'ಎನ್‌ಸಿಪಿ-ಎಸ್‌ಪಿ' ಹೆಸರು ಬಳಸಲು ಸುಪ್ರೀಂ ಅನುಮತಿ

Update: 2024-03-19 15:35 GMT

ಮಾ.19-ಮಹಾರಾಷ್ಟ್ರದಲ್ಲಿ ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ 'ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರದ್‌ಚಂದ್ರ ಪವಾರ್' ಹೆಸರು ಬಳಸಲು ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು ಎನ್‌ಸಿಪಿ-ಎಸ್ಪಿ ಬಣಕ್ಕೆ ʻತುತ್ತೂರಿʼ ಸಂಕೇತವನ್ನು ನೀಡಿದೆ. ಅಜಿತ್ ಪವಾರ್ ಬಣ 'ಗಡಿಯಾರ' ಚಿಹ್ನೆಯನ್ನು ಬಳಸದಂತೆ ತಡೆ ನೀಡಬೇಕೆಂದು ಕೋರಿ ಶರದ್ ಪವಾರ್ ಗುಂಪು ಮನವಿ ಮಾಡಿತ್ತು. ಶರದ್ ಪವಾರ್ ಅವರು ಸ್ಥಾಪಿಸಿದ ಎನ್‌ಸಿಪಿ, ವಿಭಜನೆಗೆ ಮುನ್ನ 'ಗಡಿಯಾರ'ವನ್ನು ಚುನಾವಣೆ ಚಿಹ್ನೆಯಾಗಿ ಹೊಂದಿತ್ತು. ಈ ಚಿಹ್ನೆ ಈಗ ಅಜಿತ್ ಪವಾರ್ ಬಣದ ಪಾಲಾಗಿದೆ. 

ಎನ್‌ಸಿಪಿ -ಎಸ್‌ಸಿ ಬಣದ ಚಿಹ್ನೆ 'ತುತ್ತೂರಿʼ. ಈ ಚಿಹ್ನೆಯನ್ನು ಬೇರೆ ಯಾವುದೇ ಪಕ್ಷ ಅಥವಾ ಸ್ವತಂತ್ರ ಅಭ್ಯರ್ಥಿಗೆ ನೀಡಬಾರದು ಎಂದು ಚುನಾವಣೆ ಆಯೋಗ ಮತ್ತು ರಾಜ್ಯ ಚುನಾವಣೆ ಆಯೋಗಕ್ಕೆ ಪೀಠ ಸೂಚಿಸಿದೆ. 'ಗಡಿಯಾರ' ಚಿಹ್ನೆ ವಿವಾದ ನ್ಯಾಯಾಲಯದಲ್ಲಿದ್ದು, ಅದರ ಬಳಕೆಯು ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ವಾರ್ತಾ ಪತ್ರಿಕೆಗಳಲ್ಲಿ ಸಾರ್ವಜನಿಕ ತಿಳಿವಳಿಕೆಯನ್ನು ನೀಡುವಂತೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಬಣಕ್ಕೆ ಸೂಚಿಸಿದೆ.

ಅಜಿತ್‌ ಪವಾರ್‌ ಬಣವನ್ನು ನಿಜವಾದ ಎನ್‌ಸಿಪಿ ಎಂದು ಚುನಾವಣಾ ಆಯೋಗ ಫೆಬ್ರವರಿ 6 ರಂದು ಆದೇಶ ನೀಡಿತ್ತು. ಈ ಆದೇಶದ ವಿರುದ್ಧ ಶರದ್ ಪವಾರ್ ಗುಂಪು ಮನವಿ ಸಲ್ಲಿಸಿದ್ದು, ಇದಕ್ಕೆ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಅಜಿತ್ ಪವಾರ್ ಬಣವನ್ನು ಕೇಳಿದೆ.

Tags:    

Similar News