Delhi Air Pollution: ಅತ್ಯಂತ ಕಳಪೆ ಮಟ್ಟಕ್ಕೆ ಇಳಿದ ದೆಹಲಿ ಗಾಳಿಯ ಗುಣಮಟ್ಟ

ರಾಷ್ಟ್ರದ ರಾಜ್ಯಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ನಿರಂತರವಾಗಿ ಕ್ಷೀಣಿಸುತ್ತಿದೆ. ಬುಧವಾರ (ಅಕ್ಟೋಬರ್ 23) ವಾಯುಗುಣಮಟ್ಟದ ಸೂಚ್ಯಾಂಕವು (AQI)363 ರ ಅತ್ಯಂತ ಕಳಪೆ ಮಟ್ಟಕ್ಕೆ ಇಳಿದಿದೆ.

Update: 2024-10-23 12:05 GMT
ದೆಹಲಿಯು ದಟ್ಟವಾದ ಹೊಗೆಯಿಂದ ಆವೃತವಾಗಿತ್ತು.
Click the Play button to listen to article

ರಾಷ್ಟ್ರದ  ರಾಜ್ಯಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ನಿರಂತರವಾಗಿ ಕ್ಷೀಣಿಸುತ್ತಿದೆ. ಬುಧವಾರ (ಅಕ್ಟೋಬರ್ 23) ವಾಯುಗುಣಮಟ್ಟದ ಸೂಚ್ಯಾಂಕವು (AQI)363 ರ ಅತ್ಯಂತ ಕಳಪೆ ಮಟ್ಟಕ್ಕೆ ಇಳಿದಿದೆ. 

ದೆಹಲಿಯಲ್ಲಿ ದಪ್ಪನೆಯ ಹೊಗೆ ಆವರಿಸಿಕೊಂಡಿದ್ದು, ಜಹಾಂಗೀರ್ಪುರಿಯಲ್ಲಿನ  ೪೧೮, ವಿವೇಕ್ ವಿಹಾರ್‌ನಲ್ಲಿ 407 ಮತ್ತು ಆನಂದ್ ವಿಹಾರ್‌ನಲ್ಲಿ 402 ವಾಯುಮಟ್ಟದ ಸೂಚ್ಯಾಂಕ ಇದೆ ಎನ್ನಲಾಗಿದೆ. 

ವಾಯು ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅತ್ಯಂತ ಕಳಪೆ ವಾಯು ಗುಣಮಟ್ಟ ಸೂಚ್ಯಂಕ ಮುಂದುವರಿದರೆ ಶಾಲೆಗಳಿಗೆ ರಜೆ ನೀಡುವುದರ ಬಗ್ಗೆಯೂ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆದಿದೆ ಎಂದು ವರದಿಯಾಗಿದೆ.

Tags:    

Similar News