ಊಟಿಯಲ್ಲಿ ಕಟ್ಟಡ ಕುಸಿತ, ಐವರು ಬಲಿ
ನಿರ್ಮಾಣ ಹಂತದ ಸಮೀಪದ ಕಟ್ಟಡವೊಂದು ಕುಸಿದು ಬಿದ್ದು, ಐವರು ಮಹಿಳಾ ಕಾರ್ಮಿಕರು ಸಾವಿಗೀಡಾಗಿದ್ದಾರೆ;
By : The Federal
Update: 2024-02-08 02:56 GMT
ಊಟಿ: ನಿರ್ಮಾಣ ಹಂತದ ಕಟ್ಟಡವೊಂದರ ಪಕ್ಕದ ಮನೆ ಕುಸಿದ ಪರಿಣಾಮ ಐದು ಮಂದಿ ಮಹಿಳಾ ಕಾರ್ಮಿಕರು ಸಾವನ್ನಪ್ಪಿದ ದಾರುಣ ಘಟನೆ ತಮಿಳುನಾಡಿನ ಊಟಿಯ ಲವ್ಡೇಲ್ ನಲ್ಲಿ ನಡೆದಿದೆ.
ಕಾರ್ಮಿಕರು ಕಟ್ಟಡದ ನಿರ್ಮಾಣಕ್ಕೆ ಮರಳನ್ನು ತೆಗೆಯುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಸಮೀಪದ ಕಟ್ಟಡದ ಒಂದು ಭಾಗ ಏಕಾಏಕಿ ಕುಸಿದು, ಕಾರ್ಮಿಕರು ಜೀವಂತ ಸಮಾಧಿಯಾದರು.
ಸಾರ್ವಜನಿಕರು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅವಶೇಶಗಳಡಿ ಸಿಲುಕಿದ್ದ ಇತರರನ್ನು ರಕ್ಷಿಸಿದರು.