ಮಾಲಿನ್ಯದಿಂದಾಗಿ ದೆಹಲಿಗೆ ಭೇಟಿ ನೀಡಲು ಬಯಸುವುದಿಲ್ಲ: ಕೇಂದ್ರ ಸಚಿವ ಗಡ್ಕರಿ

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, "ನಾನು ಇಲ್ಲಿ ವಾಸಿಸಲು ಇಷ್ಟಪಡುವುದಿಲ್ಲ. ಇಲ್ಲಿನ ಮಾಲಿನ್ಯದಿಂದಾಗಿ ನನಗೆ ಸೋಂಕು ತಗುಲುತ್ತದೆ", ಎಂದು ಹೇಳಿದ್ದಾರೆ.

Update: 2024-12-04 03:02 GMT
Nitin Gadkari

ದಿಲ್ಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟದಿಂದ ಅಸಮಾಧಾನಗೊಂಡಿರುವ ನಾಗ್ಪುರದ ಸಂಸದರೂ ಆಗಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಾವು ರಾಷ್ಟ್ರ ರಾಜಧಾನಿಗೆ ಹೋಗಲು ಇಷ್ಟಪಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಡೆಲ್ಲಿ ಹೋದರೆ ನಾನಾ ಸೋಂಕು ತಗುಲುವುದರಿಂದ ರಾಷ್ಟ್ರ ರಾಜಧಾನಿಗೆ ಭೇಟಿ ನೀಡಲು ಬಯಸುವುದಿಲ್ಲ ಎಂದು ಮಂಗಳವಾರ ಒಪ್ಪಿಕೊಂಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, "ನಾನು ಇಲ್ಲಿ ವಾಸಿಸಲು ಇಷ್ಟಪಡುವುದಿಲ್ಲ. ಇಲ್ಲಿನ ಮಾಲಿನ್ಯದಿಂದಾಗಿ ನನಗೆ ಸೋಂಕು ತಗುಲುತ್ತದೆ", ಎಂದು ಹೇಳಿದ್ದಾರೆ.

"ಪ್ರತಿ ಬಾರಿ, ದೆಹಲಿಗೆ ಬರುವಾಗ, ಮಾಲಿನ್ಯದ ಮಟ್ಟವು ತುಂಬಾ ಹೆಚ್ಚಾಗಿರುವುದರಿಂದ ನಾನು ಹೋಗಬೇಕೇ ಅಥವಾ ಬೇಡವೇ ಎಂದು ನಾನು ಯೋಚಿಸುತ್ತೇನೆ" ಎಂದು ಅವರು ಹೇಳಿದರು.

ಮಾಲಿನ್ಯವನ್ನು ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ಪೆಟ್ರೋಲ್​ನಂಥ ಇಂಧನಗಳ ಬಳಕೆ ಕಡಿಮೆ ಮಾಡುವುದು ಎಂದು ಗಡ್ಕರಿ ಸಲಹೆ ನೀಡಿದರು.

ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಬೆಳಿಗ್ಗೆ 274 ರಷ್ಟಿದ್ದು, ಮಂಗಳವಾರ ಸ್ವಲ್ಪ ಸುಧಾರಿಸಿದೆ. ನವೆಂಬರ್​ಗೆ ಹೋಲಿಸಿದರೆ ಡಿಸೆಂಬರ್ ಆರಂಭವು ದೆಹಲಿ ಜನರಿಗೆ ಉಸಿರಾಡಲು ಸ್ವಲ್ಪ ಉತ್ತಮ ಗಾಳಿ ಸಿಗುತ್ತಿವೆ.

ಭಾರತವು 22 ಲಕ್ಷ ಕೋಟಿ ರೂ.ಗಳ ಪೆಟ್ರೋಲಿಯಂ ಇಂಧನಗಳನ್ನು ಆಮದು ಮಾಡಿಕೊಳ್ಳುತ್ತದೆ. ಇದು ಆರ್ಥಿಕತೆ, ಪರಿಸರ ಮತ್ತು ಜೀವಿಶಾಸ್ತ್ರದ ದೃಷ್ಟಿಯಿಂದ ಸವಾಲು ಎಂದು ಗಡ್ಕರಿ ಗಮನಿಸಿದರು.

"ಪರ್ಯಾಯ ಇಂಧನಗಳನ್ನು ಉತ್ತೇಜಿಸುವ ಮೂಲಕ ನಾವು ಪೆಟ್ರೋಲಿಂ ಇಂಧನಗಳ ಆಮದನ್ನು ಕಡಿಮೆ ಮಾಡಬಹುದು" ಎಂದು ಅವರು ಹೇಳಿದರು. ಭಾರತ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ ಬಡತನ, ಹಸಿವು ಮತ್ತು ನಿರುದ್ಯೋಗ, ಆದ್ದರಿಂದ ಮುಂಬರುವ ದಿನಗಳಲ್ಲಿ, ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯನ್ನು ಸಾಧಿಸಲು ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ಗಡ್ಕರಿ ಹೇಳಿದರು.  

Tags:    

Similar News