Mahakumbh 2025 | ಮಹಾಕುಂಭ ಮೇಳಕ್ಕೆ ಐಆರ್‌ಸಿಟಿಸಿಯಿಂದ ಟೆಂಟ್‌ ಸಿಟಿ; ಒಂದು ರಾತ್ರಿಗೆ 6500 ರೂ!

ಮಹಾಕುಂಭ ಗ್ರಾಮವನ್ನು ನಿರ್ಮಿಸಲಾಗುವುದು ಮತ್ತು ಯಾತ್ರಿಗಳ ಮತ್ತು ಪ್ರವಾಸೋದ್ಯಮಕ್ಕೆ ಪೂರಕವಾಗಿರಲಿದೆ. ಈ ಟೆಂಟ್‌ ನಗರದಲ್ಲಿ ಐಷಾರಾಮಿ ವಸತಿ ವ್ಯವಸ್ಥೆಗಳು ಮತ್ತು ಸಾಂಸ್ಕೃತಿಕ ಅನುಭವ ಪಡೆಯಬಹುದು.;

Update: 2024-11-21 08:53 GMT
Mahakumbh 2025; IRCTC to set up tent city at Prayagraj; Rs 6,000 per night for couple

ಭಾರತೀಯ ರೈಲ್ವೆಯ ಕ್ಯಾಟರಿಂಗ್‌ ಮತ್ತು ಪ್ರವಾಸೋದ್ಯಮ ನಿಯಮಿತವು ಮುಂದಿನ ವರ್ಷ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭ ಮೇಳಕ್ಕೆ ಬೃಹತ್‌ ಯೋಜನೆಯೊಂದನ್ನು ಪ್ರಕಟಿಸಿದೆ. ಮೇಳಕ್ಕೆ ಭೇಟಿ ನೀಡುವವರ ಅನುಕೂಲಕ್ಕಾಗಿ ಟೆಂಟ್‌ ಸಿಟಿಯೊಂದನ್ನು ನಿರ್ಮಿಸಲಿದ್ದುಒಂದು ಜೋಡಿಗೆ ಒಂದು ರಾತ್ರಿ ತಂಗುವುದಕ್ಕೆ 6000 ರೂಪಾಯಿ ನಿಗದಿ ಮಾಡಿದೆ.


ಮಹಾಕುಂಭ ಗ್ರಾಮವನ್ನು ನಿರ್ಮಿಸಲಾಗುವುದು. ಇದು ಯಾತ್ರಿಗಳ ಸಂಭ್ರಮಕ್ಕೆ ಮತ್ತು ಪ್ರವಾಸೋದ್ಯಮಕ್ಕೆ ಪೂರಕವಾಗಿರಲಿದೆ. ಈ ಟೆಂಟ್‌ ನಗರದಲ್ಲಿ ಐಷಾರಾಮಿ ವಸತಿ ವ್ಯವಸ್ಥೆಗಳು ಮತ್ತು ಸಾಂಸ್ಕೃತಿಕ ಅನುಭವ ಪಡೆಯಬಹುದು. ಇದರೊಂದಿಗೆ ಭಾರತೀಯ ಧಾರ್ಮಿಕ ವೈವಿಧ್ಯತೆಯನ್ನು ಆಚರಿಸಲಾಗುತ್ತದೆ ಎಂದು ಐಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಸಂಜಯ್‌ ಕುಮಾರ್‌ ಜೈನ್‌ ಹೇಳಿದ್ದಾರೆ.

"ಇಲ್ಲಿಗೆ ಭೇಟಿ ನೀಡುವ ಎಲ್ಲ ಯಾತ್ರಿಗಳಿಗೆ ಸುಲಭವಾಗಿ ದೊರಕುವ ಅನುಕೂಲಕರ ಮತ್ತು ಸಮೃದ್ಧ ಅನುಭವ ನೀಡುವುದೇ ನಮ್ಮ ಗುರಿಯಾಗಿದೆ,ʼʼ ಎಂದು ಅವರು ಹೇಳಿದ್ದಾರೆ.

ಐಆರ್‌ಸಿಟಿಸಿ ರೈಲ್ವೆ ಇಲಾಖೆಯಡಿಯಲ್ಲಿರುವ ಸಾರ್ವಜನಿಕ ವಲಯದ ಸಂಸ್ಥೆಯಾಗಿದ್ದು ಧಾರ್ಮಿಕ ಪ್ರವಾಸೋದ್ಯಮ ಮತ್ತು ಆರೈಕೆ ಸೇವಾ ಕ್ಷೇತ್ರದಲ್ಲಿ ಅತ್ಯುತ್ತಮ ಅನುಭವ ಹೊಂದಿದೆ. ರಾಷ್ಟ್ರವ್ಯಾಪಿ ರೈಲು ಜಾಲದ ಮೂಲದ ಸೇವೆ ನೀಡುವ ಐಆರ್‌ಸಿಟಿಟಿ ಆಸ್ತಾ ಮತ್ತು ಭಾರತ್‌ ಗೌರವ್‌ ರೈಲಿನ ಮೂಲಕ 6.5 ಲಕ್ಷ ಗ್ರಾಹಕರಿಗೆ ಸೇವೆ ನೀಡಿದೆ.

ಐಆರ್‌ಸಿಟಿಸಿ ನಿರ್ಮಾಣ ಮಾಡಲಿರುವ ʼಕುಂಭ ಗ್ರಾಮʼವು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ತಾಣವಾಗಲಿದೆ ಎಂದು ಕಂಪನಿಯು ಹೇಳಿದೆ.

ಮಹಾಕುಂಭ ಗ್ರಾಮದ ಟೆಂಟ್‌ ಸಿಟಿಯಲ್ಲಿ ಉಳಿದುಕೊಳ್ಳುವುದಕ್ಕೆ ಐಆರ್‌ಸಿಟಿಸಿ ವೆಬ್‌ ಮೂಲಕ ನೇರ ಬುಕಿಂಗ್‌ ಮಾಡಬಹುದು ಅಥವಾ ರೈಲ್‌ ಟೂರ್‌ ಪ್ಯಾಕೇಜ್‌ ಮತ್ತು ಭಾರತ್‌ ಗೌರವ್‌ ರೈಲಿನ ಕೊಠಡಿ ಕಾಯ್ದಿರಿಸಬಹುದು ಎಂದು ಐಆರ್‌ಸಿಟಿಸಿಯ ನಿರ್ದೇಶಕ ರಾಹುಲ್‌ ಹಿಮಾಲಿಯನ್‌ ಹೇಳಿದ್ದಾರೆ. ಮಹಾಕುಂಭ ಗ್ರಾಮದಲ್ಲಿರುವ ಟೆಂಟ್‌ ಸಿಟಿಯಲ್ಲಿ ಆಧುನಿಕ ಸೌಕರ್ಯಗಳೊಂದಿಗೆ ಐಷಾರಾಮಿ ಸೇವೆ ನೀಡಲಿದೆ. ಈ ಮೂಲಕ ಅತಿಥಿಗಳಿಗೆ ಅತ್ಯುನ್ನತ ಆರಾಮ ನೀಡಲಾಗುತ್ತದೆ ಎಂದು ಹೇಳಿದರು.

ಒಂದು ಬುಕಿಂಗ್‌ನಲ್ಲಿ ಒಂದು ರಾತ್ರಿ ತಂಗಲು 6000 ರೂಪಾಯಿ ನಿಗದಿ ಮಾಡಲಾಗಿದ್ದು ಇಬ್ಬರು ತಂಗಬಹುದು. ಬೆಳಗ್ಗಿನ ಉಪಾಹಾರ ಅದರಲ್ಲಿ ಸೇರಿಕೊಂಡಿದೆ.

ಹೆಚ್ಚಿನ ಮಾಹಿತಿಗಾಗಿ ಕಸ್ಟಮರ್‌ಕೇರ್‌ ಸೇವೆಗೆ ಕರೆ ಮಾಡಬಹುದು ಎಂಬುದಾಗಿಯೂ ಅವರು ಹೇಳಿದ್ದಾರೆ.

Tags:    

Similar News