ಅಕ್ರಮ ಐಷಾರಾಮಿ ಕಾರು ಆಮದು ಪ್ರಕರಣ: ಪೃಥ್ವಿರಾಜ್, ದುಲ್ಕರ್ ಮನೆಗಳ ಮೇಲೆ ಕಸ್ಟಮ್ಸ್ ದಾಳಿ

ಕಸ್ಟಮ್ಸ್ ಸುಂಕವನ್ನು ಪಾವತಿಸದೆ ಭೂತಾನ್ ಮೂಲಕ ಭಾರತಕ್ಕೆ ದುಬಾರಿ ಬೆಲೆಯ ವಾಹನಗಳನ್ನು ಕಳ್ಳಸಾಗಣೆ ಮಾಡುವ ಜಾಲಕ್ಕೆ ಸಂಬಂಧಿಸಿಂದತೆ ಈ ದಾಳಿ ನಡೆಸಲಾಗಿದೆ.

Update: 2025-09-23 07:43 GMT

ಕಸ್ಟಮ್ಸ್ ಅಧಿಕಾರಿಗಳು ಮಂಗಳವಾರ (ಸೆಪ್ಟೆಂಬರ್ 23) ಜನಪ್ರಿಯ ಮಲಯಾಳಂ ಎ ಅವರ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ

Click the Play button to listen to article

ಅಕ್ರಮವಾಗಿ ಐಷಾರಾಮಿ ಕಾರುಗಳನ್ನು ಭೂತಾನ್‌ನಿಂದ ಭಾರತಕ್ಕೆ ಆಮದು ಮಾಡಿಕೊಂಡು ಮಾರಾಟ ಮಾಡುವ ಪ್ರಕರಣದ ಕುರಿತು ದೇಶಾದ್ಯಂತ ನಡೆಯುತ್ತಿರುವ ತನಿಖೆಯ ಭಾಗವಾಗಿ ಕಸ್ಟಮ್ಸ್ ಅಧಿಕಾರಿಗಳು ಮಂಗಳವಾರ ಜನಪ್ರಿಯ ಮಲಯಾಳಂ ನಟರಾದ ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಅವರ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ.

ಕಸ್ಟಮ್ಸ್ ಸುಂಕವನ್ನು ಪಾವತಿಸದೆ ಭೂತಾನ್ ಮೂಲಕ ಭಾರತಕ್ಕೆ ದುಬಾರಿ ಬೆಲೆಯ ವಾಹನಗಳನ್ನು ಕಳ್ಳಸಾಗಣೆ ಮಾಡುವ ಜಾಲಕ್ಕೆ ಸಂಬಂಧಿಸಿಂದತೆ ಈ ದಾಳಿ ನಡೆಸಲಾಗಿದೆ. ಒಬ್ಬ ಏಜೆಂಟ್ ಸುಮಾರು 40 ಕಾರುಗಳನ್ನು ಅಕ್ರಮವಾಗಿ ಆಮದು ಮಾಡಿಕೊಂಡಿದ್ದಾನೆ. ಅವುಗಳಲ್ಲಿ ಹಲವು ಈ ಹಿಂದೆ ಭೂತಾನ್ ರಾಜ ಸೈನ್ಯದಲ್ಲಿ ಬಳಸಲ್ಪಟ್ಟವು. ಹಾಗೂ ಅವುಗಳನ್ನು ಇಬ್ಬರು ನಟರು ಸೇರಿದಂತೆ ಹಲವು ಖರೀದಿದಾರರಿಗೆ ಮಾರಾಟ ಮಾಡಿದ್ದಾನೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಈ ತನಿಖೆಯ ಭಾಗವಾಗಿ ಕೇರಳದಾದ್ಯಂತ 30 ವಿಭಿನ್ನ ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಲಾಗುತ್ತಿದೆ. ಈ ಇಬ್ಬರು ನಟರ ವಾಹನಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಕಸ್ಟಮ್ಸ್ ಪ್ರಿವೆಂಟಿವ್ ಕಮಿಷನರೇಟ್‌ನ ಅಧಿಕಾರಿಯೊಬ್ಬರು ಈ ದಾಳಿಯ ಕುರಿತು ಮಾಹಿತಿ ನೀಡಿದ್ದಾರೆ. 

ಭೂತಾನಿನ ಸೇನೆ ಬಳಸುವ ವಾಹನಗಳನ್ನು ನಿರ್ದಿಷ್ಟ ಅವಧಿಯ ನಂತರ ಕಡಿಮೆ ಬೆಲೆಗೆ ಹರಾಜು ಮಾಡಲಾಗುತ್ತದೆ. ಈ ವಾಹನಗಳನ್ನು ಸುಂಕ ಪಾವತಿಸದೆ ದೇಶಕ್ಕೆ ಆಮದು ಮಾಡಿಕೊಳ್ಳುವ ದೊಡ್ಡ ಗ್ಯಾಂಗ್ ಕಾರ್ಯನಿರ್ವಹಿಸುತ್ತಿದ್ದು, ಹಿಮಾಚಲ ಪ್ರದೇಶದಲ್ಲಿ ನೋಂದಾಯಿಸಿ ಬಳಿಕ ಈ ಕಾರುಗಳನ್ನು ಸಿನಿಮಾ ತಾರೆಯರಿಗೆ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ. ಈ ಉದ್ದೇಶಕ್ಕಾಗಿ ದೇಶದ ವಿವಿಧ ಭಾಗಗಳಲ್ಲಿ ವಿಶೇಷ ಏಜೆಂಟರು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಕೇರಳದ ಪ್ರಮುಖ ನಟರಿಗೂ ಇಂತಹ ಗ್ಯಾಂಗ್ ವಾಹನಗಳನ್ನು ಮಾರಾಟ ಮಾಡಿದೆ ಎಂಬ ಸೂಚನೆಗಳನ್ನು ಅನುಸರಿಸಿ ಈ ದಾಳಿ ನಡೆಸಲಾಗಿದೆ. 

ಈ ರೀತಿ ಭೂತಾನ್‌ನಿಂದ ವಾಹನಗಳನ್ನು ತಂದ ಜನರ ಪಟ್ಟಿಯನ್ನು ಕಸ್ಟಮ್ಸ್ ಮತ್ತು ಪ್ರಿವೆಂಟಿವ್ ಇಲಾಖೆ ಸಿದ್ಧಪಡಿಸಿತ್ತು. ನಟರು ಮತ್ತು ಕೈಗಾರಿಕೋದ್ಯಮಿಗಳು ಸೇರಿದಂತೆ ಇತರರು ಭಾರತದಲ್ಲಿ ಈ ವಾಹನಗಳನ್ನು ಖರೀದಿಸಿದ್ದಾರೆ ಎಂದು ಕಸ್ಟಮ್ಸ್ ಕಂಡುಹಿಡಿದಿದೆ. ಭಾರತಕ್ಕೆ ವಾಹನಗಳನ್ನು ತರುತ್ತಿರುವ ಡೀಲರ್‌ಗಳ ಬಗ್ಗೆಯೂ ಕಸ್ಟಮ್ಸ್ ತನಿಖೆ ನಡೆಸುತ್ತಿದೆ ಎಂದು ವರದಿಯಾಗಿದೆ. ಕೇರಳ ಮತ್ತು ಲಕ್ಷದ್ವೀಪ ಕಸ್ಟಮ್ಸ್‌ನ ಉಸ್ತುವಾರಿ ಆಯುಕ್ತರು ಈ ತಪಾಸಣೆ ನಡೆಸುತ್ತಿದ್ದಾರೆ.

Tags:    

Similar News