ.ಗಳಿಗೆ, ಫಲಾನುಭವಿಗಳು ಒಟ್ಟು ಮೊತ್ತದ ಶೇಕಡಾ 7 ಕ್ಕಿಂತ ಕಡಿಮೆ ಪಾವತಿಸುತ್ತಾರೆ. ಅಂದರೆ 1.42 ಲಕ್ಷ ರೂ.ಗಳು ಮತ್ತು ಐದು ವರ್ಷಗಳ ನಿರ್ವಹಣೆಗೆ 30,000 ರೂಪಾಯಿ ಪಾವತಿಸಲಿದ್ದಾರೆ.
ಫೆಬ್ರವರಿಯಲ್ಲಿ ಚುನಾವಣೆ
ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳನ್ನು ಘೋಷಿಸಲಾಗಿದೆ.
ನೌರೋಜಿ ನಗರದಲ್ಲಿ ವಿಶ್ವ ವ್ಯಾಪಾರ ಕೇಂದ್ರ ಮತ್ತು ಸರೋಜಿನಿ ನಗರದಲ್ಲಿ ಜನರಲ್ ಪೂಲ್ ರೆಸಿಡೆನ್ಷಿಯಲ್ ವಸತಿ (ಜಿಪಿಆರ್ಎ) ಟೈಪ್ -2 ವಸತಿಗೃಹಗಳು ಎಂಬ ಎರಡು ನಗರ ಪುನರಾಭಿವೃದ್ಧಿ ಯೋಜನೆಗಳನ್ನು ಮೋದಿ ಉದ್ಘಾಟಿಸಿದರು.
ವರ್ಲ್ಡ್ ಟ್ರೇಡ್ ಸೆಂಟರ್‌ನ 600ಕ್ಕೂ ಹೆಚ್ಚು ಶಿಥಿಲಗೊಂಡ ವಸತಿಗೃಹಗಳನ್ನು ಅತ್ಯಾಧುನಿಕ ವಾಣಿಜ್ಯ ಟವರ್‌ಗಳಾಗಿ ಬದಲಾಯಿಸಲಾಯಿತು. ಈ ಮೂಲಕ ಈ ಪ್ರದೇಶವನ್ನು ಪರಿವರ್ತಿಸಲಾಗಿದೆ. ಸುಮಾರು 34 ಲಕ್ಷ ಚದರ ಅಡಿ ಪ್ರದೇಶದಲ್ಲಿ ಸುಧಾರಿತ ಸೌಲಭ್ಯಗಳನ್ನು ನೀಡಲಾಗಿದೆ.