Operation Sindoor: ಭಾರತೀಯ ಸೇನೆಯ ರಣತಂತ್ರ ಯಶಸ್ಸಿನ ಕುರಿತು ವಿವರಿಸಿದ ಮೇಜರ್​ ಬಿ. ಎ. ನಂಜಪ್ಪ

'ದ ಫೆಡರಲ್​ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮೇಜರ್ ಬಿ. ಎ. ನಂಜಪ್ಪ ಅವರು 'ಗಡಿ ನಿಯಂತ್ರಣ ರೇಖೆಯನ್ನು ದಾಟದೇ ಬಹಳ ಯೋಜಿತವಾಗಿ ಈ ದಾಳಿಯನ್ನು ಮಾಡಿರುವುದು ನೈಜ ರಣತಂತ್ರ ಎಂದು ಹೇಳಿದ್ದಾರೆ.;

Update: 2025-05-07 14:34 GMT

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ಏಪ್ರಿಲ್ 22ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ದಾಳಿಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (PoK) ಒಳಗಿನ 9 ಭಯೋತ್ಪಾದಕ ಶಿಬಿರಗಳ ಮೇಲೆ ಮೇ 7ರ ಮಧ್ಯರಾತ್ರಿ ನಿಖರವಾದ ಕ್ಷಿಪಣಿ ದಾಳಿಗಳನ್ನು ನಡೆಸಲಾಗಿದೆ. ಈ ಕಾರ್ಯಾಚರಣೆಯ ಬಗ್ಗೆ ಮಾತನಾಡಿದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಮೇಜರ್ ಬಿ. ಎ. ನಂಜಪ್ಪ ಅವರು, ಇದು ಇಡೀ ದೇಶವು ಹೆಮ್ಮೆ ಪಡುವಂತಹ ಕಾರ್ಯಾಚರಣೆ ಎಂದು ಶ್ಲಾಘಿಸಿದ್ದಾರೆ.


Full View

'ದ ಫೆಡರಲ್​ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮೇಜರ್ ಬಿ. ಎ. ನಂಜಪ್ಪ ಅವರು 'ಗಡಿ ನಿಯಂತ್ರಣ ರೇಖೆಯನ್ನು ದಾಟದೇ ಬಹಳ ಯೋಜಿತವಾಗಿ ಈ ದಾಳಿಯನ್ನು ಮಾಡಲಾಗಿದೆ. ಕ್ಷಿಪಣಿಗಳನ್ನು ಬಳಸಿ 9 ಕಡೆ ದಾಳಿ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಲಾಗಿದೆ. ಇದು ಯುದ್ಧವಲ್ಲ, ಪಹಲ್ಗಾಂ ಘಟನೆಗೆ ಪ್ರತೀಕಾರದ ದಾಳಿಯಾಗಿದೆ ಎಂದು ವಿವರಿಸಿದ್ದಾರೆ. ಈ ಕಾರ್ಯಾಚರಣೆ ನಡೆಸಲು 15 ದಿನಗಳ ಕಾಲ ಸಾಕಷ್ಟು ಯೋಜನೆ ಮಾಡಿ, ಲೆಕ್ಕಾಚಾರ ಹಾಕಿ ದಾಳಿ ನಡೆಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪಹಲ್ಗಾಂ ದಾಳಿಯಲ್ಲಿ 26 ಮಂದಿ ಅದರಲ್ಲೂ ಹೆಚ್ಚಿನವರು ಪ್ರವಾಸಿಗರು, ಮೃತಪಟ್ಟಿದ್ದರು. ಈ ಘಟನೆಗೆ ಪ್ರತೀಕಾರವಾಗಿ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸಂಯೋಜಿತ ತಂಡವು ಈ ಕಾರ್ಯಾಚರಣೆಯನ್ನು ನಡೆಸಿತು. ಸೇನೆ ದಾಳಿ ಮಾಡಿದ ಶಿಬಿರಗಳಲ್ಲಿ ಲಷ್ಕರ್-ಎ-ತೈಯ್ಬಾ (LeT), ಜೈಷ್-ಎ-ಮೊಹಮ್ಮದ್ (JeM) ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನಂತಹ ಪ್ರಮುಖ ಭಯೋತ್ಪಾದಕ ಸಂಘಟನೆಗಳು ತರಬೇತಿ ಕೇಂದ್ರಗಳಿದ್ದವು. ಭಾರತೀಯ ಸೇನೆ ಉಗ್ರರನ್ನು ಗುರಿಯಾಗಿಸಿಕೊಂಡಿತ್ತು. ನಾಗರಿಕರ ಮೇಲೆ ದಾಳಿ ಮಾಡಿಲ್ಲ. ಇದು ವಿಶ್ವಕ್ಕೆ ಒಂದು ಸಂದೇಶ ," ಎಂದು ಮೇಜರ್ ನಂಜಪ್ಪ ಒತ್ತಿ ಹೇಳಿದ್ದಾರೆ.

ರಣತಂತ್ರದ ಭಾಗವಾಗಿ ಮಾಕ್ ಡ್ರಿಲ್

ಮೇಜರ್ ನಂಜಪ್ಪ ಅವರು ಈ ಕಾರ್ಯಾಚರಣೆಯ ರಣತಂತ್ರ ಭಾಗವೆಂದು ಕೊಂಡಾಡಿದ್ದಾರೆ. "ಬುಧವಾರ ಸಂಜೆ ಮಾಕ್ ಡ್ರಿಲ್ ಎಂದು ಹೇಳಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿದ್ದು ಭಾರತದ ರಣತಂತ್ರ. ಎಲ್ಲರ ಗಮನ ಆ ಕಡೆ ಇರುವಾಗ ಭಾರತೀಯ ಸೇನೆ ದಾಳಿ ಮಾಡಿದೆ," ಎಂದು ವಿವರಿಸಿದ್ದಾರೆ. ಈ ರೀತಿಯ ತಂತ್ರವು ಶತ್ರು ರಾಷ್ಟ್ರದ ಗಮನವನ್ನು ಬೇರಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ. .

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರತಿಕ್ರಿಯೆ

ಪಹಲ್ಗಾಂ ದಾಳಿಯ ನಂತರ ಭಾರತ-ಪಾಕಿಸ್ತಾನ ಸಂಬಂಧದಲ್ಲಿ ಒತ್ತಡ ಹೆಚ್ಚಾಗಿದೆ. ಈ ಕಾರ್ಯಾಚರಣೆಯನ್ನು ಭಾರತೀಯ ಸೇನೆಯ ಸಾಮರ್ಥ್ಯ ಮತ್ತು ದೇಶದ ಒಗ್ಗಟ್ಟಿನ ಪ್ರತೀಕ ಎಂದು ಮೇಜರ್​ ನಂಜಪ್ಪ ಹೇಳಿದ್ದಾರೆ.

Similar News