Priyanka Gandhi | ಕೇರಳ ಸೀರೆ ಉಟ್ಟು ಪ್ರಮಾಣವಚನ ಸ್ವೀಕರಿಸಿದ ಪ್ರಿಯಾಂಕ ಗಾಂಧಿ

ಲೋಕಸಭೆಗೆ ಆಯ್ಕೆಯಾಗಿರುವ ಪ್ರಿಯಾಂಕ ಅವರು ಸಂಸತ್‌ನ ಹೊರಗೆ ಫೋಟೊಗಳನ್ನು ತೆಗಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಸಹೋದರಿಯ ಚಿತ್ರ ತೆಗೆಯುತ್ತಿರುವ ದೃಶ್ಯಗಳೂ ಹೆಚ್ಚು ವೀಕ್ಷಣೆಗೆ ಒಳಗಾಗಿವೆ.

Update: 2024-11-28 10:56 GMT
Priyanka Gandhi

ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಗೊಂಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಸಂಸತ್ತಿನಲ್ಲಿ ಗುರುವಾರ (ನವೆಂಬರ್‌ 28ರಂದು) ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೇ ಮೊದಲ ಬಾರಿಗೆ ಜನಪ್ರತಿನಿಧಿಯಾಗಿ ಆಯ್ಕೆಗೊಂಡಿರುವ ಪ್ರಿಯಾಂಕ, ಸಂವಿಧಾನದ ಪ್ರತಿಯೊಂದನ್ನು ಹಿಡಿದುಕೊಂಡು ಪ್ರಮಾಣವಚನ ಸ್ವೀಕರಿಸಿದ್ದಾರೆ.

ಅಂದ ಹಾಗೆ ಪ್ರಿಯಾಂಕಾ ಗಾಂಧಿ ಅವರು ಕೇರಳದ ಸಾಂಪ್ರದಾಯಿಕ ಸೀರೆ ಉಟ್ಟು ಪ್ರಮಾಣವಚನ ಸಮಾರಂಭಕ್ಕೆ ಆಗಮಿಸಿದರು. ಅಮ್ಮ ಹಾಗೂ ಅಣ್ಣ ರಾಹುಲ್‌ ಜತೆ ತೆಗೆಸಿಕೊಂಡಿರುವ ಫೋಟೋ ವೈರಲ್‌ ಆಗಿದೆ.

ಲೋಕಸಭೆಗೆ ಆಯ್ಕೆಯಾಗಿರುವ ಪ್ರಿಯಾಂಕ ಅವರು ಸಂಸತ್‌ನ ಹೊರಗೆ ಫೋಟೊಗಳನ್ನು ತೆಗಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಸಹೋದರಿಯ ಚಿತ್ರ ತೆಗೆಯುತ್ತಿರುವ ದೃಶ್ಯಗಳೂ ಹೆಚ್ಚು ವೀಕ್ಷಣೆಗೆ ಒಳಗಾಗಿವೆ.

ಪ್ರಿಯಾಂಕ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಆರ್ಶಿರ್ವಾದ ಪಡೆದಿದ್ದಾರೆ.

ಪ್ರಮಾಣ ವಚನದ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಿಯಾಂಕಾ, 'ದೇಶಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳಿಗೆ ಆದ್ಯತೆ ನೀಡುತ್ತೇನೆ. ಸಂವಿಧಾನಕ್ಕಿಂತ ಮಿಗಿಲಾಗಿ ಬೇರೆ ಏನೂ ಇಲ್ಲ. ಸಂವಿಧಾನ ರಕ್ಷಣೆಗಾಗಿ ಹೋರಾಟ ಮುಂದುವರಿಯಲಿದೆ' ಎಂದು ಹೇಳಿದ್ದಾರೆ.

ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಪ್ರಿಯಾಂಕಾ ಗಾಂಧಿ ಜಯ ಗಳಿಸಿದ್ದರು.ಈ ಮೂಲಕ ತಮ್ಮ ಸಹೋದರ ರಾಹುಲ್‌ ಅವರು ಗಳಿಸಿದ್ದ 3.5 ಲಕ್ಷ ಮತಗಳ ಗಡಿಯನ್ನೂ ಮೀರಿದ್ದಾರೆ

ಪ್ರಿಯಾಂಕಾ ಗೆಲುವಿನೊಂದಿಗೆ ಲೋಕಸಭೆಯಲ್ಲಿ ವಿರೋಧ ಪಕ್ಷಗಳ ದನಿಗೆ ಇನ್ನಷ್ಟು ಬಲ ನೀಡಲಿದೆ ಎನ್ನಲಾಗಿದೆ. ಇದಲ್ಲದೆ ಏಕಕಾಲದಲ್ಲಿ ಗಾಂಧಿ ಕುಟುಂಬದ ಮೂವರು ಸಂಸತ್ತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Tags:    

Similar News