ರಾಹುಲ್ ದೇಶದ್ರೋಹಿ: ಸಚಿವ ಗಿರಿರಾಜ್ ಸಿಂಗ್

ಭಾರತವನ್ನು ದೂಷಿಸಲು ರಾಹುಲ್ ವಿದೇಶ ಪ್ರವಾಸ ಕೈಗೊಂಡಿರುವಂತೆ ತೋರುತ್ತಿದೆ. ಆರೆಸ್ಸೆಸ್ ದೇಶದ ಮೌಲ್ಯಗಳು ಮತ್ತು ಸಂಸ್ಕೃತಿಯಲ್ಲಿ ಬೇರೂರಿದ್ದು,ಅವರು ಎಂದಿಗೂ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸಿಂಗ್ ಹೇಳಿದರು.

Update: 2024-09-09 11:04 GMT

ಒಬ್ಬ ದೇಶದ್ರೋಹಿ ಆರ್‌ಎಸ್‌ಎಸ್ ಅನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಅವರು ಅಮೆರಿಕ ಭೇಟಿ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಟೀಕಿಸಿದ್ದರು. 

ಆರೆಸ್ಸೆಸ್ ವಿರುದ್ಧ ವಾಗ್ದಾಳಿ: ಟೆಕ್ಸಾಸ್‌ನಲ್ಲಿ ಭಾರತೀಯ ಸಮುದಾಯದೊಡನೆ ಮಾತನಾಡಿದ್ದ ರಾಹುಲ್‌, ಆರ್‌ಎಸ್‌ಎಸ್ ಭಾರತ ಒಂದು ಕಲ್ಪನೆ ಎಂದು ನಂಬುತ್ತದೆ. ಆದರೆ, ನಾವು ಭಾರತವು ಅನೇಕ ವಿಚಾರಗಳೆಂದು ನಂಬುತ್ತೇವೆ ಎಂದು ಹೇಳಿದ್ದರು.

ಪ್ರಧಾನಿ ದೇಶದ ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಲೋಕಸಭೆ ಚುನಾವಣೆ ವೇಳೆ ಲಕ್ಷಾಂತರ ಭಾರತೀಯರು ಅರಿತುಕೊಂಡಾಗ ಆರೆಸ್ಸೆಸ್‌ ಮತ್ತು ಬಿಜೆಪಿ ವಿರುದ್ಧ ಹೋರಾಟ ಮಾಡಬೇಕೆಂಬುದು ಸ್ಪಷ್ಟವಾಯಿತು ಎಂದು ಹೇಳಿದ್ದರು. 

ಗಿರಿರಾಜ್ ಸಿಂಗ್ ಪ್ರತಿಕ್ರಿಯೆ: ʻಆರ್‌ಎಸ್‌ಎಸ್ ಪಾತ್ರದ ಬಗ್ಗೆ ತಮ್ಮ ಅಜ್ಜಿಯನ್ನು ಕೇಳಲು ಏನಾದರೂ ತಂತ್ರಜ್ಞಾನವಿದ್ದರೆ, ಅದನ್ನು ಬಳಸಿಕೊಳ್ಳಬೇಕು ಅಥವಾ ಇತಿಹಾಸದ ಪುಟಗಳನ್ನು ನೋಡಬೇಕು. ಆರೆಸ್ಸೆಸ್ ನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳಲು, ರಾಹುಲ್ ಗಾಂಧಿಗೆ ಹಲವು ಜೀವಿತಾವಧಿಗಳು ಬೇಕಾಗುತ್ತವೆ. ದೇಶದ್ರೋಹಿಯೊಬ್ಬ ಆರ್‌ಎಸ್‌ಎಸ್ ನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಮತ್ತು ದೇಶವನ್ನು ಟೀಕಿಸಲು ವಿದೇಶಕ್ಕೆ ಹೋಗುವವರು ಅದರ ಸಾರವನ್ನು ಗ್ರಹಿಸಲು ಸಾಧ್ಯವಿಲ್ಲ,ʼ ಎಂದು ಟೀಕಿಸಿದರು.

ʻರಾಹುಲ್‌ ದೇಶವನ್ನು ದೂಷಿಸಲು ವಿದೇಶಕ್ಕೆ ಪ್ರಯಾಣಿಸುತ್ತಾರೆ ಎಂದು ತೋರುತ್ತದೆ. ಆರ್‌ಎಸ್ಎಸ್ ದೇಶದ ಮೌಲ್ಯಗಳು ಮತ್ತು ಸಂಸ್ಕೃತಿಯಲ್ಲಿ ಬೇರೂರಿದೆ,ʼ ಎಂದು ಹೇಳಿದರು.

Tags:    

Similar News