Haryana polls: ಕಾಂಗ್ರೆಸ್ 9 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Update: 2024-09-09 06:11 GMT

ಹರ್ಯಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಇನ್ನೂ ಒಂಬತ್ತು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಉಚ್ಚಾನ ಕಲಾನ್‌ನಿಂದ ಬ್ರಿಜೇಂದ್ರ ಸಿಂಗ್ ಮತ್ತು ಗುರುಗ್ರಾಮದಿಂದ ಮೋಹಿತ್ ಗ್ರೋವರ್ ಅವರನ್ನು ಕಣಕ್ಕಿಳಿಸಿದೆ. 

90 ಸದಸ್ಯ ಬಲದ ವಿಧಾನಸಭೆಗೆ ಚುನಾವಣೆಗೆ ಕಾಂಗ್ರೆಸ್ ಇದುವರೆಗೆ 41 ಅಭ್ಯರ್ಥಿಗಳನ್ನು ಘೋಷಿಸಿದೆ. ತೋಷಮ್‌ನಿಂದ ಅನಿರುದ್ಧ ಚೌಧರಿ, ಥಾನೇಸರ್‌ನಿಂದ ಅಶೋಕ್ ಅರೋರಾ, ಗನೌರ್‌ನಿಂದ ಕುಲದೀಪ್ ಶರ್ಮಾ,  ತೋಹಾನಾ ದಿಂದ ಪರಮವೀರ್ ಸಿಂಗ್, ಮೆಹಮ್‌ನಿಂದ ಬಲರಾಮ್ ಡಾಂಗಿ, ನಂಗಲ್ ಚೌಧರಿಯಿಂದ ಮಂಜು ಚೌಧರಿ ಮತ್ತು ಬಾದ್‌ಶಾಪುರದಿಂದ ವರ್ಧನ್ ಯಾದವ್ ಅವರನ್ನು ಕಣಕ್ಕಿಳಿಸಿದೆ.

ಮೊಮ್ಮಕ್ಕಳ ಮುಖಾಮುಖಿ: ಹರ್ಯಾಣದ ಮಾಜಿ ಮುಖ್ಯಮಂತ್ರಿ ದಿವಂಗತ ಬನ್ಸಿ ಲಾಲ್ ಅವರ ಇಬ್ಬರು ಮೊಮ್ಮಕ್ಕಳ ನಡುವಿನ ಕದನಕ್ಕೆ ತೋಷಮ್ ಕ್ಷೇತ್ರ ಸಾಕ್ಷಿಯಾಗಲಿದೆ. ಬನ್ಸಿಲಾಲ್ ಅವರ ಮೊಮ್ಮಗ, ಕ್ರಿಕೆಟ್ ಆಡಳಿತಗಾರ-ರಾಜಕಾರಣಿ ಅನಿರುದ್ಧ್ ಚೌಧರಿ ಅವರು ತಮ್ಮ ಸೋದರಸಂಬಂಧಿ ಮಾಜಿ ಸಂಸದೆ ಬಿಜೆಪಿಯ ಶ್ರುತಿ ಚೌಧರಿ ಅವರೊಂದಿಗೆ ಸೆಣೆಸಲಿದ್ದಾರೆ. 

ಶ್ರುತಿ ಚೌಧರಿ ಬಿಜೆಪಿ ನಾಯಕ ಕಿರಣ್ ಚೌಧರಿ ಮತ್ತು ಬನ್ಸಿ ಲಾಲ್ ಅವರ ಪುತ್ರ ದಿವಂಗತ ಸುರೇಂದರ್ ಸಿಂಗ್ ಅವರ ಪುತ್ರಿ. ಅನಿರುದ್ಧ ಚೌಧರಿ ಅವರು ರಣಬೀರ್ ಸಿಂಗ್ ಮಹೇಂದ್ರ ಅವರ ಮಗ. ಮಹೇಂದ್ರ ಮತ್ತು ಸುರೇಂದರ್ ಸಿಂಗ್ ಸಹೋದರರು. 

ಮಾಜಿ ಸಂಸದ ಬ್ರಿಜೇಂದ್ರ ಸಿಂಗ್ ಅವರು ಮಾಜಿ ಕೇಂದ್ರ ಸಚಿವ ಬಿರೇಂದರ್ ಸಿಂಗ್ ಅವರ ಪುತ್ರ. ಮಾಜಿ ಉಪ ಮುಖ್ಯಮಂತ್ರಿ ಮತ್ತು ಜೆಜೆಪಿ ಶಾಸಕ ದುಶ್ಯಂತ್ ಚೌಟಾಲಾ ಅವರನ್ನು ಜಿಂದ್ ಜಿಲ್ಲೆಯ ಉಚ್ಚಾನ ಕಲಾನ್‌ನಲ್ಲಿ ಎದುರಿಸಲಿದ್ದಾರೆ.

ಇತರ ಪ್ರಮುಖ ಮುಖಗಳು: ಮಾಜಿ ಸಚಿವ ಪರಮವೀರ್ ಸಿಂಗ್, ಡಾಂಗಿ ಪಕ್ಷದ ಹಿರಿಯ ನಾಯಕ ಆನಂದ್ ಸಿಂಗ್ ಡಾಂಗಿ ಅವರ ಪುತ್ರ ಮತ್ತು ಮಾಜಿ ಅಸೆಂಬ್ಲಿ ಸ್ಪೀಕರ್ ಶರ್ಮಾ ಪಟ್ಟಿಯಲ್ಲಿರುವ ಇತರ ಪ್ರಮುಖರು. ಶುಕ್ರವಾರದ 32 ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಗರ್ಹಿ ಸಂಪ್ಲಾ-ಕಿಲೋಯ್‌, ರಾಜ್ಯ ಘಟಕದ ಮುಖ್ಯಸ್ಥ ಉದಯ್ ಭಾನ್ ಹೊಡಾಲ್‌ ಮತ್ತು ಕುಸ್ತಿಪಟು ವಿನೇಶ್ ಫೋಗಟ್ ಜೂಲಾನಾದಿಂದ ಕಣಕ್ಕಿಳಿದಿದ್ದಾರೆ.

ಇಸ್ರಾನಾ (ಪರಿಶಿಷ್ಟ ಜಾತಿಗೆ ಮೀಸಲು) ಕ್ಷೇತ್ರದಿಂದ ಹಾಲಿ ಶಾಸಕ ಬಲ್ಬೀರ್ ಸಿಂಗ್ ಅವರು ಕಣಕ್ಕೆ ಇಳಿಯಲಿದ್ದಾರೆ.

28 ಶಾಸಕರು ಮರುನಾಮಕರಣ: ಪಕ್ಷವು ಎಲ್ಲಾ 28 ಶಾಸಕರನ್ನು ಮರುನಾಮಕರಣ ಮಾಡಿದೆ. ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರ ವಿರುದ್ಧ ಲಾಡ್ವಾದಿಂದ ಮೇವಾ ಸಿಂಗ್ ಅವರನ್ನು ಕಣಕ್ಕಿಳಿಸಿದೆ.

ಹರಿಯಾಣದಲ್ಲಿ ಅಕ್ಟೋಬರ್ 5 ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.

Tags:    

Similar News