ಶಿಮ್ಲಾದಲ್ಲಿ ಎರಡು ಹಿಂದೂ ಗುಂಪುಗಳ ನಡುವೆ ದೇವಾಲಯ ವಿಚಾರಕ್ಕೆ ಮಾರಾಮಾರಿ : ಏಳು ಮಂದಿಗೆ ಗಾಯ
ಹಿಮಾಲಯನ್ ಬ್ರಹ್ಮ ಸಮಾಜಕ್ಕೆ ಸಂಬಂಧಿಸಿದ ಹಿರಿಯ ನಾಗರಿಕ ಮಹಿಳೆಯರು ಸೇರಿದಂತೆ 100ಕ್ಕೂ ಹೆಚ್ಚು ಜನರು ಶನಿವಾರ ಸಂಜೆ ಪ್ರಾರ್ಥನೆ ಸಲ್ಲಿಸಲು ಆಶ್ರಮದ ಆವರಣಕ್ಕೆ ಪ್ರವೇಶಿಸಿದ್ದರು. ಈ ವೇಳೆ ಘರ್ಷಣೆ ಸಂಭವಿಸಿದೆ;
ಹಿಮಾಲಯನ್ ಬ್ರಹ್ಮ ಸಮಾಜ ಮತ್ತು ರಾಮಕೃಷ್ಣ ಮಿಷನ್ ಆಶ್ರಮ ಎಂಬ ಎರಡು ಹಿಂದೂ ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದಾರೆ. ವಿಧಾನಸಭೆ ಬಳಿಯ ಬ್ರಹ್ಮ ಸಮಾಜದ ಜಾಗದಲ್ಲಿರುವ ರಾಮಕೃಷ್ಣ ಮಿಷನ್ ಆಶ್ರಮದ ಆವರಣಕ್ಕೂ ಗಲಾಟೆಯಲ್ಲಿ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಮಾಲಯನ್ ಬ್ರಹ್ಮ ಸಮಾಜಕ್ಕೆ ಸಂಬಂಧಿಸಿದ ಹಿರಿಯ ನಾಗರಿಕ ಮಹಿಳೆಯರು ಸೇರಿದಂತೆ 100ಕ್ಕೂ ಹೆಚ್ಚು ಜನರು ಶನಿವಾರ ಸಂಜೆ ಪ್ರಾರ್ಥನೆ ಸಲ್ಲಿಸಲು ಆಶ್ರಮದ ಆವರಣಕ್ಕೆ ಪ್ರವೇಶಿಸಿದ್ದರು. ಈ ವೇಳೆ ಘರ್ಷಣೆ ಸಂಭವಿಸಿದೆ ಎಂದು ಶಿಮ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಕುಮಾರ್ ಗಾಂಧಿ ತಿಳಿಸಿದ್ದಾರೆ.
ಗುಂಪು ರಾತ್ರಿಯವರೆಗೂ ತಮ್ಮ ಪ್ರಾರ್ಥನೆ ಮುಂದುವರಿಸಲು ಬಯಸಿತ್ತು. ಆದರೆ ಆವರಣವನ್ನು ಸ್ವಾಧೀನದಲ್ಲಿರುವ ರಾಮಕೃಷ್ಣ ಮಿಷನ್ ಆಶ್ರಮದ ಸದಸ್ಯರು ಅದಕ್ಕೆ ಆಕ್ಷೇಪಿಸಿದರು. ಈ ವೇಳೆ ವಾಗ್ವಾದ ಉಂಟಾಗಿ ಗಲಾಟೆಗಳು ಆಗಿವೆ ಎಂದು ಹೇಳಿದ್ದಾರೆ.
ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯ ಮಾಲೀಕತ್ವದ ಬಗ್ಗೆ ವಿವಾದ ನಡೆಯುತ್ತಿದೆ. ಹೀಗಾಗಿ ಬ್ರಹ್ಮ ಸಮಾಜದವರು ಜಾಗ ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಶ್ರಮದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು.
ಇದು ಧಾರ್ಮಿಕ ಭಾವನೆಗಳನ್ನು ಒಳಗೊಂಡಿರುವ ಸೂಕ್ಷ್ಮ ವಿಷಯ/ ಪೊಲೀಸರು ಮತ್ತು ಸ್ಥಳೀಯ ಆಡಳಿತವು ಸ್ಥಳದಲ್ಲಿದ್ದು , ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಮರುಕಳಿಸಿದ ಗಲಾಟೆ
ಹಿಮಾಲಯನ್ ಬ್ರಹ್ಮ ಸಮಾಜದ ಅನುಯಾಯಿಗಳು ತಮ್ಮ ಪ್ರಾರ್ಥನೆಗಳನ್ನು ಪೂರ್ಣಗೊಳಿಸಿ ಭಾನುವಾರ ಒಂದು ದಿನ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವ ಷರತ್ತಿನ ಮೇಲೆ ಹೊರಡಲು ಒಪ್ಪಿಕೊಂಡಿದ್ದರು. ಈ ವೇಳೆ ರಾಮಕೃಷ್ಣ ಮಿಷನ್ ಅನುಯಾಯಿಗಳು ಜಮಾಯಿಸಿ ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿದರು.. ಹೀಗಾಗಿ ಮೂವರು ಪೊಲೀಸರು ಸೇರಿದಂತೆ ಏಳು ಜನರು ಗಾಯಗೊಂಡರು.
ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿ ಸ್ವಾಮಿ ತನ್ಮಹಿಮಾನಂದ್ ಮಾತನಾಡಿ, ಧಾರ್ಮಿಕ ಉದ್ದೇಶಗಳಿಗಾಗಿ ಬ್ರಹ್ಮ ಸಮಾಜವು ಈ ಆಸ್ತಿಯನ್ನು ಆಶ್ರಮಕ್ಕೆ ಹಸ್ತಾಂತರಿಸಿದೆ. ಆದಾಗ್ಯೂ ಅವರು 2014ರಿಂದ ಅಲ್ಲಿಯೇ ಉಳಿದುಕೊಂಡಿದ್ದಾರೆ ಎಂದು ಹೇಳಿದರು.
ಆಶ್ರಮದ ಆವರಣವನ್ನು ನೋಡಿಕೊಳ್ಳುವ ಅವರ ಗಾರ್ಡ್ನರ್ ಮತ್ತು ಸಂಘಟನೆ ಮುಖಂಡರು ಶನಿವಾರ ಸಮ್ಮೇಳನ ನಡೆಸಿದರು. ಭಕ್ತರಾಗಿ ಆಶ್ರಮ ಪ್ರವೇಶಿಸಿ ಪೂಜೆ ಸಲ್ಲಿಸಿದ್ದಾರೆ. ಪ್ರವಚನ ಕೇಳಿದ್ದಾರೆ. ರಾತ್ರಿ 8:30ಕ್ಕೆ ಆಶ್ರಮವನ್ನು ಮುಚ್ಚಲು ಬಯಸಿದಾಗ, ಹಿಮಾಲಯನ್ ಬ್ರಹ್ಮ ಸಮಾಜದ ಸದಸ್ಯರು 'ಜೈ ಬ್ರಹ್ಮೋ, ಇದು ನಮ್ಮ ದೇವಾಲಯ ಮತ್ತು ನೀವು ಅದನ್ನು ಆಕ್ರಮಿಸಿಕೊಂಡಿದ್ದೀರಿ' ಎಂದು ಘೋಷಣೆಗಳನ್ನು ಕೂಗಿದರು ಎಂದು ಹಿಮಾನಂದ್ ಆರೋಪಿಸಿದ್ದಾರೆ.
ಪ್ರತಿಯೊಬ್ಬರಿಗೂ ಪೂಜೆ ಮಾಡುವ ಹಕ್ಕಿದೆ ಆದರೆ ಆಶ್ರಮ ಸ್ವಾಧೀನಪಡಿಸಿಕೊಳ್ಳುವ ಹಕ್ಕು ಯಾರಿಗೂ ಇಲ್ಲ ಮತ್ತು ಹಿಮಾಲಯನ್ ಬ್ರಹ್ಮ ಸಮಾಜದ ಜನರು ದೇವಾಲಯವನ್ನು (ಆಶ್ರಮ) ಖಾಲಿ ಮಾಡಬೇಕು ಎಂಬುದು ನಮ್ಮ ಬೇಡಿಕೆ" ಎಂದು ಅವರು ಹೇಳಿದರು.
ದೇವಾಲಯವನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನ ನಡೆದಿದೆ ಎಂದು ಆಶ್ರಮದ ಸಹ ಕಾರ್ಯದರ್ಶಿ ಸ್ವಾಮಿ ರಾಮ್ ರೂಪಾನಂದ್ ಹೇಳಿದ್ದಾರೆ.
ಶಿಮ್ಲಾದ ಹಿಮಾಲಯನ್ ಬ್ರಹ್ಮ ಸಮಾಜದ ಟ್ರಸ್ಟಿ ಎಂ.ಆರ್.ಸಗ್ರೋಲಿ ಮಾತನಾಡಿ, ಶಿಮ್ಲಾದಲ್ಲಿ ಎರಡು ದಿನಗಳ ಬ್ರಹ್ಮ ಸಮಾಜ ಸಮ್ಮೇಳನ ನಡೆದಿದ್ದು, ದೇಶಾದ್ಯಂತದ ಅವರ ಸದಸ್ಯರು ದೇವಾಲಯಕ್ಕೆ (ಆಶ್ರಮ) ಭೇಟಿ ನೀಡಲು ಬಯಸಿದ್ದಾರೆ ಮತ್ತು ಅವರಿಗೆ ಪ್ರವೇಶಿಸಲು ಅವಕಾಶ ನೀಡಬೇಕು ಎಂದು ಹೇಳಿದರು.