ದೆಹಲಿಯ ಆರು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ
ಆಂಧ್ರ ಸ್ಕೂಲ್, ಬಿಜಿಎಸ್ ಇಂಟರ್ನ್ಯಾಷನಲ್ ಸ್ಕೂಲ್, ರಾವ್ ಮಾನ್ ಸಿಂಗ್ ಸ್ಕೂಲ್, ಕಾನ್ವೆಂಟ್ ಸ್ಕೂಲ್, ಮ್ಯಾಕ್ಸ್ ಫೋರ್ಟ್ ಸ್ಕೂಲ್ ಮತ್ತು ದ್ವಾರಕಾದ ಇಂದ್ರಪ್ರಸ್ಥ ಇಂಟರ್ನ್ಯಾಷನಲ್ ಸ್ಕೂಲ್‌ಗಳಿಗೆ ಬೆದರಿಕೆ ಬಂದಿವೆ.;
ರಾಷ್ಟ್ರ ರಾಜಧಾನಿಯ ಸುಮಾರು 50 ಶಾಲೆಗಳಿಗೆ ಇಮೇಲ್ ಮೂಲಕ ಮತ್ತೆ ಬಾಂಬ್ ಬೆದರಿಕೆಗಳು ಬಂದಿವೆ.
ದೆಹಲಿಯ ಆರು ಶಾಲೆಗಳಿಗೆ ಗುರುವಾರ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿದ್ದು, ಪೊಲೀಸರು ಮತ್ತು ಇತರ ತುರ್ತು ಸಂಸ್ಥೆಗಳು ಶೋಧ ಕಾರ್ಯಾಚರಣೆಗಳನ್ನು ಪ್ರಾರಂಭಿಸಿವೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜಧಾನಿಯ ಆರು ಶಾಲೆಗಳಿಗೆ ಬೆಳಿಗ್ಗೆ 6.35 ರಿಂದ 7.48 ರ ನಡುವೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ.
ಪ್ರಸಾದ್ ನಗರದಲ್ಲಿರುವ ಆಂಧ್ರ ಸ್ಕೂಲ್, ಬಿಜಿಎಸ್ ಇಂಟರ್ನ್ಯಾಷನಲ್ ಸ್ಕೂಲ್, ರಾವ್ ಮಾನ್ ಸಿಂಗ್ ಸ್ಕೂಲ್, ಕಾನ್ವೆಂಟ್ ಸ್ಕೂಲ್, ಮ್ಯಾಕ್ಸ್ ಫೋರ್ಟ್ ಸ್ಕೂಲ್ ಮತ್ತು ದ್ವಾರಕಾದ ಇಂದ್ರಪ್ರಸ್ಥ ಇಂಟರ್ನ್ಯಾಷನಲ್ ಸ್ಕೂಲ್‌ಗಳಿಗೆ ಬಾಂಬ್ ಬೆದರಿಕೆ ಬಂದಿವೆ.
ಪೊಲೀಸ್ ತಂಡಗಳು, ಅಗ್ನಿಶಾಮಕ ದಳ ಮತ್ತು ಬಾಂಬ್ ನಿಷ್ಕ್ರಿಯ ದಳಗಳು ತಕ್ಷಣ ಆವರಣಕ್ಕೆ ಧಾವಿಸಿವೆ.
ನಾಲ್ಕು ದಿನಗಳಲ್ಲಿ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿರುವ ಮೂರನೇ ಘಟನೆ ಇದಾಗಿದೆ. ಸೋಮವಾರ, ದೆಹಲಿಯಾದ್ಯಂತ 32 ಶಾಲೆಗಳಿಗೆ ಇದೇ ರೀತಿಯ ಬೆದರಿಕೆಗಳು ಬಂದಿದ್ದವು.