Rahul Gandhi | ರಾಹುಲ್ ಗಾಂಧಿ, ಪ್ರಿಯಾಂಕಾಗೆ ಸಂಭಲ್​ ಪ್ರವೇಶಿಸದಂತೆ ಗಡಿಯಲ್ಲೇ ತಡೆ

ಉದ್ವಿಗ್ನ ಪರಿಸ್ಥಿತಿಯು ಗಡಿಯಲ್ಲಿರುವ ಜನನಿಬಿಡ ದೆಹಲಿ-ಮೀರತ್ ಎಕ್ಸ್​ಪ್ರೆಸ್​ ವೇನಲ್ಲಿ ಭಾರಿ ಟ್ರಾಫಿಕ್ ಜಾಮ್​ಗೆ ಕಾರಣವಾಯಿತು. ಗಾಜಿಯಾಬಾದ್ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿಗಾಗಿ ಜಮಾಯಿಸಿದ್ದರು.;

Update: 2024-12-04 09:14 GMT
Rahul, Priyanka stopped on way to Sambhal; traffic chaos on highway

ಸಂಸದರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಗಲಭೆ ಪೀಡಿತ ಸಂಭಲ್​ ಪ್ರದೇಶಕ್ಕೆ ಹೋಗದಂತೆ ತಡೆಯಲಾಗಿದೆ. ದೆಹಲಿ-ಮೀರತ್ ಎಕ್ಸ್​ಪ್ರೆಸ್​ವೇನ ಗಾಜಿಪುರದ ಗಡಿಯಲ್ಲಿ ಅವರನ್ನು ತಡೆಯಲಾಯಿತು.


ದೆಹಲಿಯ ಗಡಿಯಲ್ಲಿ ಭಾರಿ ಪೊಲೀಸ್ ಬ್ಯಾರಿಕೇಡ್​​ಗಗಳನ್ನು ಹಾಕಲಾಗಿತ್ತು. ಅದರ ಹೊರತಾಗಿಯೂ ಸಂಭಲ್​ನಲ್ಲಿ ಪೊಲೀಸ್ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳನ್ನು ಭೇಟಿ ಮಾಡಲು ರಾಹುಲ್ ಮತ್ತು ಸೋನಿಯಾ ಹೊರಟಿದ್ದರು. ಆದರೆ ಅವರಿಗೆ ಅದಕ್ಕೆ ಪೊಲೀಸರು ಅವಕಾಶ ಕೊಡಲಿಲ್ಲ.

ಉದ್ವಿಗ್ನ ಪರಿಸ್ಥಿತಿಯು ಗಡಿಯಲ್ಲಿರುವ ಜನನಿಬಿಡ ದೆಹಲಿ-ಮೀರತ್ ಎಕ್ಸ್​ಪ್ರೆಸ್​ ವೇನಲ್ಲಿ ಭಾರಿ ಟ್ರಾಫಿಕ್ ಜಾಮ್​ಗೆ ಕಾರಣವಾಯಿತು. ಗಾಜಿಯಾಬಾದ್ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿಗಾಗಿ ಜಮಾಯಿಸಿದ್ದರು.

ಗಾಜಿಪುರ ಗಡಿಯಲ್ಲಿ ಸಿಲುಕಿರುವ ರಾಹುಲ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, "ನಾವು ಸಂಭಾಲ್​ಗೆ ಹೋಗಲು ಪ್ರಯತ್ನಿಸುತ್ತಿದ್ದೇವೆ. ಪೊಲೀಸರು ನಿರಾಕರಿಸುತ್ತಿದ್ದಾರೆ, ಅವರು ನಮಗೆ ಅವಕಾಶ ನೀಡುತ್ತಿಲ್ಲ. ಲೋಕಸಭಾ ಸದಸ್ಯರಾಗಿ ಅಲ್ಲಿಗೆ ಹೋಗುವುದು ನನ್ನ ಹಕ್ಕು, ಆದರೆ ಅವರು ನನ್ನನ್ನು ತಡೆಯುತ್ತಿದ್ದಾರೆ ಎಂದು ಹೇಳಿದರು.

ನನ್ನ ಹಕ್ಕುಗಳಿಗೆ ವಿರುದ್ಧ

ತಾನು ಒಬ್ಬಂಟಿಯಾಗಿ ಅಥವಾ ಪೊಲೀಸರೊಂದಿಗೆ ಹೋಗಲು ಸಿದ್ಧನಿದ್ದೇನೆ ಎಂದು ರಾಹುಲ್ ಹೇಳಿದರು. ಆದರೆ ಪೊಲೀಸರು ಒಪ್ಪಿಲ್ಲ "ನಾವು ಮುಂದಿನ ದಿನಗಳಲ್ಲಿ ಬಂದರೆ ನಮ್ಮನ್ನು ಹೋಗಲು ಬಿಡುತ್ತಾರೆ ಎಂದು ಅವರು ಹೇಳುತ್ತಿದ್ದಾರೆ. ಇದು ಸಂಸದನಾಗಿ ನನ್ನ ಹಕ್ಕುಗಳಿಗೆ ವಿರುದ್ಧವಾಗಿದೆ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ" ಎಂದು ಅವರು ಹೇಳಿದರು.

"ನಾವು ಸಂಭಾಲ್ಗೆ ಹೋಗಿ ಅಲ್ಲಿ ಏನಾಯಿತು ಎಂದು ನೋಡಲು ಬಯಸುತ್ತೇವೆ. ನಾವು ಜನರನ್ನು ಭೇಟಿಯಾಗಲು ಬಯಸುತ್ತೇವೆ. ನನ್ನ ಸಾಂವಿಧಾನಿಕ ಹಕ್ಕನ್ನು ನನಗೆ ನೀಡಲಾಗುತ್ತಿಲ್ಲ. ಇದು ಹೊಸ ಭಾರತ, ಇದು ಸಂವಿಧಾನವನ್ನು ಕೊನೆಗೊಳಿಸುವ ಭಾರತ. ಇದು ಅಂಬೇಡ್ಕರ್ ಅವರ ಸಂವಿಧಾನವನ್ನು ಕೊನೆಗೊಳಿಸುವ ಭಾರತ. ನಾವು ಹೋರಾಟವನ್ನು ಮುಂದುವರಿಸುತ್ತೇವೆ" ಎಂದು ರಾಹುಲ್ ಹೇಳಿದರು .

" ರಾಹುಲ್ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರಿಗೆ ಸಾಂವಿಧಾನಿಕ ಹಕ್ಕು ಇದೆ. ಅವರು ಇತರ ಜನರಿಗಿಂತ ಭಿನ್ನ . ಅವರನ್ನು ತಡೆಯಲು ಸಾಧ್ಯವಿಲ್ಲ. ಸಂತ್ರಸ್ತರನ್ನು ಭೇಟಿ ಮಾಡಲು ಅವರಿಗೆ ಸಾಂವಿಧಾನಿಕ ಹಕ್ಕಿದೆ" ಎಂದು ಪ್ರಿಯಾಂಕಾ ಸುದ್ದಿಗಾರರಿಗೆ ತಿಳಿಸಿದರು.

ರಾಹುಲ್ ಭೇಟಿ ವಿಫಲಗೊಳಿಸಲು ಪೊಲೀಸರು ಸಿದ್ಧತೆ

ರಾಹುಲ್ ಮತ್ತು ಅವರ ಬೆಂಬಲಿಗರ ಯೋಜಿತ ಭೇಟಿಯನ್ನು ವಿಫಲಗೊಳಿಸಲು ಉತ್ತರ ಪ್ರದೇಶ ಪೊಲೀಸ್ ಸಿಬ್ಬಂದಿ ವಾಹನಗಳನ್ನು ಪರಿಶೀಲಿಸುವಲ್ಲಿ ನಿರತರಾಗಿದ್ದರು.

"ಅಹಿತಕರ ಘಟನೆ ನಡೆಯದಂತೆ ನಾವು ಭದ್ರತಾ ಸಿಬ್ಬಂದಿ ನಿಯೋಜಿಸಿದ್ದೇವೆ" ಎಂದು ಸಹಾಯಕ ಪೊಲೀಸ್ ಆಯುಕ್ತ ಸ್ವತಂತ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಸಂಭಾಲ್​​ನಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ರಾಹುಲ್ ಅವರಿಗೆ ತಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Tags:    

Similar News