Gurpreet Gogi Bassi: ಎಎಪಿ ಶಾಸಕ ಗುರ್ಪ್ರೀತ್ ಗೋಗಿ ಗುಂಡೇಟಿಗೆ ಬಲಿ
Gurpreet Gogi Bassi: ಪಂಜಾಬ್ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಗುರ್ಪ್ರೀತ್ ಗೋಗಿ ಶನಿವಾರ (ಜನವರಿ 11) ತಲೆಗೆ ಗುಂಡು ತಗುಲಿದ ನಂತರ ನಿಧನರಾದರು.;
ಆಕಸ್ಮಿಕವಾಗಿ ಹಾರಿದ ಗುಂಡು ತಗುಲಿ ಶಾಸಕ ಗುರ್ಪ್ರೀತ್ ಗೋಗಿ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಸದಸ್ಯರನ್ನು ಉಲ್ಲೇಖಿಸಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಪಂಜಾಬ್‌ನ ಲುಧಿಯಾನ ಪಶ್ಚಿಮ ಕ್ಷೇತ್ರದ ಆಮ್ ಆದ್ಮಿ (Aam Aadmi Party) ಪಕ್ಷದ ಶಾಸಕ ಗುರುಪ್ರೀತ್ ಗೋಗಿ ಬಸ್ಸಿ (Gurpreet Gogi Bassi) ಶುಕ್ರವಾರ ತಡರಾತ್ರಿ ಗುಂಡೇಟಿನಿಂದ ಮೃತಪಟ್ಟಿದ್ದಾರೆ. ಆಕಸ್ಮಿಕವಾಗಿ ಗುಂಡು ತಗುಲಿ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆಧರೆ, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
58 ವರ್ಷದ ಎಎಪಿ ಶಾಸಕರನ್ನು ಕುಟುಂಬ ಸದಸ್ಯರು ಶುಕ್ರವಾರ ರಾತ್ರಿ 12 ಗಂಟೆಗೆ ದಯಾನಂದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಸ್ಪತ್ರೆಗೆ ಸಾಗಿಸುವ ಮಧ್ಯೆಯೇ ಅವರು ಮೃತಪಟ್ಟಿದ್ದರು.
2022ರಲ್ಲಿ ಎಎಪಿ ಸೇರಿದ್ದ ಗುರುಪ್ರೀತ್ ಗೋಗಿ ಬಸ್ಸಿ, ಲೂಧಿಯಾನ (ಪಶ್ಚಿಮ) ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದರು. ಅವರು ಎರಡು ಬಾರಿ ಶಾಸಕರಾದ ಭರತ್ ಭೂಷಣ್ ಆಶು ಅವರನ್ನು ಸೋಲಿಸಿ ಶಾಸಕರಾಗಿದ್ದರು. ಗೋಗಿ ಮೃತಪಟ್ಟಿರುವುದನ್ನು ಎಎಪಿ ಜಿಲ್ಲಾ ಅಧ್ಯಕ್ಷ ಶರಣಪಾಲ್ ಸಿಂಗ್ ಮಕ್ಕರ್ ಮತ್ತು ಪೊಲೀಸ್ ಕಮಿಷನರ್ ಕುಲದೀಪ್ ಸಿಂಗ್ ಚಹಲ್ ಮೃತಪಟ್ಟಿದ್ದಾರೆ.
ಶಾಸಕರಿಗೆ ಗುಂಡು ತಗುಲಿದ ಸುದ್ದಿ ತಿಳಿಯುತ್ತಿದ್ದಂತೆ ಕಮಿಷನರ್ ಚಹಲ್ ಆಸ್ಪತ್ರೆಗೆ ಧಾವಿಸಿದ್ದರು. ಬಸ್ಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಆಕಸ್ಮಿಕವಾಗಿ ಗುಂಡು ಹಾರಿ ಮೃತಪಟ್ಟಿದ್ದಾರೆಯೋ ಎಂಬುದು ಮರಣೋತ್ತರ ವರದಿಯಿಂದ ದೃಢಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಎಎಪಿ ಜಿಲ್ಲಾ ಕಾರ್ಯದರ್ಶಿ ಪರಮವೀರ್ ಸಿಂಗ್ ಮಾತನಾಡಿ, ಶಾಸಕರು ದಿನನಿತ್ಯದ ಕಾರ್ಯಕ್ರಮಗಳನ್ನು ಮುಗಿಸಿ ಘುಮರ್ ಮಂಡಿಯಲ್ಲಿರುವ ತಮ್ಮ ಮನೆಗೆ ಮರಳಿದ್ದರು. ಗೋಗಿ ಪತ್ನಿ ಡಾ ಸುಖಚೈನ್ ಕೌರ್ ಗೋಗಿ ಗುಂಡಿನ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಭದ್ರತಾ ಸಿಬ್ಬಂದಿಯ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಗೋಗಿ ಅವರು ಪತ್ನಿ, ಒಬ್ಬ ಮಗ ಮತ್ತು ಮಗಳು ಇದ್ದಾರೆ.
ಸಾವಿಗೂ ಮುನ್ನ ಶಾಸಕ ಬಸ್ಸಿ ಶುಕ್ರವಾರ ಮುಂಜಾನೆ, ಪಂಜಾಬ್ ವಿಧಾನಸಭಾ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಮತ್ತು ಸಂಸದ ಸಂತ ಬಾಬಾ ಬಲ್ಬೀರ್ ಸಿಂಗ್ ಸೀಚೆವಾಲ್ ಅವರನ್ನು ಲುಧಿಯಾನದಲ್ಲಿ ಬುದ್ಧ ನುಲ್ಲಾ ಸ್ವಚ್ಛತಾ ಅಭಿಯಾನದ ಸಲುವಾಗಿ ಭೇಟಿ ಮಾಡಿದ್ದರು ಎಂದು ತಿಳಿದು ಬಂದಿದೆ. ನಂತರ ಪ್ರಾಚಿನ್ ಶೀಟ್ಲಾ ಮಾತಾ ಮಂದಿರಕ್ಕೆ ಭೇಟಿ ನೀಡಿ, ಎರಡು ದಿನಗಳ ಹಿಂದೆ ದೇವಸ್ಥಾನದಿಂದ ಬೆಳ್ಳಿ ಕಳ್ಳತನ ಮಾಡಿರುವ ಕಳ್ಳರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭಕ್ತರಿಗೆ ಭರವಸೆ ನೀಡಿದ್ದರು.