17ನೇ ಲೋಕಸಭೆಯು "ಐತಿಹಾಸಿಕ"ವಾಗಿತ್ತು: ಸಂಸದರ ಅಭಿಪ್ರಾಯ

370 ನೇ ವಿಧಿ, ತ್ರಿವಳಿ ತಲಾಖ್, ರಾಮಮಂದಿರ ಮತ್ತು ಹೊಸ ಸಂಸತ್ತಿನ ಕಟ್ಟಡವನ್ನು ಸಂಸದರು ಪ್ರಮುಖವಾಗಿ ನೆನಪಿಸಿಕೊಂಡರು;

Update: 2024-02-11 08:01 GMT

ನವದೆಹಲಿ: ಶನಿವಾರ 17ನೇ ಲೋಕಸಭೆಯು "ಐತಿಹಾಸಿಕ"ವಾಗಿತ್ತು ಎಂದು ಹಲವು ಸಂಸದರು ಶ್ಲಾಘಿಸಿದ್ದಾರೆ. ಈ ವೇಳೆ 370 ನೇ ವಿಧಿ, ತ್ರಿವಳಿ ತಲಾಖ್, ರಾಮಮಂದಿರ ಮತ್ತು ಹೊಸ ಸಂಸತ್ತಿನ ಕಟ್ಟಡವನ್ನು ಮುಖ್ಯಾಂಶಗಳಾಗಿ ನೆನಪಿಸಿಕೊಂಡರು.

ಮುಂಬೈ ನಾರ್ತ್ ಸೆಂಟ್ರಲ್ ಸಂಸದೆ ಪೂನಂ ಮಹಾಜನ್ ಮಾತನಾಡಿ, "ಪ್ರಧಾನಿ ನರೇಂದ್ರ ಮೋದಿ ಅವರ ಕಾಲದಲ್ಲಿ ನಾನು ಸಂಸದನಾಗಿರುವುದಕ್ಕೆ ನಾನು ಹೆಮ್ಮೆಪಡುತ್ತೇನೆ. ಹಿಂದೆಂದೂ ಕಾಣದ ಸಾಧನೆಗಳನ್ನು ನಾವು ನೋಡುತ್ತಿದ್ದೇವೆ. ಸಾಮಾಜಿಕ ಸುಧಾರಣೆಗಳು ಮತ್ತು ಆರ್ಥಿಕ ಸುಧಾರಣೆಗಳ ಮೇಲೆ ನಾವು ಪ್ರಭಾವ ಬೀರಿದ್ದೇವೆ. ಈ ಸುಧಾರನೆಗಳಿಂದ ರೈತರು, ಯುವಕರು ಮತ್ತು ಮಹಿಳೆಯರನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬಹುದು. ಸುಮಾರು 25 ಕೋಟಿ ಜನರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ, ಇದು ದೊಡ್ಡ ಸಾಧನೆಯಾಗಿದೆ ಎಂದರು.

ಶಾಸಕಾಂಗ ವ್ಯವಹಾರದ ವಿಷಯದ ಬಗ್ಗೆ ಹೇಳುವುದಾದರೆ, "ಆರ್ಟಿಕಲ್ 370 ಅನ್ನು ರದ್ದುಗೊಳಿಸಲಾಯಿತು. ಈ ಮೂಲಕ ದೇಶದ ಜನರ ಮನಸ್ಸಿಗೆ ಹತ್ತಿರವಾಗಿದ್ದೇವೆ. ಕಾಂಗ್ರೆಸ್ ನಿಂದಾಗಿ ಹಲವು ವರ್ಷಗಳ ಕಾಲ ಕಾಶ್ಮೀರವು ಕೆಟ್ಟ ಪರಿಸ್ಥಿತಿಯನ್ನು ಅನುಭವಿಸಿದೆ. ತ್ರಿವಳಿ ತಲಾಖ್ ಮಸೂದೆಯು ಮಹಿಳೆಯರಿಗೆ ಸಮಾನತೆ ತಂದುಕೊಟ್ಟಿದೆ ಎಂದು ಹೇಳಿದರು.

ಮಥುರಾ ಸಂಸದೆ ಹೇಮಾ ಮಾಲಿನಿ ಮಾತನಾಡಿ, ʼʼಕಳೆದ ಐದು ವರ್ಷಗಳ ಕಾಲ ದೇಶವು ತುಂಬಾ ಚೆನ್ನಾಗಿ ಸಾಗಿದೆ. ಕೋವಿಡ್ ಸಮಯದಲ್ಲಿ ಸಹಜವಾಗಿ ನಮಗೆ ಅಡ್ಡಿಯುಂಟಾಯಿತು ಆದರೆ ನಾವು ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ನಾನು ಎರಡು ಲೋಕಸಭೆಗಳ ಭಾಗವಾಗಿದ್ದೇನೆ. ನಾನು ಹಲವಾರು ಜನರು ಮತ್ತು ಬುದ್ಧಿಜೀವಿಗಳನ್ನು ಭೇಟಿ ಮಾಡಿದ್ದೇನೆ. ಇಲ್ಲಿ ಪಕ್ಷ ಭೇದಗಳನ್ನು ಮೀರಿ ಸ್ನೇಹಿತರಾಗುತ್ತಾರೆ ಮತ್ತು ಎಲ್ಲರಿಂದಲೂ ಬಹಳಷ್ಟು ಕಲಿತಿದ್ದೇನೆ. ನಾನು ಇಲ್ಲಿರುವುದು ಇಷ್ಟವಾಯಿತುʼʼ ಎಂದು ಹೇಳಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಹೇಮಾ ಮಾಲಿನಿ, ʼʼಪಕ್ಷ ನನಗೆ ಅವಕಾಶ ನೀಡಿದರೆ ನಾನು ಸಿದ್ಧ... ಬಿಜೆಪಿ ಸರ್ಕಾರದ ಮೂರನೇ ಅವಧಿಯ ಬಗ್ಗೆ ನಮಗೆಲ್ಲರಿಗೂ ವಿಶ್ವಾಸವಿದೆ ಎಂದರು.

ನೋಯ್ಡಾದ ಬಿಜೆಪಿ ಸಂಸದ ಮಹೇಶ್ ಶರ್ಮಾ, 17 ನೇ ಲೋಕಸಭೆಯು ಹೊಸ ದೃಷ್ಟಿಕೋನದೊಂದಿಗೆ ಹೊಸ ಕಟ್ಟಡವನ್ನು ಪ್ರವೇಶಿಸಿದೆ ಎಂದು ಹೇಳಿದರು.

"ಭಾರತವನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ವರ್ಗಕ್ಕೆ ತರುವ ಸಂಕಲ್ಪವಿತ್ತು. ಪ್ರಧಾನಿಯವರು ಅಭಿವೃದ್ಧಿಯ ರಥದ 'ಅರ್ಜುನ್' ಆಗಿದ್ದಾರೆ" ಎಂದು ಅವರು ಹೇಳಿದರು.

17ನೇ ಲೋಕಸಭೆ ಅಸಾಧಾರಣ ಕೆಲಸ ಮಾಡಿದೆ ಎಂದು ಬಿಹಾರದ ಬಿಹ್ತಾದ ಬಿಜೆಪಿ ಸಂಸದ ರಾಮ್ ಕೃಪಾಲ್ ಯಾದವ್ ಹೇಳಿದ್ದಾರೆ.

"ತ್ರಿವಳಿ ತಲಾಖ್, 370 ನೇ ವಿಧಿ ಮತ್ತು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವು ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಬಹುಮತ ತಂದುಕೊಡುತ್ತವೆʼʼ ಎಂದು ಅವರು ಹೇಳಿದರು.

ಇದೊಂದು ಐತಿಹಾಸಿಕ ಲೋಕಸಭೆ ಎಂದು ಈಶಾನ್ಯ ದೆಹಲಿ ಸಂಸದ ಮನೋಜ್ ತಿವಾರಿ ಹೇಳಿದ್ದಾರೆ.

"ಭಾರತೀಯ ದಂಡ ಸಂಹಿತಾ' 'ಭಾರತೀಯ ನ್ಯಾಯ ಸಂಹಿತಾ' ಆಗುವುದನ್ನು ನಾವು ನೋಡಿದ್ದೇವೆ ... ಮುಂದಿನ ಎರಡು ವರ್ಷಗಳಲ್ಲಿ ನಾವು ಮೂರನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದುತ್ತೇವೆ ಎಂದು ಅವರು ಹೇಳಿದರು.

ಸದನದ ಭಾಗವಾಗಿರುವುದು ಹೆಮ್ಮೆಯ ಸಂಗತಿ ಎಂದು ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷದ ಸಂಸದ ಪ್ರಿನ್ಸ್ ರಾಜ್ ಅವರು ಹೇಳಿದರು.

"ಹಲವು ವಿಭಿನ್ನ ಅನುಭವಗಳಾಗಿವೆ. ನಾನು ಸದನಕ್ಕೆ ಬಂದು ನನ್ನ ಮೊದಲ ಭಾಷಣ ಮಾಡುವಾಗ, ಯುವ ಸಂಸದನಾಗಿ ನನಗೆ ಏನನಿಸುತ್ತದೆ ಎಂದು ನನ್ನನ್ನು ಕೇಳಲಾಯಿತು. ನಾನು ಹೊಸ ಶಾಲೆಯಲ್ಲಿ ಹೊಸ ವಿದ್ಯಾರ್ಥಿಯಂತೆ ಭಾವಿಸುತ್ತೇನೆ ಎಂದು ನಾನು ಹೇಳಿದೆ. ಕೆಲವು ವಿದ್ಯಾರ್ಥಿಗಳು ಅಧ್ಯಯನದಲ್ಲಿ ಉತ್ತಮರು, ಇನ್ನೂ ಕೆಲವರು ಹಿಂದೆ ಉಳಿಯುತ್ತಾರೆ. ಸದನದಲ್ಲಿ ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳನ್ನು ಎತ್ತುವ ವಿಧಾನದಿಂದ ನಾವು ಪ್ರತಿದಿನ ಹೊಸದನ್ನು ಕಲಿಯುತ್ತೇವೆ, ”ಎಂದು ಅವರು ಹೇಳಿದರು.

ಈ ಲೋಕಸಭೆಯ ಅವಧಿಯ ಎರಡು ವರ್ಷಗಳು ಕೋವಿಡ್‌ನಿಂದಾಗಿ ಅಧಿವೇಶನ ನಡೆದಿರಲಿಲ್ಲ ಹಾಗಾಗಿ ಅಗತ್ಯವಿರುವ ಎಲ್ಲಾ ಮಸೂದೆಗಳನ್ನು ಅಂಗೀಕರಿಸಲಾಗಿದೆ ಎಂದು ವಾಯುವ್ಯ ದೆಹಲಿ ಸಂಸದ ಹನ್ಸ್ ರಾಜ್ ಹನ್ಸ್ ಹೇಳಿದ್ದಾರೆ.

"ನಾನು ಈ ಲೋಕಸಭೆಯ ಭಾಗವಾಗಲು ಅದೃಷ್ಟಶಾಲಿಯಾಗಿದ್ದೇನೆ. ನನಗೆ ಇಷ್ಟು ಪ್ರೀತಿ ಸಿಗುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ನಾನು ಕಲಾವಿದ, ರಾಜಕಾರಣಿ ಅಲ್ಲ" ಎಂದು ಅವರು ಹೇಳಿದರು.

Tags:    

Similar News