Kolkota rape-murder: ಕೋಲ್ಕತ್ತಾಕ್ಕೆ ಆಗಮಿಸಿದ ಸಿಬಿಐ ತಂಡ

ಕಲ್ಕತ್ತಾ ಹೈಕೋರ್ಟ್‌ ತನಿಖೆಯನ್ನು ಕೇಂದ್ರ ತನಿಖಾ ಏಜೆನ್ಸಿಗೆ ವರ್ಗಾಯಿಸಲು ಮಂಗಳವಾರ ಆದೇಶಿಸಿತ್ತು.ಸಿಬಿಐ ತಂಡ ದಾಖಲೆಗಳನ್ನು ಸಂಗ್ರಹಿಸಿ, ತನಿಖೆ ಆರಂಭಿಸಿದೆ.

Update: 2024-08-14 06:10 GMT

ಪಶ್ಚಿಮ ಬಂಗಾಳದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಗಾಗಿ ಸಿಬಿಐ ತಂಡ ಬುಧವಾರ (ಆಗಸ್ಟ್ 14) ಬೆಳಗ್ಗೆ ಕೋಲ್ಕತ್ತಾ ತಲುಪಿದೆ.

ಸಿಬಿಐ ತಂಡ ವೈದ್ಯಕೀಯ ಮತ್ತು ಫೋರೆನ್ಸಿಕ್ ತಜ್ಞರನ್ನು ಒಳಗೊಂಡಿದ್ದು, ಆಗಸ್ಟ್ 9 ರಂದು ತರಬೇತಿ ವೈದ್ಯೆಯ ಶವ ಪತ್ತೆಯಾದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ಗೆ ಭೇಟಿ ನೀಡಲಿದೆ. 

ಕಲ್ಕತ್ತಾ ಹೈಕೋರ್ಟ್ ಮಂಗಳವಾರ ತನಿಖೆಯನ್ನು ಕೋಲ್ಕತ್ತಾ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಲು ಆದೇಶಿಸಿತು. ವೈದ್ಯೆ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿದೆ ಎಂದು ವರದಿಯಾಗಿದೆ. 

ʻಇಂದು ಸಿಬಿಐ ಅಧಿಕಾರಿಗಳು ಹತ್ಯೆಗೀಡಾದ ವೈದ್ಯೆ ಮತ್ತು ಆ ದಿನ ಕರ್ತವ್ಯದಲ್ಲಿದ್ದವರ ಕರೆ ವಿವರಗಳನ್ನು ಪಡೆಯುತ್ತಾರೆ. ಅವರು ಸ್ಥಳೀಯ ನ್ಯಾಯಾಲಯದಲ್ಲಿ ಎಫ್‌ಐಆರ್ ಸಲ್ಲಿಸಬಹುದು. ಕೋಲ್ಕತ್ತಾ ಪೊಲೀಸರು ಬಂಧಿಸಿರುವ ಸಂಜಯ್ ರಾಯ್ ಅವರನ್ನು ಸಿಬಿಐ ತನ್ನ ಕಸ್ಟಡಿಗೆ ತೆಗೆದುಕೊಳ್ಳಬಹುದು,ʼ ಎಂದು ಅವರು ಹೇಳಿದರು. 

ಮಂಗಳವಾರ ಸಂಜೆ ಇಬ್ಬರು ಸಿಬಿಐ ಅಧಿಕಾರಿಗಳು ಇಲ್ಲಿನ ತಾಲಾ ಪೊಲೀಸ್ ಠಾಣೆಗೆ ತೆರಳಿ ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ತೆಗೆದುಕೊಂಡಿದ್ದಾರೆ. 

Tags:    

Similar News