ಯೋಗ ದಿನಾಚರಣೆಯ ನೇತೃತ್ವ: ಶ್ರೀನಗರಕ್ಕೆ ಆಗಮಿಸಿದ ಪ್ರಧಾನಿ

Update: 2024-06-20 13:21 GMT
ಶ್ರೀನಗರದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನದ ಮುನ್ನಾದಿನದಂದು ಎಸ್‌ಕೆಐಸಿಸಿ ಬಳಿ ಭದ್ರತಾ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಶ್ರೀನಗರ, ಜೂನ್ 20- ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಗುರುವಾರ ಭೇಟಿ ನೀಡಿದ್ದು,1,500 ಕೋಟಿ ರೂ. ವೆಚ್ಚದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ.

ʻಎರಡು ದಿನಗಳ ಶ್ರೀನಗರ ಪ್ರವಾಸಕ್ಕೆ ಹೊರಡುತ್ತಿದ್ದೇನೆ. ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೇನೆ. ಇಂದು ಸಂಜೆ ಯುವಜನರ ನೇತೃತ್ವದ ಅಭಿವೃದ್ಧಿ ಯನ್ನುಗುರಿಯಾಗುಳ್ಳ 'ಯುವಜನರ ಸಬಲೀಕರಣ, ಜಮ್ಮು-ಕಾಶ್ಮೀರದ ಸ್ಥಿತ್ಯಂತರ ' ಕಾರ್ಯಕ್ರಮದಲ್ಲಿ ಇರುತ್ತೇನೆ,ʼ ಎಂದು ಎಕ್ಸ್‌ ನಲ್ಲಿ ಬರೆದಿದ್ದಾರೆ.

ʻ1,500 ಕೋಟಿ ರೂ.ಗೂ ಹೆಚ್ಚು ವೆಚ್ಚದ ಯೋಜನೆಗಳ ಉದ್ಘಾಟನೆ ಅಥವಾ ಶಂಕುಸ್ಥಾಪನೆ ನಡೆಯಲಿದೆ. ಈ ಕಾಮಗಾರಿಗಳು ಮೂಲ ಸೌಕ ರ್ಯ, ನೀರು ಸರಬರಾಜು, ಶಿಕ್ಷಣ ಮತ್ತು ಇನ್ನಿತರ ಕ್ಷೇತ್ರಗಳಿಗೆ ಸಂಬಂಧಿಸಿವೆ. ನಾಳೆ ಬೆಳಗ್ಗೆ ಶ್ರೀನಗರದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ದಲ್ಲಿ ಭಾಗವಹಿಸುತ್ತೇನೆʼ ಎಂದು ಬರೆದಿದ್ದಾರೆ.

ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ಬಳಿಕ ಪ್ರಧಾನಿ ಮೋದಿ ಅವರ ಜಮ್ಮು- ಕಾಶ್ಮೀರದ ಮೊದಲ ಭೇಟಿ ಇದಾಗಿದೆ.

ಪ್ರಧಾನಿಯವರ ಎರಡು ದಿನಗಳ ಕಾಶ್ಮೀರ ಭೇಟಿಗೆ ಬಿಗಿಯಾದ ಬಹುಪದರದ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ದಾಲ್ ಸರೋವರದ ದಡ ದಲ್ಲಿ ಶುಕ್ರವಾರ ನಡೆಯಲಿರುವ ಯೋಗ ಪ್ರದರ್ಶನದಲ್ಲಿ 7,000 ಕ್ಕೂ ಹೆಚ್ಚು ಮಂದಿ ಭಾಗವಹಿಸುತ್ತಾರೆ. ಅವರಿಗೆ ಮೂರು ದಿನಗಳಿಂದ ತರಬೇತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಗರದಾದ್ಯಂತ ಭದ್ರತಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಸ್‌ಕೆಐಸಿಸಿಗೆ ಹೋಗುವ ರಸ್ತೆಗಳನ್ನು ಮುಚ್ಚಲಾಗಿದೆ. ಎಸ್‌ಕೆಐ ಸಿಸಿಯ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಮತ್ತು ಕರ್ತವ್ಯದಲ್ಲಿರುವ ಇತರರು ಮತ್ತು ಭಾಗವಹಿಸುವ ಕ್ರೀಡಾಪಟುಗಳ ಹಿನ್ನೆಲೆಯ ತಪಾಸಣೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಶ್ರೀನಗರ ಪೊಲೀಸರು ಡ್ರೋನ್‌ಗಳು ಮತ್ತು ಕ್ವಾಡ್‌ಕಾಪ್ಟರ್‌ಗಳ ಕಾರ್ಯಾಚರಣೆಯನ್ನು ನಿಷೇಧಿಸಿದ್ದು, ನಗರವನ್ನು 'ತಾತ್ಕಾಲಿಕ ಕೆಂಪು ವಲಯ' ಎಂದು ಘೋಷಿಸಿದ್ದಾರೆ.

Tags:    

Similar News