ವಾಟ್ಸ್‌ಆಪ್‌ ನಿರ್ವಹಣೆಗೆ ʼಪ್ರಮುಖ್‌ʼ ನೇಮಿಸಿದ ಭೋಪಾಲ್‌ ಬಿಜೆಪಿ

ರಾಜ್ಯ ಬೂತ್ ಸಮಿತಿ ಚುನಾವಣೆಗೆ ಮುಂಚಿತವಾಗಿ ನವೆಂಬರ್20 ರೊಳಗೆ ರಾಜ್ಯದ 65,015 ಬೂತ್‌ಗಳ ಸಮಗ್ರ ಡಿಜಿಟಲ್ ನೆಟ್ವರ್ಕ್ ಸ್ಥಾಪಿಸುವ ಬಿಜೆಪಿಯ ಯೋಜನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

Update: 2024-11-17 11:00 GMT

ಸಾಮಾಜಿಕ ಜಾಲತಾಣಗಳ ನಿರ್ವಹಣೆ ರಾಜಕೀಯ ಪಕ್ಷಗಳಿಗೆ ನಿರ್ಣಾಯಕ. ಹೀಗಾಗಿ ಎಲ್ಲ ಪಕ್ಷಗಳು ʼಚತುರʼ ಜಾಲತಾಣ ನಿರ್ವಹಣೆಗಾರರನ್ನು ನಿಯೋಜಿಸಿಕೊಂಡಿರುತ್ತವೆ. ಇದೇ ಮಾದರಿಯಲ್ಲಿ ಮಧ್ಯ ಪ್ರದೇಶದ ಭೋಪಾಲ್‌ ಬಿಜೆಪಿಯು ವಾಟ್ಸ್‌ಆಪ್‌ ನಿರ್ವಹಣೆಗೆಂದೇ ʼವಾಟ್ಸ್‌ಆಪ್‌ ಪ್ರಮುಖ್‌ʼ ನೇಮಕ ಮಾಡಿದೆ. ಎಂಎಸ್ಸಿ ಪದವೀಧರ ರಾಮ್‌ಕುಮಾರ್ ಚೌರಾಸಿಯಾ ಅವರೇ ಹೊಸ ಪ್ರಮುಖ್‌. ಅವರು ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ.

ಎನ್‌ಡಿಟಿವಿ ಜತೆ ಮಾತನಾಡಿದ ಚೌರಾಸಿಯಾ, ತಮ್ಮ ಪಾತ್ರದ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಸಾಧ್ಯವಾದಷ್ಟು ಜನರನ್ನು ತಲುಪುವ ಗುರಿಯನ್ನು ಹೊಂದಿರುವ ವಿಶಿಷ್ಟ ಪ್ರಯೋಗ ಎಂದು ಕರೆದಿದ್ದಾರೆ. ರಾಜ್ಯದಾದ್ಯಂತ ವಿಸ್ತರಿಸಲಿರುವ ಈ ಉಪಕ್ರಮವು ಮಧ್ಯಪ್ರದೇಶದಲ್ಲಿ ಮೊದಲನೆಯದು ಎಂದು ಅವರು ಗಮನಸೆಳೆದಿದ್ದಾರೆ.

ಡಿಜಿಟಲೀಕರಣ ಪ್ರಯತ್ನಗಳು

ರಾಜ್ಯ ಬೂತ್ ಸಮಿತಿ ಚುನಾವಣೆಗೆ ಮುಂಚಿತವಾಗಿ ನವೆಂಬರ್20 ರೊಳಗೆ ರಾಜ್ಯದ 65,015 ಬೂತ್‌ಗಳ ಸಮಗ್ರ ಡಿಜಿಟಲ್ ನೆಟ್ವರ್ಕ್ ಸ್ಥಾಪಿಸುವ ಬಿಜೆಪಿಯ ಯೋಜನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ತಳಮಟ್ಟದ ಸಂಪರ್ಕಗಳನ್ನು ಬಲಪಡಿಸಲು ಡಿಜಿಟಲ್ ಪ್ರಯತ್ನಗಳು ನಿರ್ಣಾಯಕವೆಂದು ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ .

ವಾಟ್ಸ್‌ಆಪ್‌ ಪ್ರಮುಖ್‌ಗಳ ನೇಮಕವು ಬಿಜೆಪಿಯ ಹೊಸ ಮಾದರಿಯ ಬೂತ್ ಸಮಿತಿ ರಚನೆಯಲ್ಲಿನ ಬದಲಾವಣೆಗಳಲ್ಲಿ ಒಂದಾಗಿದೆ. ಪ್ರತಿ ಸಮಿತಿಯಲ್ಲಿ ಬೂತ್ ಅಧ್ಯಕ್ಷರು, ʼಮನ್ ಕಿ ಬಾತ್ ಪ್ರಮುಖ್ʼ ಸೇರಿದಂತೆ 12 ಸದಸ್ಯರು ಇರುತ್ತಾರೆ, ಮೂವರು ಸದಸ್ಯರು ಮಹಿಳೆಯರಾಗಿರುತ್ತಾರೆ.

ಕೇಂದ್ರ ಗಮನ

ಮಾಜಿ ಕೌನ್ಸಿಲರ್ ಅರ್ಚನಾ ಗೋಸ್ವಾಮಿ ಅವರನ್ನು ಮೊದಲ ಬೂತ್ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ವಾಟ್ಸಾಪ್ ಮತ್ತು ಮನ್ ಕಿ ಬಾತ್ ಪ್ರಮುಖ್‌ಗಳನ್ನು ರಚಿಸುವುದು ಈ ಚುನಾವಣಾ ಋತುವಿನ ಕೆಲಸವಾಗಿದೆ .

ಬಿಜೆಪಿ ರಾಜ್ಯ ಅಧ್ಯಕ್ಷ ವಿ.ಡಿ.ಶರ್ಮಾ ಭೋಪಾಲ್ ನಲ್ಲಿ ಬೂತ್ ಸಂಘಟನೆ ಪರ್ವ್ ಅನ್ನು ಉದ್ಘಾಟಿಸಿದರು. ಈ ಕ್ರಮವು ಮತದಾರರು ಮತ್ತು ಕಾರ್ಮಿಕರನ್ನು ಸಂಪರ್ಕಿಸುವಲ್ಲಿ ತಂತ್ರಜ್ಞಾನದ ಪಾತ್ರವನ್ನು ಒತ್ತಿಹೇಳುತ್ತದೆ.

Tags:    

Similar News