ʼಗ್ಯಾರಂಟಿ ಯೋಜನೆʼ ಟೀಕಿಸುವ ನೀವು ಎಷ್ಟು ಭರವಸೆ ಈಡೇರಿಸಿದ್ದೀರಿ; ಪ್ರಧಾನಿಗೆ ವೇಣುಗೋಪಾಲ್ ಪ್ರಶ್ನೆ
ಕರ್ನಾಟಕ ಕಾಂಗ್ರೆಸ್ ನೇತೃತ್ವದ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಟೀಕಿಸಿದ್ದ ಪ್ರಧಾನಿ ಮೋದಿ ಅವರಿಗೆ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ತಿರುಗೇಟು ನೀಡಿದ್ದಾರೆ.;
ಕಿರೀಟ ರಹಿತ ಉತ್ಪ್ರೇಕ್ಷಿತ ಚಾಂಪಿಯನ್, ಜನರ ದಿಕ್ಕು ತಪ್ಪಿಸುವ ಹಾಗೂಒಂದೇ ಒಂದು ಭರವಸೆ ಈಡೇರಿಸದ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್‌ನ ಸರಿಸಾಟಿಯಿಲ್ಲದ ಜನ ಕಲ್ಯಾಣ ಕಾರ್ಯಕ್ರಮಗಳ ಕುರಿತು ಮಾತನಾಡುವ ದಿಟ್ಟತನ ಪ್ರದರ್ಶಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ವ್ಯಂಗ್ಯವಾಡಿದ್ದಾರೆ.
ಕರ್ನಾಟಕ ಕಾಂಗ್ರೆಸ್ ನೇತೃತ್ವದ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಟೀಕಿಸಿದ್ದ ಪ್ರಧಾನಿ ಮೋದಿ ಅವರಿಗೆ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ತಿರುಗೇಟು ನೀಡಿದ್ದಾರೆ.
ಅಚ್ಛೇ ದಿನ್, ಅಮೃತ್ ಕಾಲ್ ಎಲ್ಲಿ ಹೋಯಿತು ಮಿಸ್ಟರ್ ಮೋದಿ ? 2022 ರ ವೇಳೆಗೆ ಎಲ್ಲರಿಗೂ ವಸತಿ ಸೌಲಭ್ಯ, 100 ಸ್ಮಾರ್ಟ್ ಸಿಟಿಗಳ ನಿರ್ಮಾಣ ಏನಾಯ್ತು, ನೋಟು ಅಮಾನ್ಯೀಕರಣದ ಪ್ರಯೋಜನದ ಬಗ್ಗೆ ಜನರಿಗೆ ಹೇಳಿದ ಸುಳ್ಳುಗಳು ಏನಾದವು ಎಂದು ವೇಣುಗೋಪಾಲ್ ಅವರು ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿ ನಮ್ಮ ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ 2000 ರೂಪಾಯಿಯಂತೆ 1.2 ಕೋಟಿ ಮಹಿಳೆಯರಿಗೆ ನೆರವು ನೀಡುತ್ತಿದೆ. ಮತ್ತೊಂದು ಕೈಯಲ್ಲಿ ಕೇಂದ್ರದ ವಿರೋಧದ ಮಧ್ಯೆಯೂ ಅನ್ನ ಭಾಗ್ಯ ಯೋಜನೆ ಮೂಲಕ ಆಹಾರ ಭದ್ರತೆ ಖಾತ್ರಿಪಡಿಸಿದ್ದೇವೆ. ಶಕ್ತಿ ಯೋಜನೆಯಡಿ ಮೂರು ಕೋಟಿ ಮಹಿಳೆಯರು ಉಚಿತ ಪ್ರಯಾಣದ ಸ್ವಾತಂತ್ರ್ಯ ಅನುಭವಿಸಿದ್ದಾರೆ. ನಿಮ್ಮ(ಬಿಜೆಪಿ) ಚುನಾವಣಾ ಗಿಮಿಕ್‌ಗಳಿಗಿಂತ ಭಿನ್ನವಾಗಿ ಸ್ವಾತಂತ್ರ್ಯದ ನಂತರದ ಕಲ್ಯಾಣ ಮಾದರಿ ನಮ್ಮದು ಎಂದು ಅವರು ತಿರುಗೇಟು ನೀಡಿದ್ದಾರೆ.
ನಿಷ್ಕಪಟ, ಸೇಡಿನ ರಾಜಕಾರಣ ಮಾಡುವ ನಾಯಕರಿಗೆ ನಮ್ಮ ಆಡಳಿತ ಟೀಕಿಸುವ ಹಕ್ಕಿಲ್ಲ ಎಂದು ವೇಣುಗೋಪಾಲ್ ಅವರು ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.