ಹೇಮಾ ಸಮಿತಿ ವರದಿ | AMMA ಅಧ್ಯಕ್ಷ ಸ್ಥಾನಕ್ಕೆ ಮೋಹನ್ ಲಾಲ್ ರಾಜೀನಾಮೆ

AMMA ಕಾರ್ಯಕಾರಿ ಸಮಿತಿಯನ್ನು ಕೂಡ ವಿಸರ್ಜಿಸಲಾಗಿದೆ.;

Update: 2024-08-27 09:55 GMT

ಹೇಮಾ ಸಮಿತಿ ವರದಿಯಿಂದ ಮಲಯಾಳಂ ಚಿತ್ರರಂಗದಲ್ಲಿ ಸೃಷ್ಟಿಯಾಗಿರುವ ಅಲ್ಲೋಲಕಲ್ಲೋಲದ ನಡುವೆಯೇ ನಟ ಮೋಹನ್ ಲಾಲ್ ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (ಅಮ್ಮ)ದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಸಂಘದ ಕಾರ್ಯಕಾರಿ ಸಮಿತಿಯನ್ನು ಕೂಡ ವಿಸರ್ಜಿಸಲಾಗಿದ್ದು, 500 ಸದಸ್ಯರಿರುವ ಸಂಘ ಬಿಕ್ಕಟ್ಟಿನಲ್ಲಿ ಮುಳುಗಿದೆ. ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ಧಿಕ್ ಕೂಡ ರಾಜೀನಾಮೆ ನೀಡಿದ್ದಾರೆ.

ʻಹೇಮಾ ಸಮಿತಿ ವರದಿಯು ಸಂಘದ ಕೆಲವು ಪದಾಧಿಕಾರಿಗಳ ಮೇಲಿನ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ತನ್ನ ನೈತಿಕ ಹೊಣೆಗಾರಿಕೆಯನ್ನು ಎತ್ತಿಹಿಡಿಯಲು ಸಂಘದ ಆಡಳಿತ ಮಂಡಳಿ ರಾಜೀನಾಮೆ ನೀಡುತ್ತಿದೆ. ಹೊಸ ಆಡಳಿತ ಮಂಡಳಿಯ ಆಯ್ಕೆಗೆ ಎರಡು ತಿಂಗಳೊಳಗೆ ಸಾಮಾನ್ಯ ಸಭೆಯನ್ನು ಕರೆಯಲಾಗುವುದು. ಹಾಲಿ ಸಮಿತಿಯು ಸದಸ್ಯರಿಗೆ ಮಾಸಿಕ ಹಣಕಾಸಿನ ನೆರವು ಮತ್ತು ವೈದ್ಯಕೀಯ ನೆರವಿನ ವಿತರಣೆಯನ್ನು ನಿರ್ವಹಿಸಲಿದೆ. ಹೊಸ ನಾಯಕತ್ವವು ಸಂಘವನ್ನು ಪುನಃಶ್ಚೇತನಗೊಳಿಸುತ್ತದೆ ಮತ್ತು ಬಲಪಡಿಸುತ್ತದೆ ಎಂದು ಭಾವಿಸಿದ್ದೇವೆ,ʼ ಎಂದು ಸಂಘದ ಹೇಳಿಕೆ ತಿಳಿಸಿದೆ.

Tags:    

Similar News