ಸಿಜೆಐ ಮನೆಯಲ್ಲಿ ಗಣೇಶ ಪೂಜೆ | ಪ್ರಧಾನಿ ಸಮರ್ಥನೆ; ಕಾಂಗ್ರೆಸ್‌ ವಿರುದ್ಧ ಟೀಕೆ

ಪೂಜೆಯನ್ನು ಟೀಕಿಸುವವರದ್ದು ವಿಭಜಕ ಮನಸ್ಥಿತಿ. ಇಂಥ ವಿರೋಧವು ಸಮಾಜವನ್ನು ಛಿದ್ರಗೊಳಿಸುವ ಕಾರ್ಯಸೂಚಿಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಟೀಕಿಸಿದರು.;

Update: 2024-09-17 12:43 GMT
ಭುವನೇಶ್ವರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ನೆರವೇರಿಸಿದರು.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ಮನೆಯಲ್ಲಿ ಆಯೋಜಿಸಿದ್ದ ಗಣೇಶ ಪೂಜೆಯಲ್ಲಿ ಭಾಗವಹಿಸಿದ್ದನ್ನು ಪ್ರಧಾನಿ ಸಮರ್ಥಿಸಿಕೊಂಡಿದ್ದಾರೆ.

ಕಾಂಗ್ರೆಸ್ ಮತ್ತು ಅದರ ಬೆಂಬಲಿಗರನ್ನು ಗುರಿಯಾಗಿಸಿಕೊಂಡ ಅವರು, ʼಆ ಪಕ್ಷವು ಅಧಿಕಾರದ ಹಸಿವು ಹೋದಿದೆ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳನ್ನು ವಿರೋಧಿಸುತ್ತದೆ,ʼ ಎಂದು ಮಂಗಳವಾರ ಆರೋಪಿಸಿದರು. 

ಭುವನೇಶ್ವರದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ, ʼಬ್ರಿಟಿಷರ ವಸಾಹತುಶಾಹಿ ಕಾಲದಲ್ಲೂ ಒಡೆದು ಆಳುವ ತಂತ್ರಗಳನ್ನು ಅನುಸರಿಸುತ್ತಿದ್ದ ಅಧಿಕಾರಿಗಳು ಗಣೇಶ ಉತ್ಸವಕ್ಕೆ ವಿರುದ್ಧವಾಗಿದ್ದರು,ʼ ಎಂದು ಟೀಕಿಸಿದರು. 

ಇಂದಿನ ರಾಜಕೀಯ ವಾತಾವರಣಕ್ಕೆ ಹೋಲಿಸಿ, ಕಾಂಗ್ರೆಸ್ ಸೇರಿದಂತೆ ಕೆಲವು ಪಕ್ಷಗಳಿಗೆ ನಾನು ಪೂಜೆಯಲ್ಲಿ ಪಾಲ್ಗೊಂಡಿದ್ದರಿಂದ ತೊಂದರೆಯಾಗಿದೆ ಎಂದು ಹೇಳಿದರು. 

ವಿಭಜನೆ ಮನೋಭಾವ: ಮೋದಿ ಅವರ ಪ್ರಕಾರ, ಗಣೇಶ ಉತ್ಸವವು ಧಾರ್ಮಿಕ ಆಚರಣೆಗಿಂತ ಹೆಚ್ಚು. ಅದು ಭಾರತದ ಸ್ವಾತಂತ್ರ್ಯ ಚಳವಳಿ ಸಮಯದಲ್ಲಿ ಜನರನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಪಾಲ್ಗೊಳ್ಳುವಿಕೆಯನ್ನು ಟೀಕಿಸುವವರದ್ದು ವಿಭಜಕ ಮನಸ್ಥಿತಿ. ಪೂಜೆಗೆ ವಿರೋಧವು ಸಮಾಜವನ್ನು ವಿಘಟಿಸುವ ಕಾರ್ಯಸೂಚಿಯನ್ನು ಪ್ರತಿಬಿಂಬಿಸುತ್ತದೆ,ʼ ಎಂದು ಹೇಳಿದರು. 

ʻಗಣೇಶ ಪೂಜೆಗೆ ಅಸಮ್ಮತಿಯು ದೇಶದಲ್ಲಿ ವೈಷಮ್ಯವನ್ನು ಸೃಷ್ಟಿಸುವ ದೊಡ್ಡ ಪ್ರಯತ್ನದ ಲಕ್ಷಣ,ʼ ಎಂದು ಹೇಳಿದರು.

Tags:    

Similar News