Exit Poll| ಹರಿಯಾಣದಲ್ಲಿ ಕಾಂಗ್ರೆಸ್‌ ಮೇಲುಗೈ, ಜಮ್ಮುಕಾಶ್ಮೀರದಲ್ಲಿ ಅತಂತ್ರ ಫಲಿತಾಂಶ

ಹರಿಯಾಣದಲ್ಲಿ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಕಾಂಗ್ರೆಸ್‌ ಬ್ರೇಕ್‌ ಹಾಕಲಿದ್ದು, ಸ್ಪಷ್ಟ ಬಹುಮತದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

Update: 2024-10-06 06:52 GMT

ಹರಿಯಾಣ ಹಾಗೂ ಜಮ್ಮುಕಾಶ್ಮೀರ ವಿಧಾನಸಭೆ ಚುನಾವಣೆಯ ಮತದಾನ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗವಾಗಿವೆ.

ಹರಿಯಾಣದಲ್ಲಿ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಕಾಂಗ್ರೆಸ್‌ ಬ್ರೇಕ್‌ ಹಾಕಲಿದ್ದು, ಸ್ಪಷ್ಟ ಬಹುಮತದ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಜಮ್ಮು ಕಾಶ್ಮೀರದಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎಂದು ಸಮೀಕ್ಷೆಗಳು ತಮ್ಮ ಚುನಾವಣೋತ್ತರ ಫಲಿತಾಂಶ ದಾಖಲಿಸಿವೆ.

ಕಾಂಗ್ರೆಸ್‌ ಪಕ್ಷ ಶೇ 44 ರಷ್ಟು ಮತ ಗಳಿಕೆ ಮೂಲಕ 50-58 ಸ್ಥಾನಗಳನ್ನು ಪಡೆದು ಜಯಭೇರಿ ಬಾರಿಸಲಿದೆ ಎಂದು ಇಂಡಿಯಾ ಟುಡೇ-ಸಿ ವೋಟರ್‌ ಸಮೀಕ್ಷೆ ತಿಳಿಸಿದೆ. ಇನ್ನು 10 ವರ್ಷಗಳಿಂದ ಆಡಳಿತ ನಡೆಸಿರುವ ಬಿಜೆಪಿ ಪಕ್ಷ ಕೇವಲ 20-28 ಸ್ಥಾನ ಪಡೆಯಲಿದೆ ಎಂದು ಚುನಾವಣೋತ್ತರ ಸಮೀಕ್ಷೆ ತಿಳಿಸಿದೆ.

2019 ರ ಚುನಾವಣೆಯಲ್ಲಿ ಕಾಂಗ್ರೆಸ್‌ 30 ಸ್ಥಾನ ಪಡೆದಿದ್ದರೆ, ಬಿಜೆಪಿ 40 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಅಲ್ಲಿನ ಪ್ರಾದೇಶಿಕ ಪಕ್ಷವಾದ ಜೆಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಏರಿತ್ತು. ಹರಿಯಾಣದಲ್ಲಿ ಒಟ್ಟು 90 ವಿಧಾನಸಭಾ ಕ್ಷೇತ್ರಗಳಿವೆ.

ಇನ್ನು ಜಮ್ಮು ಕಾಶ್ಮೀರದಲ್ಲಿ 90 ಸ್ಥಾನಗಳ ಪೈಕಿ ಕಾಂಗ್ರಸ್‌ ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌ ಮೈತ್ರಿಕೂಟ 40-48 ಸ್ಥಾನ ಗಳಿಸಲಿದೆ, ಬಿಜೆಪಿ ಪಕ್ಷ 27-32 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ. ಮೆಹಬೂಬ ಮುಫ್ತಿ ನೇತೃತ್ವದ ಪಿಡಿಪಿ ಪಕ್ಷ ಕಿಂಗ್‌ ಮೇಕರ್‌ ಆಗುವ ಸಾಧ್ಯತೆಗಳಿವೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ಫಲಿತಾಂಶ ಪ್ರಕಟಿಸಿವೆ.

ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್‌ ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಮಧ್ಯೆ ಸೀಟು ಹಂಚಿಕೆ ಸಂಬಂಧ ಹಗ್ಗಜಗ್ಗಾಟ ನಡೆದಿತ್ತು. ಅಂತಿಮವಾಗಿ ಕಾಂಗ್ರೆಸ್‌ 38 ಕ್ಷೇತ್ರ, ನ್ಯಾಷನಲ್‌ ಕಾನ್ಫರೆನ್ಸ್‌ 58 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಬಿಜೆಪಿ ಕೇವಲ 62 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ನಡೆಸಿತ್ತು.

ಚುನಾವಣೋತ್ತರ ಸಮೀಕ್ಷೆಗಳು ಇಂತಿವೆ

ಹರಿಯಾಣ ವಿಧಾನಸಭಾ ಚುನಾವಣೆ(90 ಕ್ಷೇತ್ರ)

ಇಂಡಿಯಾ ಟುಡೇ-ಸಿ ವೋಟರ್‌: ಕಾಂಗ್ರೆಸ್‌ 50-58, ಬಿಜೆಪಿ 20-28, ಇತರರು 10-16

ರಿಪಬ್ಲಿಕ್‌-ಮ್ಯಾಟ್ರಿಜ್‌: ಕಾಂಗ್ರೆಸ್‌ 52-65, ಬಿಜೆಪಿ 18-24, ಐಎನ್‌ಎಲ್‌ಡಿ-ಬಿಎಸ್‌ಪಿ 3-6, ಇತರೆ 0-8

ಆಕ್ಸಿಸ್‌ ಮೈ ಇಂಡಿಯಾ: ಕಾಂಗ್ರೆಸ್‌ 53-65, ಬಿಜೆಪಿ 18-28, ಐಎನ್‌ಎಲ್‌ಡಿ-ಬಿಎಸ್‌ಪಿ 1-5, ಇತರೆ 3-8

ದೈನಿಕ್‌ ಭಾಸ್ಕರ್‌: ಕಾಂಗ್ರೆಸ್‌ 44-54, ಬಿಜೆಪಿ 18-28, ಐಎನ್‌ಎಲ್‌ಡಿ-ಬಿಎಸ್‌ಪಿ 1-5, ಇತರೆ 4-11

ಜಮ್ಮುಕಾಶ್ಮೀರ ವಿಧಾನಸಭೆ ಚುನಾವಣೆ (90 ಕ್ಷೇತ್ರ)

ಇಂಡಿಯಾ ಟುಡೇ-ಸಿ ವೋಟರ್‌: ಎನ್‌ಸಿ-ಕಾಂಗ್ರೆಸ್‌ 40-48, ಬಿಜೆಪಿ 27-32, ಪಿಡಿಪಿ 6-12, ಇತರೆ 6-10

ಆಕ್ಸಿಸ್‌ ಮೈ ಇಂಡಿಯಾ: ಎನ್‌ಸಿ-ಕಾಂಗ್ರೆಸ್‌ 35-45, ಬಿಜೆಪಿ 24-34, ಪಿಡಿಪಿ 4-6, ಇತರೆ 8-23

ದೈನಿಕ್‌ ಭಾಸ್ಕರ್‌: ಎನ್‌ಸಿ-ಕಾಂಗ್ರೆಸ್‌ 35-40, ಬಿಜೆಪಿ 20-25, ಪಿಡಿಪಿ 4-7, ಇತರೆ 12-18

Tags:    

Similar News