ಇಂದೋರ್‌ನ ಹೋಳ್ಕರ್ ಸ್ಟೇಡಿಯಂಗೆ ಎರಡು ಬಾಂಬ್ ಬೆದರಿಕೆ ಇಮೇಲ್‌ಗಳು
ಮೇ 12ರಂದುಮತ್ತೊಂದು ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಬಾಂಬ್ ಸ್ಕ್ವಾಡ್‌ನಿಂದ ತಪಾಸಣೆ ನಡೆಸಲಾಗಿದೆ. ಈ ಬಾರಿಯೂ ಯಾವುದೇ ಅಪಾಯಕಾರಿ ವಸ್ತು ಕಂಡುಬಂದಿಲ್ಲ ಎಂದು ಪೊಲೀಸರು ದೃಢಪಡಿಸಿದರು.;
ಮೇ 12ರಂದುಮತ್ತೊಂದು ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಬಾಂಬ್ ಸ್ಕ್ವಾಡ್‌ನಿಂದ ತಪಾಸಣೆ ನಡೆಸಲಾಗಿದೆ. ಈ ಬಾರಿಯೂ ಯಾವುದೇ ಅಪಾಯಕಾರಿ ವಸ್ತು ಕಂಡುಬಂದಿಲ್ಲ ಎಂದು ಪೊಲೀಸರು ದೃಢಪಡಿಸಿದರು.ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಹೋಳ್ಕರ್ ಸ್ಟೇಡಿಯಂಗೆ ಮೇ 9 ಮತ್ತು ಮೇ 12ರಂದು ಎರಡು ಪ್ರತ್ಯೇಕ ಬಾಂಬ್ ಬೆದರಿಕೆಗಳು ಬಂದಿವೆ. 'ಆಪರೇಷನ್ ಸಿಂದೂರ್' ಕಾರ್ಯಾಚರಣೆಗೆ ಪ್ರತೀಕಾರವಾಗಿ ಬಾಂಬ್ ಇಡುವುದಾಗಿ ಇಮೇಲ್ ಕಳುಹಿಸಲಾಗಿದೆ. ಪೊಲೀಸರು ಎರಡೂ ಬೆದರಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ವ್ಯಾಪಕ ತನಿಖೆ ನಡೆಸುತ್ತಿದ್ದಾರೆ.
ಮೊದಲ ಬೆದರಿಕೆ ಸಂದೇಶವು ಮೇ 9ರಂದು ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (MPCA)ನ ಅಧಿಕೃತ ಇಮೇಲ್ ಐಡಿಗೆ ಬಂದಿತ್ತು. ಈ ಸಂದೇಶದಲ್ಲಿ "ಆಪರೇಷನ್ ಸಿಂದೂರ್'ಗೆ ಪ್ರತಿಕಾರವಾಗಿ ಸ್ಟೇಡಿಯಂ ಅನ್ನು ಸ್ಫೋಟಿಸಲಾಗುವುದು" ಎಂದು ಎಚ್ಚರಿಕೆ ನೀಡಲಾಗಿತ್ತು. ಅಲ್ಲದೆ, "ಪಾಕಿಸ್ತಾನದೊಂದಿಗೆ ಜಗಳವಾಡಲು ಬಂದರೆ ಎಚ್ಚರ" ಮತ್ತು "ಪಾಕಿಸ್ತಾನದ ಸ್ಲೀಪರ್ ಸೆಲ್‌ಗಳು ದೇಶಾದ್ಯಂತ ಸಕ್ರಿಯವಾಗಿವೆ, ಸ್ಟೇಡಿಯಂ ಮತ್ತು ಆಸ್ಪತ್ರೆಯಲ್ಲಿ ಸ್ಫೋಟವಾಗಬಹುದು" ಎಂಬಂತಹ ಬೆದರಿಕೆಗಳು ಬಂದಿದ್ದವು. ತುಕೋಗಂಜ್ ಪೊಲೀಸ್ ಮತ್ತು ಕ್ರೈಂ ಬ್ರಾಂಚ್ ತಂಡಗಳು ಬಾಂಬ್ ಡಿಸ್ಪೋಸಲ್ ಸ್ಕ್ವಾಡ್‌ನೊಂದಿಗೆ ಐದು ಗಂಟೆಗಳ ಕಾಲ ಸ್ಟೇಡಿಯಂನಾದ್ಯಂತ ತಪಾಸಣೆ ನಡೆಸಿದೆ.
ಮೇ 12ರಂದುಮತ್ತೊಂದು ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಬಾಂಬ್ ಸ್ಕ್ವಾಡ್‌ನಿಂದ ತಪಾಸಣೆ ನಡೆಸಲಾಗಿದೆ. ಈ ಬಾರಿಯೂ ಯಾವುದೇ ಅಪಾಯಕಾರಿ ವಸ್ತು ಕಂಡುಬಂದಿಲ್ಲ ಎಂದು ಪೊಲೀಸರು ದೃಢಪಡಿಸಿದರು.
ಈ ಇಮೇಲ್‌ಗಳ ಮೂಲವನ್ನು ಪತ್ತೆಹಚ್ಚಲು ಪೊಲೀಸರು ಸೈಬರ್ ಸ್ಕ್ವಾಡ್‌ನ ಸಹಾಯದಿಂದ ತೀವ್ರ ತನಿಖೆ ನಡೆಸುತ್ತಿದ್ದಾರೆ. ಈ ಇಮೇಲ್‌ಗಳು ಕಿಡಿಗೇಡಿಗಳ ಕೃತ್ಯ ಆಗಿರಬಹುದು ಎಂದು ಶಂಕಿಸಲಾಗಿದೆ,
ಇಂದೋರ್‌ನಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ವಿಮಾನ ನಿಲ್ದಾಣಗಳು, ಬ್ಯಾಂಕ್‌ಗಳು, ಆಸ್ಪತ್ರೆಗಳು ಮತ್ತು ಶಾಲೆಗಳಿಗೂ ಇಂತಹ ಹುಸಿ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ಒಂದು ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.