ಮಣಿಪುರದ ತೌಬಲ್ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ ಎರಡು ನಿಷೇಧಿತ ಸಂಘಟನೆಗಳಿಗೆ ಸೇರಿದ ಆರು ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಹರಣ ಮತ್ತು ಸುಲಿಗೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಕ್ಷದ (ಪೀಪಲ್ಸ್ ವಾರ್ ಗ್ರೂಪ್) ಐವರು ಉಗ್ರರನ್ನು ತೌಬಾಲ್‌ನ ಚರಂಗ್ಪತ್ ಮಾಯಿ ಲೀಕೈನಿಂದ ಬಂಧಿಸಲಾಗಿದೆ.
ಬಂಧಿತರನ್ನು ಥೋಕ್ಚೊಮ್ ಬಿಕ್ರಮ್ ಸಿಂಗ್ (29), ಸಿನಾಮ್ ಬಿಜೆನ್ ಸಿಂಗ್ (37), ತಂಗ್ಜಾಮ್ ದೀಪಕ್ ಸಿಂಗ್ (30), ಲಂಬಮಯಮ್ ನೌಬಿ ಸಿಂಗ್ (26) ಮತ್ತು ಹುಯಿನಿಂಗ್ಸಂಬಾಮ್ ಟೋನ್ ಸಿಂಗ್ (21) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಹ್ಯಾಂಡ್ ಗ್ರೆನೇಡ್, ಸಂಘಟನೆಯ ಐದು ಡಿಮ್ಯಾಂಡ್ ಲೆಟರ್ , ಐದು ಮೊಬೈಲ್ ಹ್ಯಾಂಡ್‌ಸೆಟ್‌ಗಳು , 13 ಸಿಮ್ ಕಾರ್ಡ್‌ಗಳು ಮತ್ತು ನಾಲ್ಕು ಚಕ್ರದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಮತ್ತೊಂದು ಘಟನೆಯಲ್ಲಿ, ಬಿಷ್ಣುಪುರ ಜಿಲ್ಲೆಯ ಕುಂಬಿ ಪ್ರದೇಶದಿಂದ ಪಿಆರ್‌ಇಪಿಎಕೆ (ಪಿಆರ್‌ಒ) ಸಂಘಟನೆಗೆ ಸೇರಿದ ಒಬ್ಬ ಭಯೋತ್ಪಾದಕನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಉಗ್ರನನ್ನು ನೊಂಗ್ಮೈಥೆಮ್ ಗುಣಮಣಿ ಅಲಿಯಾಸ್ ಅಲ್ಲು (32) ಎಂದು ಗುರುತಿಸಲಾಗಿದ್ದು, ಸುಲಿಗೆಯಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಆತನ ಬಳಿಯಿಂದ ಹ್ಯಾಂಡ್ ಗ್ರೆನೇಡ್ ವಶಪಡಿಸಿಕೊಳ್ಳಲಾಗಿದೆ.