ಕಳಪೆ ರಸ್ತೆಗಳಿಗೆ ಶುಲ್ಕ ವಿಧಿಸಬಾರದು: ನಿತಿನ್ ಗಡ್ಕರಿ
ʻಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸದಿದ್ದರೆ, ಶುಲ್ಕ ವಿಧಿಸಬಾರದು. ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲು, ನಮ್ಮ ಆಸಕ್ತಿಯನ್ನು ಕಾಪಾಡಿಕೊಳ್ಳಲು ಟೋಲ್ ಅಳವಡಿಕೆಗೆ ಆತುರದಲ್ಲಿದ್ದೇವೆʼ ಎಂದು ಗಡ್ಕರಿ ಹೇಳಿದರು.;
ರಸ್ತೆಗಳು ಕಳಪೆ ಸ್ಥಿತಿಯಲ್ಲಿದ್ದರೆ, ಹೆದ್ದಾರಿ ಏಜೆನ್ಸಿಗಳು ಬಳಕೆ ಶುಲ್ಕ ವಿಧಿಸಬಾರದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ (ಜೂನ್ 25) ಹೇಳಿದ್ದಾರೆ.
ಉಪಗ್ರಹ ಆಧಾರಿತ ಟೋಲಿಂಗ್ ಕುರಿತ ಜಾಗತಿಕ ಕಾರ್ಯಾಗಾರದಲ್ಲಿ ಮಾತನಾಡಿದರು.
ʻನೀವು ಉತ್ತಮ ಗುಣಮಟ್ಟದ ಸೇವೆಯನ್ನು ನೀಡದಿದ್ದರೆ, ಶುಲ್ಕ ವಿಧಿಸಬಾರದು. ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲು ಮತ್ತು ನಮ್ಮ ಹಿತಾಸಕ್ತಿ ಕಾಪಾಡಲು, ನಾವು ಟೋಲ್ ಗಳನ್ನು ಆರಂಭಿಸುವ ಆತುರದಲ್ಲಿದ್ದೇವೆ. ಉತ್ತಮ ಗುಣಮಟ್ಟದ ರಸ್ತೆಯನ್ನು ಒದಗಿಸಿ, ಬಳಕೆದಾರರ ಶುಲ್ಕವನ್ನು ಸಂಗ್ರಹಿಸಬೇಕು. ಗುಂಡಿಗಳು, ಕೆಸರು ಇರುವ ರಸ್ತೆಗಳಲ್ಲಿ ಶುಲ್ಕ ಸಂಗ್ರಹಿಸಿದರೆ, ಜನರಿಂದ ಪ್ರತಿಭಟನೆ ವ್ಯಕ್ತವಾಗುತ್ತದೆ,ʼ ಎಂದು ಹೇಳಿದರು.
ಹೈಬ್ರಿಡ್ ಮಾದರಿ: ಸರ್ಕಾರಿ ಸ್ವಾಮ್ಯದ ಎನ್‌ಎಚ್‌ಎಐ ಫಾಸ್ಟ್‌ಟ್ಯಾಗ್ ನಡಿ ಜಿಎನ್‌ಎಸ್‌ಎಸ್ ಆಧರಿತ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಇ ಟಿಸಿ) ವ್ಯವಸ್ಥೆಯನ್ನು ಜಾರಿಗೆ ತರಲು ಯೋಜಿಸಿದೆ. ಆರಂಭದಲ್ಲಿ ಆರ್‌ಎಫ್‌ಐಡಿ (ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್) ಆಧರಿತ ಇಟಿಸಿ ಮತ್ತು ಜಿಎನ್‌ಎಸ್‌ಎಸ್ ಆಧರಿತ ಇಟಿಸಿ ಇವೆರಡರ ಹೈಬ್ರಿಡ್ ಮಾದರಿಯನ್ನು ಬಳಸಲಾಗುತ್ತದೆ. ಇವೆರಡೂ ಏಕಕಾಲದಲ್ಲಿ ಕಾರ್ಯನಿರ್ವಹಿಸುತ್ತವೆ. ಆರಂಭದಲ್ಲಿ ವಾಣಿಜ್ಯ ವಾಹನಗಳು, ಆನಂತರ ಖಾಸಗಿ ವಾಹನಗಳಲ್ಲಿ ಇದನ್ನು ಬಳಸುವ ಉದ್ಧೇಶವಿದೆ.
ಚಾಲಕರ ವರ್ತನೆ ಮತ್ತು ದತ್ತಾಂಶ ವಿಶ್ಲೇಷಣೆ: ಹೆದ್ದಾರಿ ಪ್ರಾಧಿಕಾರವು ಚಾಲಕರ ವರ್ತನೆ ಮತ್ತು ವಂಚನೆ ಪತ್ತೆಗೆ ದತ್ತಾಂಶದ ವಿಶ್ಲೇಷಣೆಯನ್ನು ಶಿಫಾರಸು ಮಾಡಿದೆ. ʻಜಿಎನ್‌ಎಸ್‌ಎಸ್ ನಿಂದ ಪಾವತಿ ವಿಧಾನವನ್ನು ಪ್ರಿಪೇಯ್ಡ್‌ನಿಂದ ಪೋಸ್ಟ್‌ಪೇಯ್ಡ್‌ಗೆ ಪರಿವರ್ತಿಸಬಹುದು. ಇದರಿಂದ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಪ್ರಯಾಣದ ಯೋಜನೆಗಳನ್ನು ಆಧರಿಸಿ, ಶೀಘ್ರವಾಗಿ ಸೇವೆ ಒದಗಿಸಲು ಸಾಧ್ಯವಾಗುತ್ತದೆʼ ಎಂದು ಪ್ರಾಧಿಕಾರ ಶಿಫಾರಸು ಮಾಡಿದೆ.