ಪಟಾಕಿ ಮಾರಾಟ, ಬಳಕೆ ನಿಷೇಧಿಸಿದ ದೆಹಲಿ ಸರ್ಕಾರ: ಪುರಾವೆ ಬೇಕೆಂದ ಬಿಜೆಪಿ

ದೆಹಲಿ ಸರ್ಕಾರವು ಸರ್ಕಾರ ಸೋಮವಾರ ನಗರದಾದ್ಯಂತ ಪಟಾಕಿಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯನ್ನು ಕೂಡಲೇ ಜಾರಿಗೆ ಬರುವಂತೆ ನಿರ್ಬಂಧಿಸಿದೆ.

Update: 2024-10-15 08:08 GMT
ಪಟಾಕಿ ಬಳಕೆಯನ್ನು ದೆಹಲಿ ಸರ್ಕಾರ ನಿಷೇಧಿಸಿದೆ.
Click the Play button to listen to article

ದೆಹಲಿ ರಾಜ್ಯ ಸರ್ಕಾರವು ನಗರದಾದ್ಯಂತ ಪಟಾಕಿಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯನ್ನು ಕೂಡಲೇ ಜಾರಿಗೆ ಬರುವಂತೆ ಸೋಮವಾರ ನಿರ್ಬಂಧಿಸಿದೆ.

ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಈ ಘೋಷಣೆ ಮಾಡಿದ್ದು, ವಾಯುಮಾಲಿನ್ಯವನ್ನು ತಡೆಯುವ ಸರ್ಕಾರದ ಪ್ರಯತ್ನಗಳನ್ನು ಬೆಂಬಲಿಸುವಂತೆ ಸಾರ್ವಜನಿಕರಿಗೆ ಒತ್ತಾಯಿಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, ಚಳಿಗಾಲದಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಹಿನ್ನೆಲೆಯಲ್ಲಿ ಇಂದಿನಿಂದ ಜನವರಿ 1 ರವರೆಗೆ ಪಟಾಕಿಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯ ಮೇಲೆ ನಿಷೇಧ ಹೇರಲಾಗಿದೆ. ಇದರ ಬಗ್ಗೆ ಸರ್ಕಾರ ಸೂಚನೆಗಳನ್ನು ನೀಡಿದೆ. ಎಲ್ಲಾ ದೆಹಲಿ ನಿವಾಸಿಗಳ ಸಹಕಾರವನ್ನು ಕೋರುತ್ತೇವೆ. ನಿಷೇಧ ಆದೇಶ ಪರಿಣಾಮಕಾರಿಯಾಗಿ ಅನುಷ್ಠಾನದ ಖಾತ್ರಿಗಾಗಿ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಸೂಚನೆಗಳನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ಮಾರಾಟವಾಗುವ ಪಟಾಕಿಗಳು ಸೇರಿದಂತೆ ಎಲ್ಲಾ ರೀತಿಯ ಪಟಾಕಿಗಳಿಗೆ ನಿಷೇಧ ಅನ್ವಯಿಸುತ್ತದೆ. ದೆಹಲಿ ಪೋಲೀಸರು ನಿಷೇಧ ಜಾರಿ ಕಾರ್ಯ ನಿರ್ವಹಿಸಲಿದ್ದು, ದೈನಂದಿನ ಕ್ರಿಯೆಯ ವರದಿಗಳನ್ನು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಗೆ ಸಲ್ಲಿಸಬೇಕಾಗುತ್ತದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ದೆಹಲಿ ಪೊಲೀಸರಿಗೆ ನಿಷೇಧವನ್ನು ಜಾರಿಗೊಳಿಸುವ ಹೊಣೆಯನ್ನು ವಹಿಸಲಾಗಿದೆ ಮತ್ತು DPCC ಗೆ ದೈನಂದಿನ ಕ್ರಿಯೆಯ ವರದಿಗಳನ್ನು ನೀಡಬೇಕಾಗುತ್ತದೆ.

ಬಿಜೆಪಿ ವಿರೋಧ: ಪುರಾವೆ ಕೇಳಿದ ಪ್ರತಿಪಕ್ಷ

ನಿಷೇಧದ ಬಗ್ಗೆ ಪ್ರತಿಕ್ರಿಯಿಸಿರು ದೆಹಲಿ ಬಿಜೆಪಿ, ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳ ಮೇಲಿನ ವಾರ್ಷಿಕ ನಿರ್ಬಂಧದ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿದೆ. ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ಯಾವುದೇ ವೈಜ್ಞಾನಿಕ ಪುರಾವೆಗಳನ್ನು ಪ್ರಸ್ತುತಪಡಿಸದೆ ನಿಷೇಧವನ್ನು ಜಾರಿಗೆ ತಂದಿದೆ ಎಂದು ಪಕ್ಷದ ಹೇಳಿಕೆ ನೀಡಿದೆ.

ಪಟಾಕಿಗಳನ್ನು ಪ್ರಾಥಮಿಕ ಮಾಲಿನ್ಯಕಾರಕ ಎಂದು ಗುರುತಿಸಿ ದೆಹಲಿ ಸರ್ಕಾರ ಯಾವುದೇ ವರದಿಯನ್ನು ತಯಾರಿಸಿಲ್ಲ ಎಂದು ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಕಪೂರ್ ಹೇಳಿದ್ದಾರೆ. ಎಎಪಿ ಸರ್ಕಾರವು ಈ ಹಿಂದೆ ಹಸಿರು ಪಟಾಕಿಗಳ ಬಳಕೆಯನ್ನು ಸುರಕ್ಷಿತ ಪರ್ಯಾಯವಾಗಿ ಉತ್ತೇಜಿಸಿತ್ತು. ಆದರೆ ನಂತರ ಆ ಉಪಕ್ರಮದಿಂದ ದೂರವಿತ್ತು. ದೀಪಾವಳಿ ರಾತ್ರಿ ಸುಡುವ ಪಟಾಕಿಗಳು ಚಳಿಗಾಲದ ಮಾಲಿನ್ಯಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ವೈಜ್ಞಾನಿಕ ವರದಿಯನ್ನು ದೆಹಲಿ ಸರ್ಕಾರ ಇನ್ನೂ ಪ್ರಸ್ತುತಪಡಿಸಿಲ್ಲ ಎಂದು ಪ್ರವೀಣ್ ಕಪೂರ್ ಆರೋಪಿಸಿದ್ದಾರೆ.

Tags:    

Similar News