ಸಂಜಯ್ ಝಾ ಜೆಡಿ(ಯು) ಕಾರ್ಯಾಧ್ಯಕ್ಷ

ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರಕ್ಕೆ ಗಮನ ನೀಡುತ್ತಾರೆ ಮತ್ತು ವಿಶೇಷ ವರ್ಗದ ಸ್ಥಾನಮಾನ ಅಥವಾ ಪ್ಯಾಕೇಜ್‌ನ ಬೇಡಿಕೆಯನ್ನು ಈಡೇರಿಸುತ್ತಾರೆ ಎಂದು ಝಾ ಹೇಳಿದರು.

Update: 2024-06-29 13:31 GMT

ಜೆಡಿ(ಯು) ಕಾರ್ಯಾಧ್ಯಕ್ಷರನ್ನಾಗಿ ರಾಜ್ಯಸಭೆ ಸದಸ್ಯ ಸಂಜಯ್ ಝಾ ಅವರನ್ನು ನೇಮಿಸಲಾಗಿದೆ.

ಮೇಲ್ಮನೆಯಲ್ಲಿ ಪಕ್ಷದ ನಾಯಕರಾಗಿರುವ ಝಾ, ಭಾರತೀಯ ಜನತಾ ಪಕ್ಷ (ಬಿಜೆಪಿ) ದೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂದು ತಿಳಿದುಬಂದಿದೆ. 

ವಿಶೇಷ ಸ್ಥಾನಮಾನ ಅಥವಾ ಪ್ಯಾಕೇಜ್: ಶನಿವಾರ (ಜೂನ್ 29) ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆಯನ್ನು ಪಕ್ಷ ಪುನರುಚ್ಚರಿಸಿದೆ. ವಿಶೇಷ ಪ್ಯಾಕೇಜ್ ಅನ್ನು ಪರ್ಯಾಯವಾಗಿ ಪರಿಗಣಿಸುವಂತೆ ಕೇಂದ್ರವನ್ನು ಒತ್ತಾಯಿಸಿದೆ ಎಂದು ಹಿರಿಯ ನಾಯಕ ನೀರಜ್ ಕುಮಾರ್ ಹೇಳಿದ್ದಾರೆ. 

ಪ್ರಶ್ನೆಪರೀಕ್ಷೆ ಸೋರಿಕೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಜೆಡಿಯು ಒತ್ತಾಯಿಸಿದೆ. ಇಂಥ ಘಟನೆಗಳನ್ನು ತಡೆಯಲು ಬಲವಾದ ಕಾನೂನನ್ನು ಒತ್ತಾಯಿಸಿದೆ. 

ಮೋದಿ ಅವರನ್ನು ಹೊಗಳಿದ ಝಾ: ಮಾಧ್ಯಮಗಳೊಂದಿಗೆ ಮಾತನಾಡಿ ಝಾ, ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದತ್ತ ಗಮನ ಹರಿಸುತ್ತಾರೆ. ರಾಜ್ಯಕ್ಕೆ ವಿಶೇಷ ವರ್ಗದ ಸ್ಥಾನಮಾನ ಅಥವಾ ಪ್ಯಾಕೇಜ್‌ನ ಬೇಡಿಕೆ ಈಡೇರಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು. 

ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಮತ್ತು ಇತರ ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ಕಾಂಗ್ರೆಸ್ ಟೀಕೆ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಅವರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಈ ಇ‌ಬ್ಬರು ತಮ್ಮ ರಾಜ್ಯಗಳಿಗೆ ವಿಶೇಷ ಸ್ಥಾನಮಾನಕ್ಕಾಗಿ ಪ್ರತಿಭಟಿಸುವ ಧೈರ್ಯವಿದೆಯೇ? ಎಂದು ಕೇಳಿದೆ. 

ʻಬಿಹಾರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆಯ ನಿರ್ಣಯವನ್ನು ಜೆಡಿಯು ಅಂಗೀಕರಿಸಿದೆ. ರಾಜ್ಯ ಸಂಪುಟದಲ್ಲಿ ಅಂತಹ ನಿರ್ಣಯವನ್ನು ಅಂಗೀಕರಿಸಲು ಸಿಎಂ ಧೈರ್ಯ ಮಾಡುವರೇ? ಬಿಹಾರದ ಸಿಎಂ ಮಾತಿನಂತೆ ನಡೆದುಕೊಳ್ಳುತ್ತಾರೆಯೇ?,ʼ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಎಕ್ಸ್ ನಲ್ಲಿ ಪ್ರಶ್ನಿಸಿದ್ದಾರೆ.

ʻಟಿಡಿಪಿ ನಿಲುವು ಏನು? ಆಂಧ್ರಪ್ರದೇಶಕ್ಕೆ ಪ್ಯಾಕೇಜ್‌ ನಿರ್ಣಯವನ್ನು ಏಕೆ ಅಂಗೀಕರಿಸಿಲ್ಲ? ಏಪ್ರಿಲ್ 30, 2014 ರಂದು ತಿರುಪತಿಯಲ್ಲಿ ಅಜೈವಿಕ ಪ್ರಧಾನಮಂತ್ರಿಯವರು ಈ ಭರವಸೆಯನ್ನು ಒತ್ತಿಹೇಳಿದ್ದರು,ʼ ಎಂದು ಅವರು ಕೇಳಿದ್ದಾರೆ.

Tags:    

Similar News