ವಕ್ಫ್ ಕಾಯ್ದೆಗೆ ಬೆಂಬಲ; ಬಿಜೆಪಿ ನಾಯಕ ಅಸ್ಕರ್ ಅಲಿ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!
ವಕ್ಫ್ (ತಿದ್ದುಪಡಿ) ಮಸೂದೆಯನ್ನು ಗುರುವಾರ ಲೋಕಸಭೆಯಲ್ಲಿ ಮತ್ತು ಶುಕ್ರವಾರ ಮುಂಜಾನೆ ರಾಜ್ಯಸಭೆಯಲ್ಲಿ ಸುದೀರ್ಘ ಚರ್ಚೆಯ ಬಳಿಕ ಅಂಗೀಕಾರಗೊಂಡಿತು. ಈ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಅಂಕಿತ ಕೊಟ್ಟಿದ್ದಾರೆ.;

ಮಣಿಪುರದಲ್ಲಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷನ ಮನೆಗೆ ಬೆಂಕಿ ಹಚ್ಚಿರುವುದು.
ವಕ್ಫ್ (ತಿದ್ದುಪಡಿ) ಮಸೂದೆಯನ್ನು ಗುರುವಾರ ಲೋಕಸಭೆಯಲ್ಲಿ ಮತ್ತು ಶುಕ್ರವಾರ ಮುಂಜಾನೆ ರಾಜ್ಯಸಭೆಯಲ್ಲಿ ಸುದೀರ್ಘ ಚರ್ಚೆಯ ಬಳಿಕ ಅಂಗೀಕಾರಗೊಂಡಿತು. ಈ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಅಂಕಿತ ಕೊಟ್ಟಿದ್ದಾರೆ.
ಸುದೀರ್ಘ ಚರ್ಚೆಯ ಬಳಿಕ ವಕ್ಫ್ (ತಿದ್ದುಪಡಿ) ಮಸೂದೆಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿದೆ. ಇದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೂ ಅಂಕಿತ ಹಾಕಿದ್ದಾರೆ. ಇದರ ಮಧ್ಯೆಯೇ, ವಕ್ಫ್ ಕಾಯ್ದೆಗೆ (Waqf Act) ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಮಣಿಪುರದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾರ ನಾಯಕರೊಬ್ಬರ ಮನೆಗೆ ದುಷ್ಕರ್ಮಿಗಳು ಭಾನುವಾರ ರಾತ್ರಿ ಬೆಂಕಿ ಹಚ್ಚಿದ್ದಾರೆ.
ಮೋರ್ಚಾದ ಅಧ್ಯಕ್ಷ ಅಸ್ಕರ್ ಅಲಿ ಮಕಾಕ್ ಮಾಯುಮ್ ಅವರ ನಿವಾಸಕ್ಕೆ ಅಪರಿಚಿತರು ಬೆಂಕಿ ಹಚ್ಚಿದ್ದಾರೆ. ಥೌಬಾಲ್ ಜಿಲ್ಲೆಯ ಲಿಲಾಂಗ್ ಪ್ರದೇಶದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ. ರಾತ್ರಿ 9 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಅಸ್ಕರ್ ಅಲಿ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಮನೆಯ ಗೇಟ್ ಸೇರಿ ಹಲವು ಭಾಗಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು, ಬಳಿಕ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ವಕ್ಫ್ ಕಾಯ್ದೆಗೆ ಬೆಂಬಲ
ವಕ್ಫ್ ಕಾಯ್ದೆಗೆ ಬೆಂಬಲ ಸೂಚಿಸಿ ಅಸ್ಕರ್ ಅಲಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದಾದ ಕೆಲ ಹೊತ್ತಿನಲ್ಲೇ ಅಸ್ಕರ್ ಅಲಿ ವಿರುದ್ಧ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಹಂಚಿಕೊಂಡ ಅಸ್ಕರ್ ಅಲಿ, ತಮ್ಮ ಪೋಸ್ಟ್ ಕುರಿತು ಕ್ಷಮೆಯಾಚಿಸಿದ್ದರು. ಇದಾದ ನಂತರವೂ ದುಷ್ಕರ್ಮಿಗಳು ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.
ವಕ್ಫ್ ಕಾಯ್ದೆ ವಿರೋಧಿಸಿ ಮಣಿಪುರ ರಾಜಧಾನಿ ಇಂಫಾಲ ಸೇರಿ ಹಲವೆಡೆ ಭಾರಿ ಪ್ರತಿಭಟನೆ ನಡೆದಿದೆ. ಇಂಫಾಲದಲ್ಲಂತೂ ಸುಮಾರು 5 ಸಾವಿರ ಜನ ಪ್ರತಿಭಟನಾ ರ್ಯಾಲಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪೊಲೀಸರ ಜತೆಗೆ ವಾಗ್ವಾದವೂ ನಡೆದಿದೆ. ಮಣಿಪುರ ಮಾತ್ರವಲ್ಲ, ದೇಶದ ಹಲವೆಡೆಯೂ ಪ್ರತಿಭಟನೆ ನಡೆಸಲಾಗಿದೆ.
ಇಂಫಾಲ್ ಈಸ್ಟ್‌ನ ಕ್ಷತ್ರಿ ಅವಾಂಗ್ ಲೈಕೈ, ಕೈರಾಂಗ್ ಮುಸ್ಲಿಂ ಮತ್ತು ಕಿಯಾಮ್‌ಗೀ ಮುಸ್ಲಿಂ ಪ್ರದೇಶಗಳಲ್ಲಿ ಮತ್ತು ಥೌಬಾಲ್ ಜಿಲ್ಲೆಯ ಸೊರಾದಲ್ಲಿ ಸಹ ಪ್ರತಿಭಟನೆಗಳು ನಡೆದವು.
ಭದ್ರತೆ ಹೆಚ್ಚಳ
ಮುಸ್ಲಿಂಮರು ಹೆಚ್ಚಿರುವ ಪ್ರದೇಶಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದ್ದು, ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಕ್ಫ್ ತಿದ್ದುಪಡಿ ಕಾಯ್ದೆಯ ಬಗ್ಗೆ
ವಕ್ಫ್ (ತಿದ್ದುಪಡಿ) ಮಸೂದೆಯನ್ನು ಗುರುವಾರ ಲೋಕಸಭೆಯಲ್ಲಿ ಮತ್ತು ಶುಕ್ರವಾರ ಮುಂಜಾನೆ ರಾಜ್ಯಸಭೆಯಲ್ಲಿ ಸುದೀರ್ಘ ಚರ್ಚೆಯ ಬಳಿಕ ಅಂಗೀಕಾರಗೊಂಡಿತು. ಈ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಅಂಕಿತ ಕೊಟ್ಟಿದ್ದಾರೆ.