ಟೆಕ್ಕಿ ಅತುಲ್ ಆತ್ಮಹತ್ಯೆ ಪ್ರಕರಣ | ಮೊಮ್ಮಗನನ್ನು ಕೊಡದಿದ್ದರೆ ಸಾಮೂಹಿಕ ಆತ್ಮಹತ್ಯೆ: ಅತುಲ್ ತಂದೆ ಬೆದರಿಕೆ
ಅತುಲ್ ಅವರ ತಂದೆ ಪವನ್ ಕುಮಾರ್ ಮೋದಿ ಅವರು ಬಿಹಾರದ ವೈನಿ ಪೊಲೀಸ್ ಠಾಣೆಯಲ್ಲಿ ತಮ್ಮ ಮೊಮ್ಮಗನನ್ನು ಕಸ್ಟಡಿಗೆ ನೀಡುವಂತೆ ಕೋರಿ ಎಫ್ಐಆರ್ ದಾಖಲಿಸಿದ್ದಾರೆ.
ಪತ್ನಿ ಮತ್ತು ಅತ್ತೆ-ಮಾವಂದಿರ ಮೇಳೆ ಮಾನಸಿಕ ಕಿರುಕುಳ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಅವರ ತಂದೆ ಈಗ ತಮ್ಮ ಮೊಮ್ಮಗನನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಒತ್ತಾಯಸಿದ್ದಾರೆ. ಕೊಡದೇ ಹೋದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಅತುಲ್ ಅವರ ತಂದೆ ಪವನ್ ಕುಮಾರ್ ಮೋದಿ ಅವರು ಬಿಹಾರದ ವೈನಿ ಪೊಲೀಸ್ ಠಾಣೆಯಲ್ಲಿ ತಮ್ಮ ಮೊಮ್ಮಗನನ್ನು ಕಸ್ಟಡಿಗೆ ನೀಡುವಂತೆ ಕೋರಿ ಎಫ್ಐಆರ್ ದಾಖಲಿಸಿದ್ದಾರೆ.
ಈ ಪ್ರಕರಣವು ಉತ್ತರ ಪ್ರದೇಶದ ಜೌನ್ಪುರ ಜಿಲ್ಲೆಗೆ ಸಂಬಂಧಿಸಿರುವುದರಿಂದ, ಹೆಚ್ಚಿನ ತನಿಖೆ ಮತ್ತು ಕ್ರಮಕ್ಕಾಗಿ ಅರ್ಜಿ ಮತ್ತು ಎಫ್ಐಆರ್ ಅನ್ನು ಜೌನ್ಪುರ ಪೊಲೀಸರಿಗೆ ರವಾನಿಸಲಾಗಿದೆ. ತನ್ಮಧ್ಯೆ, ತಮ್ಮ 2 ವರ್ಷದ ಮೊಮ್ಮಗನ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು ಪವನ್ ಕುಮಾರ್ ಮೋದಿ ಮಗುವನ್ನು ಕೊಡುವಂತೆ ಒತ್ತಾಯಿಸುತ್ತಿದ್ದಾರೆ.
ಅತುಲ್ ಸುಭಾಷ್ ಅವರ ಪತ್ನಿ ನಿಕಿತಾ ಸಿಂಘಾನಿಯಾ ಅವರ ಬಂಧನದ ಕೆಲವೇ ಗಂಟೆಗಳ ನಂತರ, ಮೋದಿ ಅವರು. ಮಗುವನ್ನು ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಮೊಮ್ಮಗನನ್ನು ಒಮ್ಮೆ ಮಾತ್ರ ವೀಡಿಯೊ ಕರೆ ಮೂಲಕ ನೋಡಿದ್ದೆ. ಮಗುವಿನ ಸುರಕ್ಷತೆಯ ಬಗ್ಗೆ ನನಗೆ ಕಳವಳ ಉಂಟಾಗಿದೆ ಎಂದು ಹೇಳಿದ್ದರು. ಎಲ್ಲರೂ ಬಂಧನಕ್ಕೆ ಒಳಗಾಗಿರುವ ಕಾರಣ ಮಗುವಿನ ಕಾಳಜಿಯ ಆತಂಕ ಶುರುವಾಗಿದೆ ಎಂದು ಹೇಳಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಮಗುವನ್ನು ಪತ್ತೆ ಹಚ್ಚಿ ಜನವರಿ 7ರೊಳಗೆ ವರದಿ ಸಲ್ಲಿಸುವಂತೆ ಉತ್ತರ ಪ್ರದೇಶ ಸೇರಿದಂತೆ ಮೂರು ರಾಜ್ಯಗಳ ಡಿಜಿಪಿಗಳಿಗೆ ನೋಟಿಸ್ ಕಳುಹಿಸಿದೆ.
ನ್ಯಾಯಕ್ಕಾಗಿ ಆತ್ಮಹತ್ಯೆ ಎಂದಿದ್ದ ಸುಭಾಷ್
ಡಿಸೆಂಬರ್ 9 ರಂದು ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಚ್ಛೇದನ, ಜೀವನಾಂಶ ಮತ್ತು ಮಕ್ಕಳ ಕಸ್ಟಡಿ ಕುರಿತು ನಡೆಯುತ್ತಿರುವ ನಡುವೆ ತನ್ನ ಪತ್ನಿ ನಿಕಿತಾ, ಆಕೆಯ ತಾಯಿ ನಿಶಾ, ಸಹೋದರ ಅನುರಾಗ್ ಮತ್ತು ಚಿಕ್ಕಪ್ಪ ಸುಶೀಲ್ ಸಿಂಘಾನಿಯಾ ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. 90 ನಿಮಿಷಗಳ ವೀಡಿಯೊ ಮತ್ತು 40 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಕಾಣೆಯಾದ ಮಗುವನ್ನು ಪತ್ತೆ ಹಚ್ಚಿ ಜನವರಿ 7 ರೊಳಗೆ ವರದಿ ಸಲ್ಲಿಸುವಂತೆ ಉತ್ತರ ಪ್ರದೇಶ ಸೇರಿದಂತೆ ಮೂರು ರಾಜ್ಯಗಳ ಡಿಜಿಪಿಗಳಿಗೆ ನೋಟಿಸ್ ಕಳುಹಿಸಿದೆ.