NEET-UG 2024| ಅಂತಿಮ ಫಲಿತಾಂಶ ಬಿಡುಗಡೆ, ಉನ್ನತ ಶ್ರೇಣಿ ಹಂಚಿಕೊಂಡ 17 ಅಭ್ಯರ್ಥಿಗಳು

ಸುಪ್ರೀಂ ಕೋರ್ಟ್‌ ಫಲಿತಾಂಶ ರದ್ದು ಹಾಗೂ ಮರುಪರೀಕ್ಷೆ ಕೋರಿ ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನು ವಜಾಗೊಳಿಸಿದ ಬಳಿಕ ಫಲಿತಾಂಶಗಳನ್ನು ಘೋಷಿಸಲಾಗಿದೆ.

Update: 2024-07-27 07:51 GMT

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನೀಟ್-ಯುಜಿ 2024 ಪರೀಕ್ಷೆಯ ಅಂತಿಮ ಫಲಿತಾಂಶಗಳನ್ನು ಶುಕ್ರವಾರ (ಜುಲೈ 26) ಪ್ರಕಟಿಸಿದೆ.

ಎನ್‌ಟಿಎ ಎರಡು ಸರಿ ಉತ್ತರಗಳಿರುವ ಭೌತಶಾಸ್ತ್ರದ ಪ್ರಶ್ನೆಯ ಅಂಕಗಳನ್ನು ಗಣನೆಗೆ ತೆಗೆದುಕೊಂಡು, ಅಂತಿಮ ಅಂಕಪಟ್ಟಿಯನ್ನು ಪ್ರಕಟಿಸಲು ಸುಪ್ರೀಂ ಕೋರ್ಟ್‌ನ ನಿರ್ದೇಶನ ನೀಡಿದ ನಂತರ ಪರಿಷ್ಕೃತ ಫಲಿತಾಂಶಗಳನ್ನು ಘೋಷಿಸಲಾಗಿದೆ. 

ʻಮರು ಪರಿಷ್ಕೃತ ಸ್ಕೋರ್ ಕಾರ್ಡ್‌ಗಳು ಇದೀಗ ಲಭ್ಯವಿವೆʼ ಎಂದು ಹಿರಿಯ ಎನ್‌ಟಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಹಿಂದೆ ಟಾಪರ್ ಎಂದು ಘೋಷಿಸಲ್ಪಟ್ಟ 67 ಅಭ್ಯರ್ಥಿಗಳಲ್ಲಿ ನಲವತ್ತನಾಲ್ಕು ಮಂದಿ ಭೌತಶಾಸ್ತ್ರದ ಪ್ರಶ್ನೆಗೆ ನೀಡಿದ ಅಂಕಗಳಿಂದಾಗಿ ಪೂರ್ಣ ಅಂಕ ಗಳಿಸಿದ್ದಾರೆ. ಆರು ಅಭ್ಯರ್ಥಿಗಳಿಗೆ ನೀಡಲಾದ ಕೃಪಾಂಕವನ್ನು ಏಜೆನ್ಸಿ ಹಿಂತೆಗೆದುಕೊಂಡಿದ್ದರಿಂದ, ಟಾಪರ್‌ಗಳ ಸಂಖ್ಯೆಯನ್ನು 61 ಕ್ಕೆ ಇಳಿಸಲಾಯಿತು.

ಮರು ಪರೀಕ್ಷೆ ಮನವಿ ತಿರಸ್ಕೃತ: ಪರೀಕ್ಷೆಯನ್ನು ರದ್ದುಗೊಳಿಸಲು ಮತ್ತು ಮರುಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್ ಮಂಗಳವಾರ (ಜುಲೈ 23) ಎಲ್ಲ ಅರ್ಜಿಗಳನ್ನು ವಜಾಗೊಳಿಸಿತು. ಪ್ರಶ್ನೆಪತ್ರಿಕೆ ಸೋರಿಕೆ, ವಂಚನೆ ಮತ್ತು ನಕಲು ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿರುವ ಸಂಬಂಧ ಎನ್ಡಿಎ ಸರ್ಕಾರ ತೀವ್ರ ಟೀಕೆ ಮತ್ತು ಪ್ರತಿಭಟನೆ ಎದುರಿಸಿತು. ನೀಟ್-ಯುಜಿ 2024 ರಲ್ಲಿನ ಅಕ್ರಮಗಳ ಕುರಿತು ಸಿಬಿಐ ತನಿಖೆ ನಡೆಸುತ್ತಿದ್ದು, ಆರು ಎಫ್‌ಐಆರ್‌ಗಳನ್ನು ದಾಖಲಿಸಿದೆ. 

ಪರಿಷ್ಕೃತ ನೀಟ್-ಯುಜಿ 2024 ಸ್ಕೋರ್‌ಕಾರ್ಡ್ ಪಡೆಯುವುದು ಹೀಗೆ:

* exams.nta.ac.in/NEET ನಲ್ಲಿ ಅಧಿಕೃತ ಎನ್‌ಟಿಎ ವೆಬ್‌ಸೈಟ್‌ಗೆ ಹೋಗಿ

* ಪರಿಷ್ಕೃತ ಅಂಕಪಟ್ಟಿ ಅಧಿಸೂಚನೆಗಾಗಿ ಲಿಂಕ್ ಅನ್ನು ಹುಡುಕಿ ಮತ್ತು ಕ್ಲಿಕ್ ಮಾಡಿ

* ನಿಮ್ಮ ಲಾಗಿನ್ ವಿವರ ನಮೂದಿಸಿ

* ನಿಮ್ಮ ಪರಿಷ್ಕೃತ ಸ್ಕೋರ್‌ಕಾರ್ಡ್ ನ್ನು ಪರದೆ ಮೇಲೆ ವೀಕ್ಷಿಸಿ

* ವಿವರಗಳನ್ನು ಪರಿಶೀಲಿಸಿ, ಸ್ಕೋರ್‌ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿ ಕಾಯ್ದಿಟ್ಟುಕೊಳ್ಳಿ. 

Tags:    

Similar News