ದೆಹಲಿ ಸಚಿವ, ಎಎಪಿ ನಾಯಕ ಕೈಲಾಶ್ ಗೆಹ್ಲೋಟ್ ಏಕಾಏಕಿ ರಾಜೀನಾಮೆ
ಶೀಶ್‌ಮಹಲ್ ಘಟನೆಯಂತಹ ಮುಜುಗರದ ವಿವಾದಗಳಿಂದಾಗಿ ದೆಹಲಿ ಸಚಿವ ಮತ್ತು ಎಎಪಿ ಮುಖಂಡ ಕೈಲಾಶ್ ಗೆಹ್ಲೋಟ್ ನವೆಂಬರ್ 17 ರಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಆತಿಶಿ ನೇತೃತ್ವದ ದೆಹಲಿ ಸರ್ಕಾರದ ಸಚಿವ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ಕೈಲಾಶ್ ಗೆಹ್ಲೋಟ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಶೀಶ್‌ಮಹಲ್ ಘಟನೆಯಂತಹ "ಮುಜುಗರದ ವಿವಾದಗಳು" ತಮ್ಮ ರಾಜೀನಾಮೆಗೆ ಕಾರಣ ಎಂದು ಅವರು ತಮ್ಮ ರಾಜೀನಾಮೆಗೆ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ.
ಅವರು ಗವರ್ನ್‌ಮೆಂಟ್ ಆಫ್ ನ್ಯಾಷನಲ್ ಕ್ಯಾಪಿಟಲ್ಸ್ ಡೆಲ್ಲಿ (GNCTD) ಸಂಪುಟಕ್ಕೂ ರಾಜೀನಾಮೆ ನೀಡಿದ್ದಾರೆ. ಗೆಹ್ಲೋಟ್ ದೆಹಲಿಯ ಸಾರಿಗೆ ಮತ್ತು ಪರಿಸರ ಸಚಿವರಾಗಿದ್ದರು ಮತ್ತು ನವದೆಹಲಿಯ ನಜಾಫ್‌ಗಡ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಗೆಹ್ಲೋಟ್ ತಮ್ಮ ರಾಜೀನಾಮೆ ಪತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎಎಪಿ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ, ಪಕ್ಷವು ಒಳಗಿನಿಂದ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. "ರಾಜಕೀಯ ಮಹತ್ವಾಕಾಂಕ್ಷೆ"ಯೇ ಜನರ ಬದ್ಧತೆಗಿಂತ ಮುಖ್ಯವಾಗುತ್ತಿದೆ. ನಾಗರಿಕರ ಅನೇಕ ಭರವಸೆಗಳನ್ನು ಈಡೇರಿಸಲಾಗಿಲ್ಲ . ಯಮುನಾ ನದಿಯನ್ನು ಸ್ವಚ್ಛಗೊಳಿಸುವ ಸರ್ಕಾರದ ಭರವಸೆಯ ಉದಾಹರಣೆ ಅವರು ನೀಡಿದರು, ಆ ಕೆಲಸ ಮಾಡಿಲ್ಲ ಮತ್ತು ಇನ್ನಷ್ಟು ಕಲುಷಿತಗೊಂಡಿದೆ ಎಂದು ಹೇಳಿಕೆ ನೀಡಿದ್ದಾರೆ.
ಶೀಶ್‌ಮಹಲ್‌ನಂತಹ ಅನೇಕ "ಮುಜುಗರದ' ವಿವಾದಗಳಿವೆ. ಹೀಗಾಗಿ ನಾವು ಇನ್ನೂ ʼಜನರ ಪಕ್ಷʼ ಎಂಬುದನ್ನು ಜನರು ನಂಬುವುದಿಲ್ಲ. ಅವರು ನಮ್ಮನ್ನು ಅವಮಾನದಿಂದ ನೋಡುತ್ತಾರೆ ಎಂದು ಅವರು ತಮ್ಮ ಪತ್ರದಲ್ಲಿ ಬರೆದುಕೊಂಡಿದ್ದಾರೆ.
ಜನರ ಹಕ್ಕುಗಳಿಗಾಗಿ ಹೋರಾಡುವ ಬದಲು, ನಾವು ಹೆಚ್ಚೆಚ್ಚು "ನಮ್ಮ ಸ್ವಂತ ರಾಜಕೀಯ ಕಾರ್ಯಸೂಚಿಗಾಗಿ ಹೋರಾಡುತ್ತಿದ್ದೇವೆ" ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ. ಇದು ದೆಹಲಿಯ ಜನರಿಗೆ ಮೂಲಭೂತ ಸೇವೆ ನೀಡುವ ನಮ್ಮ ಸಾಮರ್ಥ್ಯವನ್ನು ದುರ್ಬಲಗೊಳಿಸಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಜತೆ ಗುದ್ದಾಟ
ದೆಹಲಿ ಸರ್ಕಾರವು ಹೆಚ್ಚಿನ ಸಮಯವನ್ನು ಕೇಂದ್ರದೊಂದಿಗೆ ಗುದ್ದಾಡಲು ವ್ಯಯಿಸಿದೆ. ಹೀಗಾಗಿ ದೆಹಲಿಯ ಪ್ರಗತಿ ಸಾಧ್ಯವಿಲ್ಲ ಎಂದು ಅವರು ಬರೆದಿದ್ದಾರೆ. .
50 ವರ್ಷದ ಗೆಹ್ಲೋಟ್ ಜಾಟ್ ಸಮುದಾದಯ ನಾಯಕನಾಗಿದ್ದು, ದೆಹಲಿಯ ಮಿತ್ರಾನ್ ಗ್ರಾಮದವರಾಗಿದ್ದಾರೆ. 2015 ರ ವಿಧಾನಸಭಾ ಚುನಾವಣೆಗೆ ಮೊದಲು ಅವರು ಎಎಪಿಗೆ ಸೇರಿದ್ದರು. ನಜಾಫ್ಗಢ ಸ್ಥಾನವನ್ನು 1,550 ಮತಗಳ ಅಂತರದಿಂದ ಗೆದ್ದರು. ಅವರು 2020 ರಲ್ಲಿ ಮತ್ತೆ 6,000 ಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದರು.
ಅತಿಶಿ ಸರ್ಕಾರದ ಅಡಿಯಲ್ಲಿ ಸೆಪ್ಟೆಂಬರ್ 2024 ರಲ್ಲಿ ಅವರು ತಮ್ಮ ಸಚಿವಾಲಯದ ಉಸ್ತುವಾರಿ ವಹಿಸಿಕೊಂಡಾಗ ಅವರು ಭಗವಾನ್ ರಾಮನಿಗೆ 'ಹನುಮಾನ್' ಸೇವೆ ಮಾಡಿದಂತೆ ಮಾಡುತ್ತೇನೆ ಎಂದಿದ್ದರು. ಯಾಕೆಂದರೆ ಆ ವೇಳೆ ಕೇಜ್ರಿವಾಲ್ ಎಕ್ಸ್ ಪೋಸ್ಟ್‌ನಲ್ಲಿ 'ಹನುಮಾನ್' ಆಗುತ್ತೇನೆ ಎಂದು ಹೇಳಿಕೊಂಡಿದ್ದರು.
ಗೆಹ್ಲೋಟ್ ಅವರು ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್‌ನಲ್ಲಿ ನಿಪುಣ ವಕೀಲರಾಗಿದ್ದು, 16 ವರ್ಷಗಳ ಕಾನೂನು ಸೇವಾ ಅನುಭವ ಹೊಂದಿದ್ದಾರೆ.