Kolkata rape and murder: ಇಂದು ಮಧ್ಯರಾತ್ರಿ ಬೃಹತ್ ಪ್ರತಿಭಟನೆ

ಕೋಲ್ಕತ್ತಾದಲ್ಲಿ ವೈದ್ಯೆಯ ಭೀಕರ ಹತ್ಯೆಯನ್ನು ಪ್ರತಿಭಟಿಸಲು ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ಬಂಗಾಳದಾದ್ಯಂತ 45 ವಿವಿಧ ಸ್ಥಳಗಳಲ್ಲಿ ಜನರು ಮಧ್ಯರಾತ್ರಿಯಲ್ಲಿ ಸೇರುತ್ತಾರೆ.

Update: 2024-08-14 13:11 GMT

ಕೋಲ್ಕತ್ತಾ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯೆಯ ಹತ್ಯೆಯನ್ನು ಪ್ರತಿಭಟಿಸಿ, ಕನಿಷ್ಠ 45 ಸ್ಥಳಗಳಲ್ಲಿ ಬುಧವಾರ ಮಧ್ಯರಾತ್ರಿ 'ಮಹಿಳೆಯರು ರಾತ್ರಿಯನ್ನು ಮರುಪಡೆಯಿರಿ' ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. 

ದೇಶದ 78 ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ಪಶ್ಚಿಮ ಬಂಗಾಳದಾದ್ಯಂತ ಈ ಪ್ರತಿಭಟನೆ ನಡೆಯಲಿದೆ. ಹಲವಾರು ಜಿಲ್ಲೆಗಳ ಸಂಘಟಕರ ಪ್ರಕಾರ, ಪ್ರತಿಭಟನಾಕಾರರು ಬುಧವಾರ ತಡರಾತ್ರಿಯಿಂದ ಸೇರಲು ಪ್ರಾರಂಭಿಸುತ್ತಾರೆ. ಸ್ವಾತಂತ್ರ್ಯ ದಿನದಂದು ಮಧ್ಯರಾತ್ರಿವರೆಗೆ ಮುಂದುವರಿಯುತ್ತದೆ. ಅವರ ಬೇಡಿಕೆ: ಬಂಗಾಳದ ಮಹಿಳೆಯರಿಗೆ ಸ್ವಾತಂತ್ರ್ಯ.

'ಸ್ವಾತಂತ್ರ್ಯದ ಮಧ್ಯರಾತ್ರಿಯಲ್ಲಿ ಮಹಿಳಾ ಸ್ವಾತಂತ್ರ್ಯಕ್ಕಾಗಿ' ಎಂದು ಕರೆಯಲಾಗುತ್ತಿರುವ ಈ ಪ್ರತಿಭಟನೆಯಲ್ಲಿ ಭಾಗವಹಿಸಲು ಸಮಾಜದ ಎಲ್ಲಾ ವರ್ಗಗಳ ಜನರನ್ನು ಒತ್ತಾಯಿಸಲಾಗುತ್ತಿದೆ. ಭಾಗವಹಿಸುವವರು ಮೇಣದಬತ್ತಿ ಹಿಡಿದು ಶಂಖವನ್ನು ಊದಬೇಕಿದೆ.

ಕೋಲ್ಕತ್ತಾ ಮತ್ತು ಬಂಗಾಳದಾದ್ಯಂತ ಇತರ ಪಟ್ಟಣಗಳಲ್ಲಿ ಪ್ರತಿಭಟನೆಗೆ ನಿಗದಿಪಡಿಸಿದ ಸ್ಥಳಗಳ ವಿವರಗಳನ್ನು ಹಂಚಿಕೊಳ್ಳಲಾಗುತ್ತಿದೆ. ವಾಟ್ಸ್‌ ಆಪ್‌ ನಲ್ಲಿ, 'Justice for RG Kar', 'The Night is Ours', 'Reclaim the Night', 'Meyera Raat er Dhokhol Koro ಮತ್ತು ʻMeyera Raat er Dokhol Nao... Sankha Doniteʼ ಎಂದು ಪ್ರಚಾರ ಮಾಡಲಾಗುತ್ತಿದೆ.

ರಾಜಕಾರಣಿಗಳ ಪಾಲ್ಗೊಳ್ಳುವಿಕೆ: ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ಚಳವಳಿಯಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದಾರೆ. ಟಿಎಂಸಿ ಸಂಸದರು ಪ್ರತಿಭಟನಾಕಾರರೊಂದಿಗೆ ಸೇರುವುದಾಗಿ ಹೇಳಿದ್ದಾರೆ. ʻಮಹಿಳೆಯರ ಮೇಲಿನ ದೌರ್ಜನ್ಯ ಸಾಕು. ಒಟ್ಟಾಗಿ ವಿರೋಧಿಸೋಣʼ ಎಂದು ಎಕ್ಸ್‌ ನಲ್ಲಿ ಬರೆದಿದ್ದಾರೆ.

ದೆಹಲಿ, ಬೆಂಗಳೂರು ಮತ್ತು ಗುವಾಹಟಿಯಲ್ಲೂ 'ಮಹಿಳೆಯರು ರಾತ್ರಿಯನ್ನು ಮರುಪಡೆಯಿರಿ' ಕಾರ್ಯಕ್ರಮ ನಡೆಯಲಿದೆ.

ಕಿರಿಯ ವೈದ್ಯರ ಆಂದೋಲನದಿಂದ ರಾಜ್ಯದ ಆರೋಗ್ಯ ಸೇವೆಗಳು ಕ್ಷೀಣಗೊಂಡಿವೆ. ಹೆಚ್ಚಿನ ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಮತ್ತು ಹೊರಾಂಗಣ ವಿಭಾಗಗಳು ಸಹ ಹೆಚ್ಚಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ.

ಪ್ರಮುಖ ಖಾಸಗಿ ಆಸ್ಪತ್ರೆಗಳಾದ ಮಣಿಪಾಲ್, ಮೆಡಿಕಾ, ಪೀರ್‌ಲೆಸ್ ಮತ್ತು ಆರ್‌ಎನ್ ಟ್ಯಾಗೋರ್‌ನ ವೈದ್ಯರು, ದಾದಿಯರು ಮತ್ತು ಇತರ ಸಿಬ್ಬಂದಿ ಮುಕುಂದಾಪುರದಿಂದ ಮೆರವಣಿಗೆ ನಡೆಸಿದರು. ಬುಧವಾರ ಬೆಳಗ್ಗೆ ಸಿಬಿಐನ ಹಿರಿಯ ಅಧಿಕಾರಿಗಳ ತಂಡ ತನಿಖೆ ಆರಂಭಿಸಿದೆ.

ಕುಟುಂಬದ ಆಕ್ರೋಶ: ಅತ್ಯಾಚಾರಕ್ಕೊಳಗಾದ ವೈದ್ಯೆಯ ಕುಟುಂಬಕ್ಕೆ ಆಗಸ್ಟ್ 9 ರಂದು ಪೊಲೀಸರು ʻಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದರು. ಮಗಳ ದೇಹವನ್ನು ನೋಡಲು ತಂದೆಗೆ ಅವಕಾಶ ನೀಡುವ ಮೊದಲು ಕುಟುಂಬವನ್ನು ಮೂರು ಗಂಟೆ ಕಾಲ ಕಾಯಿಸಿದರು. ತಾಯಿಗೆ ಸಾಂತ್ವನ ಹೇಳಲು ಆಗುತ್ತಿಲ್ಲ,ʼ ಎಂದು ಸಂಬಂಧಿಕರು ತಿಳಿಸಿದ್ದಾರೆ. 

Tags:    

Similar News