ಆತ್ಮಹತ್ಯೆಗೆ ಪ್ರಚೋದನೆ : ಕಿರುಕುಳದ ಸಾಕ್ಷಿಯೊಂದೇ ಸಾಲುವುದಿಲ್ಲ; ಸುಪ್ರೀಂ ಕೋರ್ಟ್
ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್, ಪತ್ನಿ ಮತ್ತು ಅವರ ಕುಟುಂಬ ಸದಸ್ಯರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿಕೊಂಡ ಬಳಿಕ ಉಂಟಾಗಿರುವ ಸಾರ್ವಜನಿಕ ಚರ್ಚೆಯ ನಡುವೆ ಸರ್ವೋಚ್ಛ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.;
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧದಲ್ಲಿ ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಲು ಕೇವಲ ಕಿರುಕುಳದ ಸಾಕ್ಷಿಗಳು ಮಾತ್ರ ಸಾಲುವುದಿಲ್ಲ. ನೇರ ಅಥವಾ ಪರೋಕ್ಷ ಪ್ರಚೋದನೆ ಮಾಡಿರುವುದಕ್ಕೆ ಸ್ಪಷ್ಟ ಪುರಾವೆಗಳು ಅಗತ್ಯ ಎಂದು ಸುಪ್ರೀಂ ಕೋರ್ಟ್ ಗುರವಾರ ಅಭಿಪ್ರಾಯಪಟ್ಟಿದೆ.
ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್, ಪತ್ನಿ ಮತ್ತು ಅವರ ಕುಟುಂಬ ಸದಸ್ಯರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿಕೊಂಡ ಬಳಿಕ ಉಂಟಾಗಿರುವ ಸಾರ್ವಜನಿಕ ಚರ್ಚೆಯ ನಡುವೆ ಸರ್ವೋಚ್ಛ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಮಹಿಳೆಗೆ ಕಿರುಕುಳ ನೀಡಿದ ಮತ್ತು ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪದ ಮೇಲೆ ಮಹಿಳೆಯ ಪತಿ ಮತ್ತು ಆಕೆಯ ಇಬ್ಬರು ಅತ್ತೆ ಮಾವಂದಿರನ್ನು ಬಿಡುಗಡೆ ಮಾಡಲು ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ಕುರಿತು ತೀರ್ಪು ನೀಡುವಾಗ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪಿಬಿ ವರಲೆ ಅವರ ನ್ಯಾಯಪೀಠ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.
"ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 306 ರ ಅಡಿಯಲ್ಲಿ ಶಿಕ್ಷೆ ವಿಧಿಸಲು, ಆತ್ಮಹತ್ಯೆಯ ಪ್ರಚೋದನೆ ಪ್ರಕರಣದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಸಾಕ್ಷಿಗಳು ಬೇಕು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಿಯನ್ನು ತಪ್ಪಿತಸ್ಥನೆಂದು ಸಾಬೀತುಪಡಿಸಲು ಕೇವಲ ಕಿರುಕುಳದ ಆರೋಪವೊಂದೇ ಸಾಕಾಗುವುದಿಲ್ಲ" ಎಂದು ನ್ಯಾಯಪೀಠ ಹೇಳಿದೆ.
ಮೃತ ವ್ಯಕ್ತಿಯು ತನ್ನ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕಾರಣವಾದ ಆರೋಪಿಯ ಪರೋಕ್ಷ ಅಥವಾ ನೇರ ಕ್ರಮವನ್ನು ತನಿಖಾಧಿಕಾರಿಗಳು ಸಲ್ಲಿಸಬೇಕು ಎಂದು ಕೋರ್ಟ್ ಹೇಳಿದೆ.
ನ್ಯಾಯ ಸಂಹಿತೆ ಸೆಕ್ಷನ್ 498-ಎ ಅಡಿಯಲ್ಲಿ ಅರ್ಜಿದಾರರ ವಿರುದ್ಧದ ಆರೋಪವನ್ನು ಎತ್ತಿಹಿಡಿದ ನ್ಯಾಯಪೀಠ, ಸೆಕ್ಷನ್ 306 ರ ಅಡಿಯಲ್ಲಿ ಮೂವರನ್ನು ಆರೋಪದಿಂದ ಮುಕ್ತಗೊಳಿಸಿತು. ಐಪಿಸಿಯ ಸೆಕ್ಷನ್ 306 ಮತ್ತು 498-ಎ ಸೇರಿದಂತೆ ಆಪಾದಿತ ಅಪರಾಧಗಳಿಗಾಗಿ ಮಹಿಳೆಯ ತಂದೆ ಪತಿ ಮತ್ತು ಇಬ್ಬರು ಅಳಿಯಂದಿರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
ಮಹಿಳೆ 2009ರಲ್ಲಿ ವಿವಾಹ ಮತ್ತು ಮದುವೆಯಾದ ಮೊದಲ ಐದು ವರ್ಷಗಳವರೆಗೆ ದಂಪತಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಅವರು ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದರು ಎಂದು ನ್ಯಾಯಪೀಠ ಹೇಳಿದೆ. ಏಪ್ರಿಲ್ 2021ರಲ್ಲಿ ಮಹಿಳೆಯ ತಂದೆಗೆ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿ ಸಿಕ್ಕಿತು. ಬಳಿಕ ಪತಿಯ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.