Delhi Election 2024: ಎಎಪಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ; ಸಿಸೋಡಿಯಾ ಜಂಗ್ಪುರ ಕ್ಷೇತ್ರಕ್ಕೆ ಸ್ಥಳಾಂತರ
Delhi Election 2024: ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಯಾದ ಶಿಕ್ಷಕ ಅವಧ್ ಓಜಾ ಅವರಿಗೆ ಅವಕಾಶ ಮಾಡಿಕೊಡಲು ಪಟ್ಪರ್ಗಂಜ್ ಕ್ಷೇತ್ರದ ಪ್ರಸ್ತುತ ಶಾಸಕ ಸಿಸೋಡಿಯಾ ಅವರನ್ನು ಜಂಗ್ಪುರಕ್ಕೆ ಬದಲಾಯಿಸಲಾಗಿದೆ.;
ದೆಹಲಿ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ (ಎಎಪಿ) ಸೋಮವಾರ (ಡಿಸೆಂಬರ್ 9ರಂದು) 20 ಅಭ್ಯರ್ಥಿಗಳಿರುವ ತನ್ನ ಎರಡನೇ ಪಟ್ಟಿ ಪ್ರಕಟಿಸಿದ್ದು ಪಕ್ಷದ ಹಿರಿಯ ಮುಖಂಡ ಮನೀಶ್ ಸಿಸೋಡಿಯಾ ಅವರನ್ನು ಜಂಗ್ಪುರ ಸ್ಥಾನದಿಂದ ಕಣಕ್ಕಿಳಿಸಿದೆ.
ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಯಾದ ಶಿಕ್ಷಕ ಅವಧ್ ಓಜಾ ಅವರಿಗೆ ಅವಕಾಶ ಮಾಡಿಕೊಡಲು ಪಟ್ಪರ್ಗಂಜ್ ಕ್ಷೇತ್ರದ ಪ್ರಸ್ತುತ ಶಾಸಕ ಸಿಸೋಡಿಯಾ ಅವರನ್ನು ಜಂಗ್ಪುರಕ್ಕೆ ಬದಲಾಯಿಸಲಾಗಿದೆ.
ಎಎಪಿ ಮೊದಲ ಬಾರಿಗೆ 2013ರಲ್ಲಿ ಜಂಗ್ಪುರ ಸ್ಥಾನ ಗೆದ್ದಿತು ಮತ್ತು ಇಲ್ಲಿಯವರೆಗೆ ಅದನ್ನು ಉಳಿಸಿಕೊಂಡಿದೆ. ಈ ಸ್ಥಾನದಿಂದ ಗೆಲ್ಲುತ್ತಿದ್ದ ಮಾಜಿ ದೆಹಲಿ ವಿಧಾನಸಭಾ ಸ್ಪೀಕರ್ ಮಣಿಂದರ್ ಸಿಂಗ್ ಧೀರ್ ಬಿಜೆಪಿಗೆ ಸ್ಥಳಾಂತರಗೊಂಡ ನಂತರ, ಎಎಪಿ 2015 ಮತ್ತು 2020 ರ ಚುನಾವಣೆಯಲ್ಲಿ ಗೆದ್ದ ಪ್ರವೀಣ್ ಕುಮಾರ್ ಅವರಿಗೆ ಟಿಕೆಟ್ ನೀಡಿತು. ಮದ್ಯ ನೀತಿ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಸಿಸೋಡಿಯಾ, ಜನರು ನನ್ನನ್ನು ಆಯ್ಕೆ ಮಾಡಿದರೆ ಮಾತ್ರ ಸರ್ಕಾರದ ಭಾಗವಾಗುವೆ ಎಂದು ಹೇಳಿದ್ದಾರೆ.
ಕಣದಲ್ಲಿರುವ ಇತರರು
ಪಟ್ಟಿಯಲ್ಲಿ ಜಿಂದೇಂದರ್ ಸಿಂಗ್ ಶಂಟಿ (ಶಹದಾರಾದಿಂದ ಕಣಕ್ಕಿಳಿಸಲಾಗಿದೆ) ಮತ್ತು ಸುರಿಂದರ್ ಪಾಲ್ ಸಿಂಗ್ ಬಿಟ್ಟು (ತಿಮಾರ್ಪುರ್) ಅವರ ಹೆಸರುಗಳು ಸೇರಿವೆ.
ನಿರ್ಗಮನ ವಿಧಾನಸಭೆಯಲ್ಲಿ ಹಾಲಿ ಎಎಪಿ ಶಾಸಕ ಮತ್ತು ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಅವರ ಸ್ಥಾನಕ್ಕೆ ಶಂಟಿ ಅವರನ್ನು ನೇಮಿಸಲಾಗಿದ್ದು, ಸದನದಲ್ಲಿ ಎಎಪಿಯ ಮುಖ್ಯ ಸಚೇತಕ ದಿಲೀಪ್ ಪಾಂಡೆ ಅವರ ಬದಲಿಗೆ ಬಿಟ್ಟು ಅವರನ್ನು ಕಣಕ್ಕಿಳಿಸಲಾಗಿದೆ.
ಕಳೆದ ತಿಂಗಳು ಬಿಡುಗಡೆಗೊಳಿಸಿದ ತನ್ನ ಮೊದಲ ಪಟ್ಟಿಯಲ್ಲಿ 11 ಅಭ್ಯರ್ಥಿಗಳನ್ನು ಎಎಪಿ ಘೋಷಿಸಿತ್ತು. ಉಳಿದ 39 ಸ್ಥಾನಗಳಿಗೆ ಪಕ್ಷವು ಇನ್ನೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ.
70 ಸದಸ್ಯರ ದೆಹಲಿ ವಿಧಾನಸಭೆಗೆ ಫೆಬ್ರವರಿ ಮೊದಲು ಚುನಾವಣೆ ನಡೆಯಲಿದೆ.