ಪ್ರಾಂಶುಪಾಲರನ್ನೇ ಗುಂಡಿಕ್ಕಿ ಕೊಂದು ಪರಾರಿಯಾದ ವಿದ್ಯಾರ್ಥಿ

ಮಧ್ಯಾಹ್ನ 1:30 ರ ಸುಮಾರಿಗೆ ಶಾಲೆಯ ಶೌಚಾಲಯದ ಪ್ರವೇಶದ್ವಾರದಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆಗಮ್ ಜೈನ್ ತಿಳಿಸಿದ್ದಾರೆ.

Update: 2024-12-07 04:17 GMT
ಪ್ರಾಂಶುಪಾಲರ ಮೇಲೆ ಶೌಚಾಲಯದ ಬಳಿ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

12ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಶಾಲೆಯ ಪ್ರಾಂಶುಪಾಲರನ್ನು ಗುಂಡಿಕ್ಕಿ ಕೊಂದು ಪರಾರಿಯಾಗಿರುವ ಘಟನೆ ನಡೆದಿದೆ. ಕೊಲೆ ನಡೆಸಿದ ಬಳಿಕ ಪ್ರಾಂಶುಪಾಲರ ಸ್ಕೂಟರ್​ನಲ್ಲಿಯೇ ಮಕ್ಕಳು ಸಹಚರನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ. ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಮಧ್ಯಾಹ್ನ 1:30 ರ ಸುಮಾರಿಗೆ ಶಾಲೆಯ ಶೌಚಾಲಯದ ಪ್ರವೇಶದ್ವಾರದಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆಗಮ್ ಜೈನ್ ತಿಳಿಸಿದ್ದಾರೆ.

ಆರೋಪಿ ಶೂಟರ್ ಮತ್ತು ಅದೇ ಸಂಸ್ಥೆಯ ವಿದ್ಯಾರ್ಥಿಯಾಗಿರುವ ಮತ್ತೊಬ್ಬನ ಜತೆ ಸ್ಕೂಟರ್​ ಏರಿ ಪರಾರಿಯಾಗಿದ್ದಾರೆ ಎಂದು ಜೈನ್ ಮಾಹಿತಿ ನೀಡಿದ್ದಾರೆ.

ಹತ್ಯೆಯಾದ ಎಸ್.ಕೆ.ಸಕ್ಸೇನಾ (55) ಅವರು ಕಳೆದ ಐದು ವರ್ಷಗಳಿಂದ ಧಮೋರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಂಶುಪಾಲರಾಗಿದ್ದರು. ಅವರು ಶೌಚಾಲಯಕ್ಕೆ ಹೋದಾಗ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಜಿಲ್ಲಾ ಶಿಕ್ಷಣ ಅಧಿಕಾರಿ ಆರ್.ಪಿ.ಪ್ರಜಾಪತಿ ತಿಳಿಸಿದ್ದಾರೆ.

ಸಕ್ಸೇನಾ ಅವರ ತಲೆಗೆ ಗುಂಡು ಹಾರಿಸಲಾಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರಜಾಪತಿ ಮಾಹಿತಿ ನೀಡಿದ್ದಾರೆ. 

Tags:    

Similar News