ಲೋಕಸಭೆಯಲ್ಲಿ ''ಒಂದು ದೇಶ, ಒಂದು ಚುನಾವಣೆ'' ವಿಧೇಯಕ ಮಂಡನೆ

ಪ್ರಸ್ತಾವಿತ ವಿಧೇಯಕಕ್ಕೆ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ಎದುರಾಯಿತು. ಅದನ್ನು ತಕ್ಷಣ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಇದನ್ನು "ಪ್ರಜಾಪ್ರಭುತ್ವ ವಿರೋಧಿ ಮತ್ತು ಸಂವಿಧಾನದ ಮೂಲ ರಚನೆಯ ಉಲ್ಲಂಘನೆ" ಎಂದು ಹೇಳಿದ್ದಾರೆ.;

Update: 2024-12-17 09:13 GMT
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಂಗಳವಾರ (ಡಿಸೆಂಬರ್ 17) ಲೋಕಸಭೆಯಲ್ಲಿ ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ''ಒಂದು ದೇಶ ಒಂದು ಚುನಾವಣೆ'' ಗೆ ಸಂಬಂಧಪಟ್ಟಂತೆ ಎರಡು ಮಸೂದೆಗಳನ್ನು ಮಂಡಿಸಿದ್ದಾರೆ.



ಸಂವಿಧಾನ (129 ತಿದ್ದುಪಡಿ) ಮಸೂದೆ, 2024 ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಪುದುಚೇರಿ ಮತ್ತು ದೆಹಲಿಯ ಎನ್ಸಿಟಿ ಚುನಾವಣೆಗಳನ್ನು ಹೊಂದಿಸಲು ಪ್ರಯತ್ನಿಸುವ ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ವಿಧೇಯಕ 2024 ಅನ್ನು ಮೇಘವಾಲ್ ಮಂಡಿಸಿದರು.

ಪ್ರಸ್ತಾವಿತ ವಿಧೇಯಕಕ್ಕೆ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ತಿದ್ದುಪಡಿ ವಿಧೇಯಕವನ್ನು ತಕ್ಷಣವೇ ವಾಪಸ್​ ಪಡೆಯುವಂತೆ ಒತ್ತಾಯಿಸಿದ್ದಾರೆ. ಇದು "ಪ್ರಜಾಪ್ರಭುತ್ವ ವಿರೋಧಿ ಮತ್ತು ಸಂವಿಧಾನದ ಮೂಲ ರಚನೆಯ ಉಲ್ಲಂಘನೆ" ಎಂದು ಹೇಳಿದ್ದಾರೆ.

ವಿಧೇಯ ವಿರೋಧಿಸಿದ ಕಾಂಗ್ರೆಸ್​ನ ಮನೀಶ್ ತಿವಾರಿ, ಅದು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೂಲ ರಚನೆಗೆ ವಿರುದ್ಧ ಎಂದು ಹೇಳಿದರು. ಮಸೂದೆಗಳನ್ನು ಹಿಂತೆಗೆದುಕೊಳ್ಳುವಂತೆ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಅವುಗಳ ಮಂಡನೆ ಮತ್ತು ಪರಿಗಣನೆಯು ಸದನ ಹೊಂದಿರುವ ಶಾಸಕಾಂಗ ಸಾಮರ್ಥ್ಯ ಮೀರಿದೆ ಎಂದು ಹೇಳಿದರು.

ಒಕ್ಕೂಟ ವ್ಯವಸ್ಥೆ ಮೇಲಿನ ದಾಳಿ

ಈ ಮಸೂದೆಯು ಸಂವಿಧಾನದ ರಚನಾಕಾರರು ರೂಪಿಸಿರುವ ಒಕ್ಕೂಟ ರಚನೆಯ ಮೇಲಿನ ದಾಳಿ ಎಂದು ಧರ್ಮೇಂದ್ರ ಯಾದವ್ (ಎಸ್ಪಿ) ಹೇಳಿದ್ದಾರೆ. ವಿಧಾನಸಭಾ ಚುನಾವಣೆಗಳನ್ನು ಒಟ್ಟಿಗೆ ನಡೆಸಲು ಸಾಧ್ಯವಿಲ್ಲವಾದರೂ ಮೋದಿ ನೇತೃತ್ವದ ಸರ್ಕಾರ 'ಒಂದು ರಾಷ್ಟ್ರ, ಒಂದು ಚುನಾವಣೆ' ಬಗ್ಗೆ ಮಾತನಾಡುತ್ತಿದೆ ಎಂದು ಅವರು ಹೇಳಿದ್ದಾರೆ .

ಡಿಎಂಕೆಯ ಟಿ.ಆರ್.ಬಾಲು ಅವರು ಬೃಹತ್ ಪ್ರಕ್ರಿಯೆ ನಡೆಸಲು ತಗಲುವ ವೆಚ್ಚ ಎಷ್ಟಾಗಬಹುದು ಎಂದು ಪ್ರಶ್ನಿಸಿದ್ದಾರೆ.

ಇದು ಸಂವಿಧಾನದ ಮೂಲ ರಚನೆಗೆ ಧಕ್ಕೆ ತರುತ್ತದೆ ಎಂದು ಟಿಎಂಸಿಯ ಕಲ್ಯಾಣ್ ಬ್ಯಾನರ್ಜಿ ಹೇಳಿದರು. ಈ ಪ್ರಸ್ತಾಪವು ಪ್ರಸ್ತುತ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದರು.

ಮಿತ್ರಪಕ್ಷಗಳ ಬೆಂಬಲ

ಮಸೂದೆಗೆ ಎನ್​​ಡಿಎ ಮಿತ್ರಪಕ್ಷಗಳಿಂದ ಬೆಂಬಲ ದೊರೆಯಿತು. ಟಿಡಿಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬೆಂಬಲ ನೀಡಿವೆ. ಟಿಡಿಪಿಯ ಚಂದ್ರ ಶೇಖರ್ ಪೆಮ್ಮಸಾನಿ ಮಸೂದೆ ಬೆಂಬಲಿಸಿದರು. ತಮ್ಮ ಪಕ್ಷವು ಈ ಪ್ರಸ್ತಾಪಕ್ಕೆ ಅಚಲ ಬೆಂಬಲ ನೀಡುತ್ತದೆ ಎಂದು ಹೇಳಿದರು.

Tags:    

Similar News