Manmohan Singh | ಮನಮೋಹನ್‌ ಸಿಂಗ್‌ ಹುಟ್ಟು, ಸಾಧನೆ: ಅಪರೂಪದ ಮೇಧಾವಿಯ ಕುರಿತು ಇಲ್ಲಿದೆ ಮಾಹಿತಿ

ಮನಮೋಹನ್ ಸಿಂಗ್ ಓದಿದ್ದು ಅಮೃತಸರದ ಹಿಂದೂ ಕಾಲೇಜಿನಲ್ಲಿ. ನಂತರ ಅವರು ಪಂಜಾಬ್ ವಿಶ್ವವಿದ್ಯಾನಿಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದರು.

Update: 2024-12-26 20:12 GMT
,ಮನಮೋಹನ್‌ ಸಿಂಗ್‌ ಸಂಗ್ರಹ ಚಿತ್ರ

ಭಾರತ ಕಂಡ ಅತ್ಯಂತ ಶ್ರೇಷ್ಠ ಪ್ರಧಾನಮಂತ್ರಿ ಮನಮೋಹನ್ ಸಿಂಗ್‍(Manmohan Singh) ಅವರು ಡಿ.26ರಂದು ರಾತ್ರಿ ವಿಧಿವಶರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಜಹ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ದಿಲ್ಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತಾದರೂ . ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ತಮ್ಮ ಪಾಂಡಿತ್ಯದಿಂದಲೇ ಗೌರವ ಪಡೆಯುತ್ತಿದ್ದ ಅವರು 2004ರಿಂದ 2014ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. 2004 ಆರಂಭದಲ್ಲಿ ರಾಜ್ಯಸಭೆಯಿಂದ ನಿವೃತ್ತರಾಗಿದ್ದರು.

ಅವರು ಭಾರತ ಕಂಡ ಮೊದಲ ಸಿಖ್‌ ಪ್ರಧಾನಿ. ಜತೆಗೆ ರಾಜಕೀಯಕ್ಕಿಂತ ಮೊದಲು ಹಲವಾರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು. ಅವರ ಹುಟ್ಟು, ಸಾಧನೆ ಹಾಗೂ ಇನ್ನಿತರ ವಿವರಗಳು ಇಲ್ಲಿದೆ.

ಮನಮೋಹನ್ ಸಿಂಗ್ ಅವರು ಸೆಪ್ಟೆಂಬರ್ 26, 1932 ರಂದು ಪಂಜಾಬ್‌ನ ಗಾಹ್‌ನಲ್ಲಿ (ಈಗಿನ ಪಾಕಿಸ್ತಾನ) ಜನಿಸಿದ್ದರು. . ದೇಶ ವಿಭಜನೆಯ ವೇಳೆ ಅವರ ಕುಟುಂಬ ಭಾರತಕ್ಕೆ ಬಂದಿತ್ತು.

ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಮನಮೋಹನ್‌ ಸಿಂಗ್‌ ತಮ್ಮ ಅಜ್ಜಿಯ ಆಶ್ರಯದಲ್ಲಿ ಬೆಳೆದಿದ್ದರು.

ಮನಮೋಹನ್ ಸಿಂಗ್ ಓದಿದ್ದು ಅಮೃತಸರದ ಹಿಂದೂ ಕಾಲೇಜಿನಲ್ಲಿ. ನಂತರ ಅವರು ಪಂಜಾಬ್ ವಿಶ್ವವಿದ್ಯಾನಿಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದರು.

ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ತಮ್ಮ ಅರ್ಥಶಾಸ್ತ್ರ ವಿಷಯದಲ್ಲಿ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಆ ಕಾಲಕ್ಕೆ ಡಿಫಿಲ್ ಪದವಿ ಪಡೆದಿದ್ದರು. ಅಲ್ಲದೆ, 1966 ರಿಂದ 1969ರವರೆಗೆ ವಿಶ್ವ ಸಂಸ್ಥೆಯ ಟ್ರೇಡ್ & ಡೆವಲಪ್‌ಮೆಂಟ್ ಗಾಗಿ ಕೆಲಸ ಮಾಡಿದ್ದರು.

ಸಿಂಗ್ ವಿದೇಶಾಂಗ ವ್ಯಾಪಾರ ಸಚಿವಾಲಯದ ಸಲಹೆಗಾರರಾಗಿದ್ದರು. 1972ರಲ್ಲಿ, ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವಾಲಯದ ಮುಖ್ಯ ಸಲಹೆಗಾರರಾದರು.

1976ರಲ್ಲಿ ಸಿಂಗ್ ಹಣಕಾಸು ಸಚಿವಾಲಯದ ಕಾರ್ಯದರ್ಶಿಯಾದರು.

1982ರಲ್ಲಿ ಮನಮೋಹನ್ ಸಿಂಗ್ ಆರ್‌ಬಿಐ(‌RBI) ಗವರ್ನರ್ ಆಗಿ ನೇಮಕಗೊಂಡಿದ್ದರು. .

1985 ರಿಂದ 1987 ರವರೆಗೆ ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು.

1987ರಲ್ಲಿ ಸಿಂಗ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಯಿತು

1991 ರಲ್ಲಿ, ಅವರು ವಿಶ್ವವಿದ್ಯಾಲಯ ಅನುದಾನ ಆಯೋಗದ (UGC) ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. .

ಜೂನ್ 1991 ರಲ್ಲಿ, ಅವರು ಪಿವಿ ನರಸಿಂಹರಾವ್ ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಕೆಲಸ ಮಾಡಿದ್ದರು. .

ಮನಮೋಹನ್ ಸಿಂಗ್ ಅವರು 1991ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು ಮತ್ತು 1995, 2001, 2007 ಮತ್ತು 2013 ರಲ್ಲಿ ಮರು ಆಯ್ಕೆಯಾದರು.

ಮನಮೋಹನ್ ಸಿಂಗ್ ಅವರು ಮೇ 22, 2004 ರಂದು ಭಾರತದ 14ನೇ ಪ್ರಧಾನ ಮಂತ್ರಿಯಾದರು.

2002 ರಲ್ಲಿ, ಅವರಿಗೆ ಅತ್ಯುತ್ತಮ ಸಂಸದೀಯಪಟು ಪ್ರಶಸ್ತಿ ದೊರಕಿತ್ತು.

2005ರಲ್ಲಿ, ದಿ ಟೈಮ್ ಮನಮೋಹನ್ ಸಿಂಗ್ ಅವರನ್ನು ‘ವಿಶ್ವದ ಟಾಪ್ 100 ಪ್ರಭಾವಿ ವ್ಯಕ್ತಿಗಳಲ್ಲಿ’ ಒಬ್ಬರೆಂದು ಹೆಸರಿಸಿತ್ತು.

ಮನಮೋಹನ್‌ ಸಿಂಗ್‌ ಸಲಹೆ ಪಡೆದ ಜಾಗತಿಕ ಆರ್ಥಿಕ ಕ್ಷೇತ್ರ

ಹಲವಾರು ದೇಶಗಳು ಆರ್ಥಿಕತೆಗೆ ಸಂಬಂಧಪಟ್ಟಂತೆ ಮನಮೋಹನ್‌ ಸಿಂಗ್‌ ಅವರಿಂದ ಸಲಹೆ ಸೂಚನೆಗಳನ್ನು ಪಡೆದಿವೆ. ಅಮೆರಿಕದ ಆರ್ಥಿಕತೆ ಕುಸಿದಾಗ ಮನಮೋಹನ್‌ ಸಿಂಗ್‌ ಅವರು ಪರಿಹಾರ ನೀಡಿದ್ದರು. ಸಿಂಗ್‌ ಅವರು ಆರ್ಥಿಕ ಸುಧಾರಣೆಯ ಹರಿಕಾರ. ಪ್ರಧಾನಿ ಮೋದಿ ಕೂಡ ತಮ್ಮ ಆಡಳಿತದ ಆರಂಭದ ವರ್ಷಗಳಲ್ಲಿ ಮನಮೋಹನ್‌ ಸಿಂಗ್‌ ಅವರಿಂದ ಸಲಹೆ ಪಡೆದಿದ್ದರು.  

Tags:    

Similar News