ಜರ್ಮನಿ ಪೌರತ್ವ ಹೊಂದಿದ್ದರೂ ತೆಲಂಗಾಣದಲ್ಲಿ 7 ಬಾರಿ ಶಾಸಕರಾಗಿದ್ದ ಚನ್ನಮನೇನಿ ರಮೇಶ್​ಗೆ 30 ಲಕ್ಷ ರೂ. ದಂಡ

ರಮೇಶ್ ಅವರು ಇನ್ನು ಮುಂದೆ ಆ ಜರ್ಮನಿಯ ಪ್ರಜೆಯಲ್ಲ ಎಂದು ದೃಢೀಕರಿಸಲು ನವದೆಹಲಿಯಲ್ಲಿರುವ ಜರ್ಮನ್ ರಾಯಭಾರ ಕಚೇರಿಯಿಂದ ದಾಖಲೆಗಳನ್ನು ಒದಗಿಸಲು ವಿಫಲರಾಗಿದ್ದಾರೆ ಎಂಬ ಅಂಶವನ್ನು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಗಮನಿಸಿದೆ.;

Update: 2024-12-09 12:23 GMT
High Court

ಜರ್ಮನಿಯ ಪೌರತ್ವ ಹೊಂದಿರುವ ಹೊರತಾಗಿಯೂ ಭಾರತೀಯ ಪ್ರಜೆ ಎಂದು ಹೇಳಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ಬಿಆರ್​ಎಸ್​ ಮಾಜಿ ಶಾಸಕ ಚೆನ್ನಮನೇನಿ ರಮೇಶ್​ಗೆ 30 ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ಮೊತ್ತದಲ್ಲಿ 25 ಲಕ್ಷ ರೂಪಾಯಿಯನ್ನು ದೂರುದಾರರಾದ ಕಾಂಗ್ರೆಸ್ ಪಕ್ಷದ ಆದಿ ಶ್ರೀನಿವಾಸ್​ ಅವರಿಗೆ ಪಾವತಿ ಮಾಡುವಂತೆ ಹೇಳಿದೆ.

ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ತೆಲಂಗಾಣ ಹೈಕೋರ್ಟ್ ಸೋಮವಾರ (ಡಿಸೆಂಬರ್ 9) ನಾಯಕ ಚೆನ್ನಮನೇನಿ ರಮೇಶ್ ಅವರು ಭಾರತೀಯ ಪ್ರಜೆ ಎಂದು ಸಾಬೀತುಪಡಿಸಲು ವಿಫಲರಾಗಿರುವ ಕಾರಣ ಅವರನ್ನು ಜರ್ಮನ್ ಪ್ರಜೆ ಎಂದೇ ಹೇಳಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಭಾರತೀಯ ಪ್ರಜೆ ಎಂದು ಹೇಳಿಕೊಳ್ಳಲು ನಕಲಿ ದಾಖಲೆಗಳನ್ನು ಬಳಸಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ರಮೇಶ್ ಅವರು ಇನ್ನು ಮುಂದೆ ಆ ಜರ್ಮನಿಯ ಪ್ರಜೆಯಲ್ಲ ಎಂದು ದೃಢೀಕರಿಸಲು ನವದೆಹಲಿಯಲ್ಲಿರುವ ಜರ್ಮನ್ ರಾಯಭಾರ ಕಚೇರಿಯಿಂದ ದಾಖಲೆಗಳನ್ನು ಒದಗಿಸಲು ವಿಫಲರಾಗಿದ್ದಾರೆ ಎಂಬ ಅಂಶವನ್ನು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಗಮನಿಸಿದೆ.

2009ರಲ್ಲಿ ತೆಲುಗು ದೇಶಂ ಪಕ್ಷದ (ಟಿಡಿಪಿ) ಟಿಕೆಟ್​ನಿಂದ ತೆಲಂಗಾಣದ ವೇಮುಲವಾಡ ವಿಧಾನಸಭಾ ಕ್ಷೇತ್ರದಲ್ಲಿ ರಮೇಶ್ ನಾಲ್ಕು ಬಾರಿ ಗೆದ್ದಿದ್ದರು. 2010 ರಿಂದ 2018ರವರೆಗೆ ಮೂರು ಬಾರಿ ಭಾರತ್ ರಾಷ್ಟ್ರ ಸಮಿತಿ (ಬಿಆರ್​ಎಸ್​) ಗೆ ಪಕ್ಷದಲ್ಲಿ ಗೆದ್ದಿದ್ದರು. ಭಾರತೀಯ ಕಾನೂನಿನ ಪ್ರಕಾರ, ಭಾರತೀಯರಲ್ಲದವರು ಚುನಾವಣೆಯಲ್ಲಿ ಸ್ಪರ್ಧಿಸಲು ಅಥವಾ ಮತ ಚಲಾಯಿಸಲು ಸಾಧ್ಯವಿಲ್ಲ. ಹೀಗಾಗಿ ರಮೇಶ್ ಮಾಡಿರುವುದು ಅಕ್ರಮ ಎಂದು ಕೋರ್ಟ್​ ಹೇಳಿದೆ.

ರಮೇಶ್ ಜರ್ಮನ್ ಪಾಸ್ಪೋರ್ಟ್ 2023ರವರೆಗೆ ಮಾನ್ಯವಾಗಿದೆ ಎಂದು ಕೇಂದ್ರವು 2020ರಲ್ಲಿ ತೆಲಂಗಾಣ ಹೈಕೋರ್ಟ್​ಗೆ ಮಾಹಿತಿ ನೀಡಿತು. ಅವರು ತಮ್ಮ ಅರ್ಜಿಯಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ. ಕೇಂದ್ರ ಗೃಹ ಸಚಿವಾಲಯವು ಅವರ ಭಾರತೀಯ ಪೌರತ್ವವನ್ನು ವಾಪಸ್​ ಪಡೆಯುವ ಆದೇಶವನ್ನು ಹೊರಡಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

2013 ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ಪೌರತ್ವದ ಆಧಾರದ ಮೇಲೆ ರಮೇಶ್ ಅವರ ಉಪಚುನಾವಣೆಯ ಗೆಲುವು ರದ್ದುಗೊಳಿಸಲಾಗಿತ್ತು. ನಂತರ ಅವರು ಸುಪ್ರೀಂ ಕೋರ್ಟ್ ಗೆ ಹೋಗಿ ತಡೆಯಾಜ್ಞೆ ಪಡೆದಿದ್ದರು. ಈ ಅವಧಿಯಲ್ಲಿ, ಅವರು 2014 ಮತ್ತು 2018 ರ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದರು.

Tags:    

Similar News