Manmohan Singh | ಒರಟು ರಾಜಕೀಯದ ಸೌಮ್ಯ ವ್ಯಕ್ತಿ: ಮನಮೋಹನ್ ಸಿಂಗ್‌ಗೆ ಶ್ರದ್ಧಾಂಜಲಿಯ ಮಹಾಪೂರ

ಮನಮೋಹನ್ ಸಿಂಗ್ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ "ಅತ್ಯಂತ ಪ್ರಭಾವಶಾಲಿ ನಾಯಕ" ಎಂದು ಕರೆದರೆ, ಪ್ರಿಯಾಂಕಾ ಗಾಂಧಿ ಅವರನ್ನು "ರಾಜಕೀಯದ ಒರಟು ಜಗತ್ತಿನ ಸೌಮ್ಯ ವ್ಯಕ್ತಿ" ಎಂದು ಬಣ್ಣಿಸಿದ್ದಾರೆ.

Update: 2024-12-26 18:32 GMT
ಸಂಗ್ರಹ ಚಿತ್ರ,

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಕೆಲವೇ ಗಂಟೆಗಳ ನಂತರ ಗುರುವಾರ ನಿಧನ ಹೊಂದಿದರು. ಅವರ ನಿಧನ ಸುದ್ದಿ ಹರಡುತ್ತಿದ್ದಂತರೆ ಜಾಗತಿಕವಾಗಿ ಸಂತಾಪಗಳ ಮಹಾಪೂರವೇ ಹರಿದು ಬಂತು. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಭೂಪಿಂದರ್ ಸಿಂಗ್ ಹೂಡಾ, ಎಎಪಿ ಮುಖಂಡರಾದ ಅತಿಶಿ ಮತ್ತು ರಾಘವ್ ಚಡ್ಡಾ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.


ಮನಮೋಹನ್ ಸಿಂಗ್ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ "ಅತ್ಯಂತ ಪ್ರಭಾವಶಾಲಿ ನಾಯಕ" ಎಂದು ಕರೆದರೆ, ಪ್ರಿಯಾಂಕಾ ಗಾಂಧಿ ಅವರನ್ನು "ರಾಜಕೀಯದ ಒರಟು ಜಗತ್ತಿನ ಸೌಮ್ಯ ವ್ಯಕ್ತಿ" ಎಂದು ಬಣ್ಣಿಸಿದ್ದಾರೆ.

ವಿನಮ್ರತೆ ಜತೆಗೆ ಗೌರವಾನ್ವಿತ ಅರ್ಥಶಾಸ್ತ್ರಜ್ಞರಾಗಿಯೂ ಬೆಳೆದ ಅವರು ಹಣಕಾಸು ಸಚಿವರು ಮತ್ತು ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದವರು. ಅವರು ಭಾರತದ ಆರ್ಥಿಕ ನೀತಿಯ ಮೇಲೆ ಬಲವಾದ ಛಾಪು ಮೂಡಿಸಿದವರು. ನಮ್ಮ ಪ್ರಧಾನಿಯಾಗಿ ಜನರ ಜೀವನ ಸುಧಾರಣೆಗೆ ವ್ಯಾಪಕ ಪ್ರಯತ್ನಗಳನ್ನು ಮಾಡಿದವರು" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ಸಿಂಗ್ ಅವರ ಕುಟುಂಬ ಮತ್ತು ಅಸಂಖ್ಯಾತ ಅಭಿಮಾನಿಗಳ ಜತೆಗಿದ್ದೇನೆ ಎಂದೂ ಹೇಳಿದ್ದಾರೆ.


ಹರಿಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ಭೂಪೇಂದರ್ ಸಿಂಗ್ ಹೂಡಾ ಅವರು ಮನಮೋಹನ್ ಸಿಂಗ್ ಅವರನ್ನು "ವಿಶ್ವದ ಶ್ರೇಷ್ಠ ಅರ್ಥಶಾಸ್ತ್ರಜ್ಞ" ಎಂದು ಕರೆದಿದ್ದಾರೆ. ಅವರು ತಮ್ಮ ಕೆಲಸದ ಮೂಲಕ ಭಾರತವನ್ನು ಮುಂದೆ ಕೊಂಡೊಯ್ದವರು ಎಂದು ಹೇಳಿದ್ದಾರೆ.

ಜಮ್ಮು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ ಅವರು ಮನಮೋಹನ್ ಸಿಂಗ್ ಅವರನ್ನು "ಬೌದ್ಧಿಕ ದೈತ್ಯ " ಎಂದು ಬಣ್ಣಿಸಿ. ಇಂಥ ಹಿರಿಯ ನಾಯಕರಿಂದ ನಾವು ಸಾಕಷ್ಟು ಕಲಿಯಬೇಕಾಗಿದೆ ಎಂದು ಹೇಳಿದ್ದಾರೆ.

"ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನದ ಸುದ್ದಿ ಕೇಳಿ ತುಂಬಾ ದುಃಖವಾಯಿತು. ಅವರು ನಿಜವಾಗಿಯೂ ಬೌದ್ಧಿಕ ದೈತ್ಯ, ನಿಪುಣ ಅರ್ಥಶಾಸ್ತ್ರಜ್ಞರಾಗಿದ್ದರು, ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಅವರು ಸಂಪೂರ್ಣ ಸಂಭಾವಿತ ವ್ಯಕ್ತಿಯಾಗಿದ್ದರು. ಭಾರತಮಾತೆ ತನ್ನ ಮಗನನ್ನು ಕಳೆದುಕೊಂಡಿದ್ದಾಳೆ ಎಂದು ಒಮರ್‌ ಟ್ವೀಟ್‌ ಮಾಡಿದ್ದಾರೆ.

Tags:    

Similar News